ಹೊಸಪೇಟೆ: ಕನ್ನಡ ವಿವಿಯ ಹಸ್ತಪ್ರತಿಶಾಸ್ತç ಹಾಗೂ ಸಂಗೀತ ಮತ್ತು ನೃತ್ಯ ವಿಭಾಗ ಸಹಯೋಗದಲ್ಲಿ ಮೇ 31ರಂದು ಸೇವಾ ನಿವೃತ್ತಿ ಹೊಂದುತ್ತಿರುವ ಭೋಧಕ ಹಾಗೂ ಭೋಧಕೇತರ ಸಿಬಂದಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಭಾಷಾಂತರ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಎ.ಮೋಹನ ಕುಂಟಾರ್, ಬುಡಕಟ್ಟು ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಚಲುವರಾಜು ಹಾಗೂ ಆಡಳಿತಾಂಗ ಉಪಕುಲಸಚಿವ ಡಾ.ಎ.ವೆಂಕಟೇಶ, ಮತ್ತು ಕಳೆದ ಏಪ್ರಿಲ್‌ನಲ್ಲಿ ಸೇವಾ ನಿವೃತ್ತರಾದ ಜವಾನರಾದ ಗೌಳಿ ನಾಗರಾಜ ಬೀಳ್ಕೊಡುಗೆ ನೀಡಲಾಯಿತು.
ಹಸ್ತಪ್ರತಿಶಾಸ್ತç ಹಾಗೂ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಪ್ರಾಸ್ತಾವಿಕ ಮಾತನಾಡಿ, ಸೇವಾ ನಿವೃತ್ತಿ ಹೊಂದುತ್ತಿರುವ ಇವರೆಲ್ಲರೂ ಕನ್ನಡ ವಿವಿಯ ಪ್ರಗತಿಗೆ ಬೇರುಮಟ್ಟದಿಂದ ಕೊಡುಗೆ ನೀಡಿದ್ದಾರೆ ಎಂದರು.
ವಿವಿಯ ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬAಡ, ಭಾಷಾ ನಿಕಾಯದ ಡೀನ್ ಡಾ.ಎಫ್.ಟಿ.ಹಳ್ಳಿಕೇರಿ, ಮಾಹಿತಿಕೇಂದ್ರದ ಉಪನಿರ್ದೇಶಕಿ ಡಾ.ಡಿ.ಮೀನಾಕ್ಷಿ, ಸಂಶೋಧನಾದ್ಯಾರ್ಥಿಗಳಾದ ಎಂ.ಮಲ್ಲಿಕಾರ್ಜುನ, ಗೋಣಿಬಸಪ್ಪ, ನಿಶಾ ಇತರರಿದ್ದರು.