ಕನ್ನಡ ವಿವಿಯಲ್ಲಿ ಶುಕ್ರವಾರ ಇತ್ತೀಚಿನ ಅಭಿವೃದ್ಧಿ ಮಾದರಿಗಳು ಮತ್ತು ಸಮಾಜ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ರಾಜ್ಯ ಶಿಕ್ಷಣ ಆಯೋಗದ ಸದಸ್ಯ ಪ್ರೊ.ಸತೀಶ್ ದೇಶಪಾಂಡೆ ಮಾತಾನಾಡಿದರು.  
ಜಿಲ್ಲೆ

ದೇಶದ ಸಮಸ್ಯೆಗಳಿಗೆ ಅಭಿವೃದ್ಧಿಯೇ ಪರಿಹಾರ

ಮಂಜುನಾಥ

ಹೊಸಪೇಟೆ: ದೇಶ ಅಭಿವೃದ್ಧಿಯ ಹೊರತಾಗಿ ಕೊಮುವಾರು ವಿಷಯಗಳಿಂದ ಬಳಲುತ್ತಿದೆ. ಈ ಸಮಸ್ಯೆಗಳಿಂದ ಹೊರಬರಲು ಅಭಿವೃದ್ಧಿ ಒಂದೇ ಪರಿಹಾರವಾಗಿದೆ ಎಂದು ರಾಜ್ಯ ಶಿಕ್ಷಣ ಆಯೋಗದ ಸದಸ್ಯ ಪ್ರೊ.ಸತೀಶ್ ದೇಶಪಾಂಡೆ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ವಿವಿಯ ಅಭಿವೃದ್ಧಿ ಅಧ್ಯಯನ ವಿಭಾಗದಿಂದ ಪಂಪ ಸಭಾಂಗಣದಲ್ಲಿ ಶುಕ್ರವಾರ ಇತ್ತೀಚಿನ ಅಭಿವೃದ್ಧಿ ಮಾದರಿಗಳು ಮತ್ತು ಸಮಾಜ ವಿಶೇಷ ಉಪನ್ಯಾಸ ಕಾರ್ಯಕ್ರಮ ಮಾತಾನಾಡಿದರು.

ಅಭಿವೃದ್ಧಿ ಎಂಬುದು ಸಮಾಜದಲ್ಲಿ ವಿವಿಧ ಕಾಲಘಟ್ಟಗಳಲ್ಲಿ ವಿಷಯಗಳು ಬದಲಾದಂತೆ ಅಭಿವೃದ್ಧಿಯ ವ್ಯಾಖ್ಯಾನ ಬದಲಾಗಿದೆ. ಇದಕ್ಕೆ ಪ್ರಾಚೀನ, ಮಧ್ಯಕಾಲ, ಆಧುನಿಕ ಕಾಲದಲ್ಲಿ ಅಭಿವೃದ್ಧಿಯ ಕುರಿತು ಬದಲಾದ ಧೊರಣೆಗಳನ್ನು ಕಾಣಬಹುದು. ಮಾನವ ಅಭಿವೃದ್ಧಿ ಎಂಬ ಕಲ್ಪನೆ ಮೂಡುವುದಕ್ಕಿಂತಲೂ ಆರಂಭದಲ್ಲಿ ಇದ್ದುದು ಕೇವಲ ಆರ್ಥಿಕ ಅಭಿವೃದ್ಧಿ. ಬದಲಾದ ಕಾಲದಲ್ಲಿ ಅಭಿವೃದ್ಧಿ ಎಂದರೆ ಅದು ಸಾಮಾಜಿಕ, ಆರ್ಥಿಕ, ಧಾರ್ಮಿಕ, ಮಾನವ ಅಭಿವೃದ್ಧಿ ಎಂಬ ವಿಶಾಲವಾದ ವ್ಯಾಪ್ತಿಯನ್ನು ಆವರಿಸಿಕೊಂಡಿದೆ. ದೇಶ ಸ್ವಾತಂತ್ರ÷್ಯ ಪಡೆದ ಆರಂಭದ ದಿನಗಳಲ್ಲಿ ಸಮಾಜದಲ್ಲಿದ್ದ ವರ್ಣಭೇದ, ಜಾತಿಯತೆ, ಧರ್ಮಗಳಂತಹ ಕಂದಕಗಳಿಗೆ ಅಭಿವೃದ್ಧಿಯೇ ಪರಿಹಾರವಾಗಿತ್ತು. ವರ್ಣಭೇದ ಎಲ್ಲಾ ದೇಶಗಳಲ್ಲಿ ಸಾಮಾನ್ಯವಾಗಿದೆ. ಇದು ಸೈದ್ಧಾಂತಿಕವಾಗಿ ಅಭಿವೃದ್ಧಿಗೆ ಮಾರಕವಾದ ವಿಷಯವಾಗಿದೆ ಎಂದರು.

ಕನ್ನಡ ವಿವಿಯ ಕುಲಸಚಿವ ಪ್ರೊ.ವಿಜಯ್ ಪೂಣಚ್ಚ ತಂಬAಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ವಿವಿ ಬೌದ್ಧಿಕವಾಗಿ ಇತರೆ ವಿವಿಗಿಂತ ಮುಂದಿದೆ. ಇಲ್ಲಿನ ಸಂಶೋಧನಾರ್ಥಿಗಳು ಅತ್ಯುತ್ತಮವಾದ ವಿಷಯ ಮಂಡನೆಯಲ್ಲಿ ಹಿಂದೆ ಬಿದ್ದಿಲ್ಲ ಎಂದರು. ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ಗೀತಮ್ಮ ಇತರರಿದ್ದರು.