ಜಿಲ್ಲೆ

ಡಾ.ಪರಮಶಿವಮೂರ್ತಿಗೆ ಸೋದೆ ಸದಾಶಿವರಾಯ ಪ್ರಶಸ್ತಿ

ಮಂಜುನಾಥ

ಹೊಸಪೇಟೆ: ಶಿರಸಿ ಸಮೀಪದ ಸೋಂದಾದ ಸ್ವಾದಿ ಜೈನಮಠ, ಸ್ವರ್ಣ ಮಠ, ವಾದಿರಾಜ ಮಠ, ಜಾಗೃತಿ ವೇಧಿಕೆಯಿಂದ ಕೊಡುವ ಸೋದೆ ಸದಾಶಿವರಾಯ ಪ್ರಶಸ್ತಿಗೆ ಹಂಪಿ ಕನ್ನಡ ವಿವಿಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಭಾಜನರಾಗಿದ್ದಾರೆ.

ಇತಿಹಾಸ ಸಂಶೋಧನಾ ಕ್ಷೇತ್ರಕ್ಕೆ ಮತ್ತು ವಿದ್ವತ್ಪçಪಂಚಕ್ಕೆ ನೀಡಿದ ಕೊಡುಗೆಗಳ ಅನುಸಾರ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಲ್ಲಿ ಅ.19 ಮತ್ತು 20 ರಂದು ನಡೆಯುವ ಸೋಂದಾ ಇತಿಹಾಸೋತ್ಸವ, ರಾಜ್ಯಮಟ್ಟದ ಇತಿಹಾಸ ಸಮ್ಮೇಳನ ಹಾಗೂ ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸೋಂದಾ ಇತಿಹಾಸೋತ್ಸವದ ಸಂಚಾಲಕ ಡಾ.ಲಕ್ಷಿö್ಮÃಶ್ ಹೆಗಡೆ ಸೋಂದಾ ತಿಳಿಸಿದ್ದರು.