ಹೊಸಪೇಟೆ: ಹಂಪಿಯ ಗತಕಾಲದ ಇತಿಹಾಸವನ್ನು ಕಟ್ಟಿಕೊಡುವಲ್ಲಿ ಇಲ್ಲಿನ ನೈಸರ್ಗಿಕ ಅಂಶಗಳು ಮತ್ತು ಮಾನವ ನಿರ್ಮಿತ ವಸ್ತುಗಳು ಮಹತ್ವದ ಪಾತ್ರವಹಿಸುತ್ತವೆ ಎಂದು ವಿಎಸ್‌ಕೆ ವಿವಿಯ ಪ್ರಾಧ್ಯಾಪಕ ಪ್ರೊ.ಎಚ್.ಎಸ್. ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.
ಕನ್ನಡ ವಿವಿಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದಲ್ಲಿ ಶನಿವಾರ ನಡೆದ ಈ ಶೈಕ್ಷಣಿಕ ಸಾಲಿನ ಹಂಪಿ ಪರಿಸರದ ಪುರಾತತ್ವ ಮತ್ತು ಇತ್ತೀಚಿನ ಶೋಧಗಳು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತಿಹಾಸದ ಬರವಣಿಗೆ ವಸ್ತುನಿಷ್ಠತೆ ಮತ್ತು ನೈಜಯಿಂದ ಕೂಡಿರಬೇಕು. ಇತಿಹಾಸವನ್ನು ಪುರಾಣಗಳ ಆಧಾರದ ಮೇಲೆ ವೈಭವೀಕರಣ ಮಾಡುವುದು ಸರಿಯಲ್ಲ. ಹಂಪಿ ಪರಿಸರ ಮತ್ತು ಜನಜೀವನದ ಕುರಿತು ತಳಸ್ಪರ್ಶೀಯ ಅಧ್ಯಯನಗಳು ನಡೆಯಬೇಕು. ಹಂಪಿಯ ರಕ್ಷಣೆ ಮತ್ತು ಜನಜೀವನಕ್ಕೆ ಸಂಬAಧಿಸಿದAತೆ ಸಾಕಷ್ಟು ಸವಾಲುಗಳಿವೆ. ಹಂಪಿಯ ಜನರು ಜೀವನವನ್ನು ಕಟ್ಟಿಕೊಳ್ಳುವ ಭರದಲ್ಲಿ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂತಹ ನಿರ್ಲಕ್ಷö್ಯಕ್ಕೆ ಒಳಗಾಗಿರುವ ವಿಷಯಗಳ ಮೇಲೆ ಹೆಚ್ಚು ಅಧ್ಯಯನಗಳು ನಡೆಯಬೇಕು ಎಂದರು.
ಚರಿತ್ರೆ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ವಿರೂಪಾಕ್ಷಿ ಪೂಜಾರಹಳ್ಳಿ ಮಾತನಾಡಿ, ವಿಜಯನಗರ ವಾಸ್ತುಶಿಲ್ಪ, ಕಲೆ, ಸಾಹಿತ್ಯ ಸಂಸ್ಕೃತಿ ಹೆಚ್ಚಿನ ಆಧ್ಯತೆ ನೀಡಿದರು. ಪ್ರಸ್ತುತ ಹೊಸದನ್ನು ಸಂಶೋಧಿಸುವ ಭರದಲ್ಲಿ ಸಮಾಜದಲ್ಲಿ ದ್ವಂಧ್ವವನ್ನು ಸೃಷ್ಠಿಸಬಾರದು ಎಂದರು.
ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ವೈ. ಸೋಮಶೇಖರ್ ಮಾತನಾಡಿ, ವಿಜಯನಗರ ಅರಸರು ಪರಿಸರ ಪ್ರಜ್ಞೆಯುಳ್ಳವರಾಗಿದ್ದರು. ಸಾಮ್ರಾಜ್ಯ ಕಟ್ಟುವಲ್ಲಿ ಜಲಮೂಲಗಳ ರಕ್ಷಣೆ ಮತ್ತು ಬಳಕೆಯು ತುಂಬಾ ಮುಖ್ಯವಾಗುತ್ತದೆ. ಕೆರೆ ನಿರ್ಮಾಣ ಮತ್ತು ಕಾಲುವೆಗಳ ನಿರ್ಮಾಣದ ಮೂಲಕ ಜನಜಾನುವಾರುಗಳಿಗೆ ಮತ್ತು ಕೃಷಿ ಕಾರ್ಯಗಳಿಗೆ ನದಿಯ ನೀರನ್ನು ವರ್ಷಪೂರ್ತಿ ಒದಗಿಸಲು ತುಂಬಾ ವ್ಯವಸ್ಥಿತವಾದ ಮತ್ತು ಪರಿಸರ ಸ್ನೇಹಿಯಾದ ಯೋಜನೆಯನ್ನು ರೂಪಿಸಿದ್ದರು ಎಂದರು.
ಪ್ರಾಧ್ಯಾಪಕರಾದ ಡಾ.ವಾಸುದೇವ ಬಡಿಗೇರ, ಡಾ.ರಮೇಶ ನಾಯ್ಕ, ಪ್ರೊ.ವಿರೂಪಾಕ್ಷಿ ಪೂಜಾರಹಳ್ಳಿ ಇತರರಿದ್ದರು.