ಜಿಲ್ಲೆ

ರಾಮಾಯಣ ಇಲ್ಲದೇ ಇತಿಹಾಸ ಇರದು

ಮಂಜುನಾಥ

ಹೊಸಪೇಟೆ: ಭಾರತೀಯ ಪರಂಪರೆಯ ಮೊಟ್ಟ ಮೊದಲ ಕವಿ ವಾಲ್ಮೀಕಿ. ಅವರು ಬರೆದ ವಾಲ್ಮೀಕಿ ರಾಮಾಯಣವು ಕೇವಲ ಒಂದು ಜಾತಿಗೆ, ಸಮುದಾಯಯಕ್ಕೆ, ಒಬ್ಬ ವ್ಯಕ್ತಿಗೆ ಸೀಮಿತವಾಗಿಲ್ಲ. ಅವರ ತತ್ವಸಿದ್ದಾಂತ ಮನುಕುಲಕ್ಕೆ ಮಾದರಿಯಾಗಿದೆ ಎಂದು ತುಮಕೂರಿನ ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಎಚ್.ಕೆ.ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.

ಕನ್ನಡ ವಿವಿಯ ಮಂಟಪ ಸಭಾಂಗಣದಲ್ಲಿ ಬುಧವಾರ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಮಕಾಲೀನ ಸಂದರ್ಭದಲ್ಲಿ ವಾಲ್ಮೀಕಿ ರಾಮಾಯಣ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

ರಾಮಾಯಣವು ರಾಮನನ್ನು ಎಂದೂ ದೇವರನ್ನಾಗಿ ಕಂಡಿಲ್ಲ, ಅವರನ್ನು ಒಬ್ಬ ಉತ್ಕöÈಷ್ಟ ವ್ಯಕ್ತಿಯನ್ನಾಗಿ ಕಂಡಿದೆ. ಇಂತಹ ವಾಲ್ಮೀಕಿ ರಾಮಾಯಣವನ್ನು ನಾವು ಮರೆತರೆ ಭಾರತದ ಸಂಸ್ಕöÈತಿಯನ್ನು ಹಾಗೂ ಇತಿಹಾಸವನ್ನು ಮರೆತಂತೆ. ಪ್ರಮುಖವಾಗಿ ರಾಮಾಯಣವು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂದು ಮೊದಲು ಸಾರಿದ ಮಹಾಕಾವ್ಯವಾಗಿದೆ. ಇದರಲ್ಲಿ ಉತ್ತಮ ವ್ಯಕ್ತಿ ನಡುವಳಿಕೆಗಳೇನು, ಪರಿಸರವನ್ನು ಹೇಗೆ ಪೂಜಿಸಿಬೇಕು, ಗುರುಕುಲ ಶಿಕ್ಷಣ ಹೇಗಿರಬೇಕು, ಜನರಲ್ಲಿ ಸ್ನೇಹ ಸಂಬAಧ ಹಾಗೂ ಬಾಂಧವ್ಯ ಹೇಗಿರಬೇಕು ಎನ್ನುವುದನ್ನು ಗ್ರಂಥದಲ್ಲಿ ತಿಳಿಸುತ್ತದೆ. ವಾಲ್ಮೀಕಿ ರಾಮಾಯಣ ಸಂದೇಶವನ್ನು ಅಳವಡಿಸಿಕೊಂಡರೆ ಉತ್ತಮ ಸಮಾಜವನ್ನು ನಿರ್ಮಿಸಬಹುದು ಎಂದರು.

ಸAಡೂರು ವಿಧಾನಸಭಾ ಕ್ಷೇತ್ರದ ಶಾಸಕಿ ಅನ್ನಪೂರ್ಣ ತುಕಾರಾಂ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು 64 ವಿದ್ಯೆಗಳನ್ನು ಕಲಿತ ಮಹಾನ್ ಚೇತನ, ಕೇವಲ ಒಂದೇ ಯುಗಕ್ಕೆ ಸೀಮಿತವಾಗಿಸದೇ, ಮುಂದಿನ ಯುಗ ಯುಗಕ್ಕೂ ಅವರನ್ನು ಸ್ಮರಿಸುವ ಅಗತ್ಯವಿದೆ. ಪ್ರಕೃತಿಯೊಂದಿಗೆ ನಾವು ಯಾವ ರೀತಿ ಜೀವಿಸಬೇಕೆಂಬ ಸಂದೇಶವನ್ನು ತಿಳಿಸಿದವರು. ಇಂತಹ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡಾಗ ನಮ್ಮಲ್ಲಿ ಬದಲಾವಣೆ ಸಾಧ್ಯ ಎಂದು ನುಡಿದರು.

ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ, ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬAಡ,  ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕöÈತ ಕೆ.ಉಚ್ಚೆಂಗೆಪ್ಪ, ವಾಲ್ಮೀಕಿ ಅಧ್ಯಯನ ಪೀಠದ ಸಂಚಾಲಕ ಡಾ.ಅಮರೇಶ ಯತಗಲ್ ಇದ್ದರು.