ಕನ್ನಡ ವಿವಿಯ ಅಕ್ಷರ ಗ್ರಂಥಾಲಯದ ಮುಂದೆ ಯೋಗಾಭ್ಯಾಸ ನಡೆಸಿದರು. 
ಜಿಲ್ಲೆ

ಮನಸ್ಸಿಗೆ ಆತ್ಮದ ಅರಿವಿನ ಪಾಠ

ಮಂಜುನಾಥ

ಹೊಸಪೇಟೆ: ಆಧ್ಯಾತ್ಮ ಮತ್ತು ಯೋಗಾ ಎರಡಕ್ಕೂ ಬಹಳ ನಂಟಿದೆ. ದೇಹದಲ್ಲಿ ಆತ್ಮ ಸಂಗಮವಾಗಿದ್ದು, ಯೋಗದಿಂದ ಆತ್ಮಕ್ಕೆ ಪಾಠ ಮಾಡಬೇಕಿದೆ ಎಂದು ರಾಯಚೂರಿನ ಸುದ್ದಿ ಮೂಲ ಸಂಸ್ಥೆಯ ಶ್ರೀ ಬಸವರಾಜ ಸ್ವಾಮಿ ಹೇಳಿದರು.

ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಕನ್ನಡ ವಿಶ್ವವಿದ್ಯಾಲಯದ ಯೋಗ ಅಧ್ಯಯನ ಕೇಂದ್ರ ಹಾಗೂ ವಿಜಯವಾಣಿ ಸಹಯೋಗದಲ್ಲಿ ಅಕ್ಷರ ಗ್ರಂಥಾಲಯದ ಮುಂದೆ ಶುಕ್ರವಾರ ಮಹಿಳಾ ಸಬಲೀಕರಣಕ್ಕಾಗಿ ಯೋಗಭ್ಯಾಸ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯೋಗವನ್ನು ಜಗತ್ತಿಗೆ ಪರಿಚಯಿಸುವ ಮೂಲಕ ಭಾರತ ಗುರು ಸ್ಥಾನದಲ್ಲಿದೆ. ದೇಹ ಮತ್ತು ಮನಸ್ಸು ಆತ್ಮ ಈ ಮೂರು ಒಂದಾಗುವುದು ಕಠಿಣ. ಈ ಮೂರನ್ನು ಸೇರಿಸುವ ತಂತ್ರವೇ ಯೋಗ. ಮನಸ್ಸು ದೇಹದ ಮೂಲಕ ತಪ್ಪು ಮಾಡಿದಾಗ ಆತ್ಮ ಮನಸ್ಸನ್ನು ಸರಿದಾರಿಗೆ ತರುತ್ತದೆ.  ಬುದ್ಧನನ್ನು ಪಾಲಿಸಿ ನಾವು ಬೌದ್ಧರಾದೇವೆ ಹೊರತು ಸಂಬುದ್ಧರಾಗಲಿಲ್ಲ, ಮಹಾವೀರನನ್ನು ಪಾಲಿಸಿ ಜೈನರಾದವೇ ಹೊರತು ಜಿನರಾಗಲಿಲ್ಲ. ಯೋಗ ಚಿತ್ತ ನಿವೃತ್ತಿಯ ಮೆಟ್ಟಿಲಾಗಿದೆ. ಆದ್ದರಿಂದ ಯೋಗದಿಂದ ಮನಸ್ಸಿಗೆ ಆತ್ಮದ ಅರಿವಿನ ಪಾಠ ಮಾಡಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು..

