ಜಿಲ್ಲೆ

ನಾಟಕ, ಸಂಗೀತಕ್ಕೆ ಮೂಲ ನೆಲೆಗಟ್ಟು ಶ್ರದ್ದೆ

ಮಂಜುನಾಥ

ಹೊಸಪೇಟೆ: ನಾಟಕ ಸಮಾಜವನ್ನು ತಿದ್ದುವ, ಎಚ್ಚರಿಸುವ ಎಲ್ಲಾ ಕ್ಷೇತ್ರಗಳಲ್ಲಿ ಜಾಗೃತಿ ಮೂಡಿಸುವ ಅದ್ಭುತ ಶಕ್ತಿಯಾಗಿದೆ. ನಾಟಕ ಮತ್ತು ಸಂಗೀತಕ್ಕೆ ಮೂಲ ನೆಲೆಗಟ್ಟು ಶ್ರದ್ದೆ ಎಂದು ರಂಗಭೂಮಿ ಹಾಗೂ ಚಲನಚಿತ್ರ ನಟ ಚಿಂದೋಡಿ ಬಂಗಾರೇಶ್ ಹೇಳಿದರು.

ಕನ್ನಡ ವಿವಿಯ ಸಂಗೀತ ಮತ್ತು ನೃತ್ಯ ವಿಭಾಗದ ಷಡ್ಜ ವೇದಿಕೆಯಲ್ಲಿ ಶನಿವಾರ ಹದಿನೈದು ದಿನಗಳವರೆಗೆ ನಡೆದ ನಾಟಕ ರಚನೆ ನಟನೆ ಹಾಗೂ ನಿರ್ದೇಶನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಶಿಬಿರಾರ್ಥಿಗಳು ಪಾತ್ರಪರಕಾಯ ಪ್ರವೇಶ ಮಾಡಬೇಕು. ಗ್ರಹಿಸುವ ಶಕ್ತಿ ಬೇಕು. ಸಂಗೀತದಿAದಲೇ ನಾಟಕ, ಸಂಗೀತವಿಲ್ಲದೆ ನಾಟಕವಿಲ್ಲ. ನಮ್ಮನ್ನು ಸ್ವರ ಚೇತನಗೊಳಿಸಿದರೆ ಅಕ್ಷರ ಜಾಗೃತಗೊಳಿಸುತ್ತದೆ. ನಾಟಕದಲ್ಲಿ ಸಂಭಾಷಣೆಗೆ ಶುದ್ಧ ಕನ್ನಡ ಬೇಕು. ನಾಟಕ, ಸಂಗೀತ, ಸಾಹಿತ್ಯವನ್ನು ಅರಿತು ನಟಿಸುವವನೇ ನಿಜವಾದ ನಟನಾಗುತ್ತಾನೆ. ಸಾಹಿತ್ಯದ ಸೊಗಡು ಬಿಡಬೇಡಿ ಎಂದರು.

ಧಾರವಾಡದ ರಂಗಕರ್ಮಿ ಶ್ರೀಕಾಂತ ನವಿಲುಗರಿ ಮಾತನಾಡಿ, ವಿವಿಯಲ್ಲಿ ಒಳ್ಳೆಯ ಮುಗ್ದ ಮನಸ್ಸುಗಳಿವೆ. ನಿಮ್ಮೆಲ್ಲರಿಂದ ಶಿಬಿರ ಸಾಧ್ಯವಾಗಿದೆ. ಪಾತ್ರ, ಭಾವ, ಭಾವದ ಏರಿಳಿತ, ಪರಾಕಾಯ ಪ್ರವೇಶ ಇವೆಲ್ಲವನ್ನು ಇನ್ನಷುö್ಟ ನೀವು ಕಲಿಯಿರಿ ಎಂದು ಹೇಳುತ್ತ ಇಲ್ಲಿನ ಚರ್ಚೆಗಳು ನನ್ನನ್ನು ಬೆಳೆಸಿವೆ. ಜೀವಗಳ ಕಟ್ಟುವಿಕೆ, ಮನಸ್ಸುಗಳ ಕಟ್ಟುವಿಕೆ ಮಾಡಿದ್ದೇನೆ ಎನ್ನುವ ಸಾರ್ಥಕತೆ ನನ್ನಲ್ಲಿದೆ ಎಂದರು.

ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬAಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಗೀತ, ನೃತ್ಯ, ನಾಟಕ ಇದೊಂದು ಭಾವ ಪ್ರಪಂಚ. ಈ ಪ್ರಪಂಚದಲ್ಲಿ ನಮ್ಮನ್ನು ನಾವೇ ಮರೆಯುವ ಸಂದರ್ಭಗಳಿರುತ್ತವೆ. ವಿವಿಯು ತನ್ನ ಇತರೆ ಕೇಂದ್ರಗಳಲ್ಲಿ ನೃತ್ಯ ತರಗತಿಗಳನ್ನು ಆರಂಭಿಸುವ ಯೋಚನೆ ಮಾಡಿದೆ. ಜತೆಗೆ ನಾಟಕದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ತರಗತಿಗಳನ್ನು ನಡೆಸುವ ಸಿದ್ಧತೆಯಲ್ಲಿದೆ ಎಂದರು.

ಸAಗೀತ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರಿ, ಅಧ್ಯಾಪಕರು ಡಾ.ವೆಂಕಟಗಿರಿ ದಳವಾಯಿ, ಡಾ.ಚನ್ನವೀರಪ್ಪ, ನಗರದ ರಂಗಕರ್ಮಿ ಮಾ.ಬ.ಸೋಮಣ್ಣ, ಬಾಗಲಕೋಟೆಯ ನಾಟಕ ರಚನೆಕಾರ ಶ್ರೀಹರಿ ಧೂಪದ, ಮಾಹಿತಿ ಕೇಂದ್ರದ ಮುಖ್ಯಾಸ್ತೆ ಡಾ.ಡಿ.ಮೀನಾಕ್ಷಿ ಇತರರಿದ್ದರು.