ಹೊಸಪೇಟೆ: ವರ್ಣ, ವರ್ಗ, ಲಿಂಗರಹಿತ ಸಮಾಜ ಸ್ಥಾಪನೆಯು ಗಾಂಧಿಯ ಕನಸಾಗಿತು. ಸ್ವದೇಶಿ ಚಳುವಳಿ, ಸ್ವಾವಲಂಬನೆ ಹಾಗೂ ಗೃಹ ಕೈಗಾರಿಕೆಗಳು ಮುಂಚೂಣಿಗೆ ಬರಬೇಕು ಎಂದು ಮಹಾತ್ಮ ಗಾಂಧಿಯವರು ಚಿಂತಿಸುತ್ತಿದ್ದರು ಎಂದು ಹಸ್ತಪ್ರತಿಶಾಸ್ತç ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ತಿಳಿಸಿದರು.
ಗಾಂಧಿ ಜಯಂತಿ ನಿಮಿತ್ತ ಕನ್ನಡ ವಿವಿಯ ಕ್ರಿಯಾಶಕ್ತಿಯ ಸಭಾಭವನದಲ್ಲಿ ಗುರುವಾರ ಗಾಂಧೀಜಿ : ಸ್ವತಂತ್ರ ಭಾರತದ ಪರಿಕಲ್ಪನೆ ಉಪನ್ಯಾಸದಲ್ಲಿ ಮಾತನಾಡಿದರು.
ಲಾಲ್ಬಹಾದ್ದೂರ್ ಶಾಸ್ತಿç ಅವರು ಹಸಿರು ಕ್ರಾಂತಿಯ ಮೂಲಕ `ಜೈಜವಾನ್ಜೈಕಿಸಾನ್' ಎಂದು ಹೇಳಿದರೆ, ಗಾಂಧೀಜಿಯವರು ರೈತರೇ ಈ ದೇಶದ ಬೆನ್ನೆಲುಬು ಎಂದರು. ಸಬಲರಾಗಿ, ಸ್ವತಂತ್ರರಾಗಿ, ಸ್ವಾವಲಂಬಿಗಳಾಗಿ ತಮಗೆ ಬೇಕಾದ ವಸ್ತುಗಳನ್ನು ಭಾರತೀಯರು ತಾವೇ ಉತ್ಪಾದಿಸಿಕೊಳ್ಳಬೇಕು ಎಂಬುದು ಇವರಿಬ್ಬರ ಕನಸಾಗಿತ್ತು ಎಂದು ಹೇಳಿದರು.
ಎನ್ಎಸ್ಎಸ್ ಘಟಕದ ಸಂಯೋಜನಾಧಿಕಾರಿ ಡಾ.ಎ.ಶ್ರೀಧರ ಮಾತನಾಡಿ, ಹಿಂದ್ ಸ್ವರಾಜ್ ಮತ್ತು ಮೈ ಎಕ್ಸ್ಪೆರಿಮೆಂಟ್ ವಿತ್ಟ್ರುಥ್ ಗಾಂಧಿಯವರ ಬಹಳ ಪ್ರಮುಖ ಕೃತಿಗಳಾಗಿವೆ. ಗ್ರಾಮ ಸ್ವರಾಜ್ಯದ ಕಲ್ಪನೆಯೊಂದಿಗೆ ಆಧುನಿಕತೆಗೂ ಪ್ರಾಮುಖ್ಯತೆ ನೀಡಿದ್ದರು. ಆದರೆ ಆಧುನಿಕತೆಯ ದಾಸರಾಗಬಾರದು ಎಂಬುದು ಗಾಂಧಿಯವರ ಅಭಿಪ್ರಾಯವಾಗಿತ್ತು ಎಂದರು.
ಉಪಕುಲಸಚಿವ ಬಿ.ಗುರುಬಸಪ್ಪ, ಕುಲಪತಿ ಆಪ್ತಕಾರ್ಯದರ್ಶಿ ಎ.ಎಂ.ಕೃಪಾಶAಕರ್, ಮಾಹಿತಿಕೇಂದ್ರದ ಮುಖ್ಯಸ್ಥೆ ಶಕುಂತಲಾ ಚೌಡನಾಯ್ಕ, ಇಂಜಿನಿಯರ್ ಚಂದ್ರಶೇಖರಪ್ಪ, ಡಾ.ಪಿ.ಕೃಷ್ಣಮೂರ್ತಿ ಇತರರಿದ್ದರು.