ಕಾಮ, ಕ್ರೋಧ, ಲೋಪ, ಮದ ಮಾತ್ಸರ್ಯ ಎಲ್ಲಾದಕ್ಕೂ ಬಲಿಯಾಗುತ್ತೇವೆ. ದೃಶ್ಯ ದೇಹಕ್ಕೆ ಗಾಯ ಮಾಡುತ್ತಿದೆ. ಚಿತ್ತ ಹರಿಯುವ ಕಡೆಯಲ್ಲ ದೇಹ ಹಂಬಲಿಸುತ್ತದೆ. ಮನಸ್ಸು ಅಜ್ಞಾನದ ಸುಖದ ಕಡೆ ಅಂಟಿಸುತ್ತದೆ. ಎಂತಹದ್ದೇ ಪದವಿ ಇದ್ದರೂ ಮನಸ್ಸು ಆತ್ಮದ ಅರಿವು ಪಡೆಯದಿದ್ದರೆ ಅಪಾಯ ತಪ್ಪಿದ್ದಲ್ಲ. ಆದ್ದರಿಂದ ಚಿತ್ತ ನೀಡುತ್ತಿದೆ ಯೋಗ ಔಷದಿಯಾಗಿದೆ. ಅರಿವು ಶಿವ, ಮನಸೇ ಶಿವೆ ಜತೆ ಸೇರಬೇಕಿದೆ. ಯೋಗ ಪಡೆದವನು ಯೋಗಿಯಾಗುತ್ತಾನೆ. ಸಮಾಜದ ರೂಢಿಯಿಂದ ಮುಕ್ತನಾದವನು ಆರೂಢನಾಗುತ್ತಾನೆ  ಎಂದರು.

ಕುಲಪತಿ ಡಾ.ಪರಮಶಿವಮೂರ್ತಿ ಮಾತನಾಡಿ, ಲೌಕಿಕ ಬದುಕಿನ ಎಡರು ತೊಡರುಗಳನ್ನು ನಿವಾರಿಸಿ ಒಳ್ಳೆಯ ಬದುಕನ್ನು ನಡೆಸಲು ಮಾನಸಿಕ ಆರೋಗ್ಯ ತುಂಬಾ ಮುಖ್ಯ. ದೇಹ ಮತ್ತು ಚಿತ್ತ ಒಂದುಗೂಡಬೇಕೆಂದರೆ ಯೋಗ ಸಹಕಾರಿ. ವ್ಯಾಯಾಮದ ರೂಪದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಮಾಡುತ್ತಿದ್ದಾರೆ. ಇತ್ತ ದೇಹ ಒಂದಾಗಲು ಯೋಗ ಮೊದಲ ಹಂತ. ಎಲ್ಲಾ ಕಾರ್ಯಗಳಿಗೂ ಮೂಲ ಮನಸ್ಸು, ಇದನ್ನು ಸಹಕರಿಸುವುದು ದೇಹ. ಯೋಗ ವ್ಯಾಯಾಮದ ರೀತಿಯಲ್ಲಿ ಹಲವು ಆಯಾಮ ಪಡೆದುಕೊಳ್ಳುತ್ತಿದೆ.  ದೇಹದ ತಂತಿಯನ್ನು ಬಿಗಿಯಾಗಿ ಹಿಡಿದರೆ ಮನಸ್ಸಿನನಾದ ಸುಂದರವಾಗಿ ಕೇಳಿಸುತ್ತದೆ. ಯೋಗ ನಮ್ಮ ಮನಸ್ಸನ್ನು ಸದೃಢ ಮಾಡುವಲ್ಲಿ ಸಹಾಯವಾಗುತ್ತದೆ ಎಂದರು.

ವಿವಿಯ ಯೋಗ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಮಾಧವ ಪೆರಾಜೆ, ಭಾಷಾ ಅಧ್ಯಯನಂಗದ ಮುಖ್ಯಸ್ಥ ಎಫ್.ಟಿ.ಹಳ್ಳಿಕೇರಿ, ಅಧ್ಯಯನಾಂಗದ ನಿರ್ದೇಶಕ ಡಾ.ಅಮರೇಶ ಯತಗಲ್, ಮಹಿಳಾ ಅಧ್ಯಾಯನ ವಿಭಾಗದ ಪ್ರಾಧ್ಯಾಪಕ ಎರಿಸ್ವಾಮಿ, ಮುಖ್ಯ ಗ್ರಂಥಪಾಲಕ ಗುಡಿಮನಿ, ಯೋಗ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಪಿ ಸಿದ್ದರಾಮಯ್ಯ ಬೆಣ್ಣೆಕಲ್ಲು ಇದ್ದರು. ಯೋಗ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಕೃಷ್ಣನಾಯಕ, ವಿವಿ ವೈದ್ಯ ರಾಜರಾಜೇಶ್ವರಿ ಯೋಗಾಭ್ಯಾಸ ಮಾಡಿಸಿದರು.