ಜಿಲ್ಲೆ

ವಿಶ್ವಗುರು ಶ್ರೀ ಬಸವ ಜಯಂತಿ

ಮಂಜುನಾಥ

ಹೊಸಪೇಟೆ: ಕನ್ನಡದ ಬಹುದೊಡ್ಡ ಭಾಷಿಕ ಪರಂಪರೆಗೆ, ಜಗತ್ತಿನ ಎಲ್ಲ ಸಂಕಷ್ಟಗಳಿಗೆ ಉತ್ತರ ಸಿಗುವುದು ವಚನಗಳಿಂದ. ವಚನಗಳು ಪರಾವಲಂಬಿ ಅಲ್ಲ, ಮುಕ್ತಕಗಳು ಎಂದು ಹಿಂದೂಸ್ತಾನಿ ಸಂಗೀತ ಗಾಯಕ ಡಾ.ಮೃತ್ಯುಂಜಯ ಶೆಟ್ಟರ ಹೇಳಿದರು.

ವಿಶ್ವಗುರು ಶ್ರೀ ಬಸವ ಜಯಂತಿ ನಿಮಿತ್ತ ಕನ್ನಡ ವಿವಿಯ ಮಂಟಪ ಸಭಾಂಗಣದಲ್ಲಿ ಸಂಗೀತ ಮತ್ತು ನೃತ್ಯ ವಿಭಾಗದಿಂದ ಬಸವ ಗಾನಸುಧೆ ಮತ್ತು ವಿಶೇಷ ಉಪನ್ಯಾಸ ವಚನಗಾಯನ ಪರಂಪರೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೊಬೈಲ್‌ಗಳನ್ನು ದೂರ ಇಟ್ಟು ಹರಿಹರ ರಾಘವಾಂಕ, ರನ್ನ, ಜನ್ನ, ಎಲ್ಲರನ್ನು ಓದಬೇಕು. ಕಾದಂಬರಿ, ವಿಮರ್ಶೆ, ಕಾವ್ಯ, ವಚನಕಾರರ ಬದುಕು ಎಲ್ಲವನ್ನು ಅಧ್ಯಯನ ಮಾಡಬೇಕು. ಫ.ಗು. ಹಳಕಟ್ಟಿ, ಹರ್ಡೇಕರ್ ಮಂಜಪ್ಪ ಇವರನ್ನು ನೆನೆಯಬೇಕು. ಆಗ ವಚನಗಾಯನ ಸರಾಗ ಆಗುತ್ತದೆ. ಈಗ ದೊಡ್ಡ ಕೊರತೆ ಎಂದರೆ ಓದು, ದಿನದ ಇಪ್ಪತ್ನಾಲ್ಕು ತಾಸು ಗೂಗಲ್ ನೋಡದೇ ಒಳ್ಳೆಯ ಪುಸ್ತಕಗಳು ಇವೆ ಓದಿರಿ ಎಂದರು.

ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಮಾತನಾಡಿ, ಸಾಹಿತ್ಯ ಮತ್ತು ಸಂಗೀತದ ನಡುವೆ ಅಂತರ್ ಸಂಬAಧವಿದೆ. ವಚನಗಳು ಜನಸಾಮಾನ್ಯರನ್ನು ತಲುಪಲು ಸಂಗೀತ ಮತ್ತು ಸಂಗೀತಗಾರರೇ ಕಾರಣ. ಸರಳವಾದ ಬದುಕನ್ನು ಸಂಕೀರ್ಣ ಮಾಡಿಕೊಂಡು ನಮಗೆ ಸಮಯವಿಲ್ಲ ಎಂದು ಹೇಳುವ ಈ ಹೊತ್ತಿನಲ್ಲಿ ಸಂಬAಧಗಳು ಉದ್ದೀಪನಗೊಳ್ಳಲು ಸಂಗೀತ ಕಲೆಯು ಪ್ರಮುಖ ಪಾತ್ರ ವಹಿಸುತ್ತದೆ. ಮಾನಸಿಕ ದೂರ ಇರಿಸಿಕೊಂಡು ಸಂಗೀತ ಕಲೆಯನ್ನು ಆಸ್ವಾದಿಸಬೇಕು. ಜನಪ್ರಿಯ ಸಂಗೀತವನ್ನು ಕೊಡುವ ಭರದಲ್ಲಿ ಸಾಹಿತ್ಯವನ್ನು ಕೆಡಿಸಬಾರದು ಎಂದರು.