ಜಿಲ್ಲೆ

ಡಾ.ಸಿದ್ದಲಿಂಗಯ್ಯ ಹೊಲೆಮಾದಿಗರ ಹಾಡು ಅಸಾಮಾನ್ಯ ಕಾವ್ಯ

ಮಂಜುನಾಥ

ಹೊಸಪೇಟೆ: ಡಾ.ಸಿದ್ದಲಿಂಗಯ್ಯ ಅವರ ಹೊಲೆಮಾದಿಗರ ಹಾಡು ಜನ ಸಾಮಾನ್ಯರ ಅಸಾಮಾನ್ಯ ಕಾವ್ಯ. ದಲಿತರ ಒಡಲಾಳದ ನೋವನ್ನು ಗ್ರಹಿಸಿ ರಚಿಸಿದ ಗೀತೆಯಿದು. ರಾಷ್ಟçಕ್ಕೆ ರಾಷ್ಟçಗೀತೆಯಂತೆ, ಈ ಹೊಲೆಮಾದಿಗರ ಹಾಡು ದಲಿತ ಸಮುದಾಯದ ಹೋರಾಟ ಗೀತೆಯಾಗಿ ಅವರನ್ನು ಎಚ್ಚರಗೊಳಿಸುವಲ್ಲಿ ಮಹತ್ತರ ಪಾತ್ರವಹಿಸಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರುಸ್ಕೃತ ಹಾಗೂ ಚಿಂತಕ ಸುಬ್ಬು ಹೊಲೆಯರ್ ಅಭಿಪ್ರಾಯಪಟ್ಟರು.

ಕನ್ನಡ ವಿವಿಯ ಮಂಟಪ ಸಭಾಂಗಣದಲ್ಲಿ ದಲಿತ ಸಂಸ್ಕೃತಿ ಅಧ್ಯಯನ ಪೀಠದಿಂದ ಬುಧವಾರ ಆಯೋಜಿಸಿದ್ದ ನಾಡೋಜ ಕವಿ ಡಾ.ಸಿದ್ದಲಿಂಗಯ್ಯ ಅವರ ಹೊಲೆಮಾದಿಗರ ಹಾಡು ಸಾಹಿತ್ಯ ಮತ್ತು ಸಾಮಾಜಿಕ ಪ್ರೇರಣೆ ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಡಾ.ಸಿದ್ದಲಿಂಗಯ್ಯನವರು ಶತಮಾನಗಳಿಂದ ಧರ್ಮ, ದೇವರು, ಜಾತಿ ಹೆಸರಿನಲ್ಲಿ ತುಳಿತಕ್ಕೊಳಗಾಗಿದ್ದ ದಲಿತ ಸಮುದಾಯವನ್ನು ಹೊಲೆಮಾದಿಗರ ಹಾಡು ಕವನ ಸಂಕಲನದ ಮೂಲಕ ಬಡಿದ್ದೆಬ್ಬಿಸುವ ಕೆಲಸವನ್ನು ಮಾಡಿದರು. ಬಂಡಾಯ ಸಾಹಿತ್ಯದ ಮೂಲಕ ಜನ ಸಾಮಾನ್ಯರ ಚರಿತ್ರೆಯನ್ನು ಕಟ್ಟುವ ಕೆಲಸ ಮಾಡಿದರು. ದಲಿತ ಹೋರಾಟದ ಮೂಲಕ ಇಡೀ ಸಮುದಾಯದ ಕಣ್ಣು ತೆರೆಸಿದರು. ಯುವ ಜನರು ಸಮಾಜದಲ್ಲಿ ಬೇರು ಬಿಟ್ಟಿರುವ ಸಾವಿರಾರು ಸಂಕೋಲೆಗಳಿAದ ಮುಕ್ತರಾಗಿ ಬದುಕಬೇಕು. ವೈಚಾರಿಕ ಚಿಂತನೆಯನ್ನು ಬೆಳಸಿಕೊಳ್ಳಬೇಕು. ದಲಿತರ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕ, ಅಹಿಂಸಾತ್ಮಕ ಹೋರಾಟಕ್ಕೆ ಸಿದ್ಧರಾಗಬೇಕು ಎಂದರು.

ಸಿದ್ದಲಿAಗಯ್ಯ ಅವರು ಪತ್ನಿ ರಮಾಕುಮಾರಿ ಮಾತನಾಡಿ, ಡಾ.ಸಿದ್ದಲಿಂಗಯ್ಯನವರು ನೊಂದವರನ್ನು, ಶೋಷಿತರನ್ನು ಎಚ್ಚರಿಸುವ ಮೂಲಕ ಸದಾ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಅವರು ನಮ್ಮ ಜತೆಯಿಲ್ಲದಿದ್ದರೂ ಅವರ ಪುಸ್ತಕಗಳ ಮೂಲಕ, ಕೆಲಸಗಳ ಮೂಲಕ ಜೀವಂತವಾಗಿದ್ದಾರೆ ಎಂದರು.

ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಸಿದ್ದಲಿಂಗಯ್ಯನವರು ಸಮಾಜಕ್ಕೆ ಮಾನವೀಯತೆಯನ್ನು ಹೇಳಿಕೊಟ್ಟ ಕವಿ. ಇಡೀ ದಲಿತ ಸಮುದಾಯಕ್ಕೆ ಘನತೆಯಿಂದ ಬದುಕಲು ಆತ್ಮಸ್ಥೆöÊರ್ಯವನ್ನು ತುಂಬಿದ ಚೇತನ. ಈ ಹಿನ್ನೆಲೆಯಲ್ಲಿ ಹೊಲೆಮಾದಿಗರ ಹಾಡು ಸಂಕಲನದ ಪ್ರಸ್ತುತತೆಯನ್ನು ಮುಂದಿನ ಪೀಳಿಗೆಗೆ ತಿಳಿಸುವುದು ಬಹುಮುಖ್ಯ ಎಂದರು. ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬAಡ, ವಿವಿಯ ಸಿಂಡಿಕೇಟ್ ಸದಸ್ಯ ಸೋಮಶೇಖರ್ ಬಣ್ಣದ ಮನೆ, ದಲಿತ ಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕ ಡಾ.ಚಿನ್ನಸ್ವಾಮಿ ಸೋಸಲೆ, ಪ್ರಾಧ್ಯಾಪಕ ಡಾ.ವಿರೂಪಾಕ್ಷಿ ಪೂಜಾರಹಳ್ಳಿ, ಪ.ಪೂ.ಕಾಲೇಜಿನ ಪ್ರಾಂಶುಪಾಲ ನಾಗರಾಜ ಪತ್ತಾರ ಇತರರಿದ್ದರು.