ಜಿಲ್ಲೆ

ಸಾರಿಗೆ ಇಲಾಖೆಗೆ ಪ್ರಯಾಣಿಕರೇ ಅವಿಭಾಜ್ಯ ಅಂಗ

ಮಂಜುನಾಥ

ಹೊಸಪೇಟೆ: ಸಾರಿಗೆ ಇಲಾಖೆಗೆ ಪ್ರಯಾಣಿಕರೇ ಅವಿಭಾಜ್ಯ ಅಂಗ, ಬಸ್ ಚಾಲಕರು ಹಾಗೂ ನಿರ್ವಾಹಕರು ಪ್ರಯಾಣಿಕರ ವಿಶ್ವಾಸ-ನಂಬಿಕೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಬ್ದುಲ್ ರಹಿಮಾನ ಎ.ನಂದಗಡಿ ಹೇಳಿದರು.

ನಗರದಲ್ಲಿ ಭಾನುವಾರ ಸಾರಿಗೆ ಸಂಸ್ಥೆಯ ಬಸ್ ಚಾಲಕರಿಗೆ ಮತ್ತು ನಿರ್ವಾಹಕರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾರಿಗೆ ಇಲಾಖೆಯು ಸಾರ್ವಜನಿಕರನ್ನು ಒಂದಡೆಯಿAದ ಮತ್ತೊಂದೆಡೆಗೆ ಸೇರಿಸುವ ಸಂಪರ್ಕ ಕೊಂಡಿಯಾಗಿದೆ. ಇಂತಹ ಸಾರಿಗೆ ಇಲಾಖೆಯು ಆರಂಭದಿAದ ಶಿಸ್ತ್ತು, ಸಂಯಮ ಪಾಲಿಸುತ್ತಾ ಬಂದಿದ್ದು, ಅದನ್ನು ಇನ್ನಷ್ಟು ಹೆಚ್ಷಿಸಿಕೊಂಡಲ್ಲಿ ಅಪವಾದಗಳು ದೂರವಾಗಲಿವೆ. ಚಾಲಕರ ಕೆಲಸವನ್ನು ಮೆಚ್ಚಿ ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಯಾವುದೇ ಘಟಕದಲ್ಲಿನ ಒಬ್ಬ ಚಾಲಕ ಪ್ರಶಸ್ತಿ ಪಡೆದರೆ ಇಡೀ ಘಟಕವೇ ಸಾಧನೆ ಮಾಡಿದಯಿದು ಇತರರಿಗೆ ಪ್ರೇರಣೆಯಾಗಲಿದೆ ಎಂದರು.

ಚಾಲಕರು ಮತ್ತು ನಿರ್ವಾಹಕರಿಗೆ ಶಿಸ್ತು ಅಂದರೆ ಏನು ಎಂಬುದು ತಿಳಿದಿರುತ್ತದೆ. ವಾಹನ ಹೋಗುತ್ತಿರುವಾಗ ಎಲ್ಲೆಂದರಲ್ಲಿ ವಾಹನ ನಿಲ್ಲ್ಲಿಸಬಾರದು. ಬಸ್‌ನಲ್ಲಿ ಚಿಕ್ಕವರಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೊಂದಿಗೂ ಸಾವಧಾನದಿಂದ ವರ್ತಿಸಬೇಕು. ಯಾರೊಂದಿಗೂ ಅಸಭ್ಯವಾಗಿ ವರ್ತಿಸಬಾರದು. ಏರುಧ್ವನಿಯಲ್ಲಿ ಮಾತನಾಡಬಾರದು. ನಮ್ಮ ವರ್ತನೆ ಇತರರಿಗೆ ಮಾದರಿಯಾಗುವ ಹಾಗೆ ಇರಬೇಕು ಎಂಬುದನ್ನು ಪ್ರತಿಯೊಬ್ಬ ಚಾಲಕರು ಮತ್ತು ನಿರ್ವಾಹಕರು ಅರಿಯಬೇಕು ಎಂದು ಸಲಹೆ ಮಾಡಿದರು. ನ್ಯಾಯಾಧೀಶರಾದ ಅಶೋಕ ಆರ್.ಎಚ್, ಹೇಮಲತಾ. ಬಿ.ಹುಲ್ಲೂರ, ರಮೇಶ್ ಬಾಬು ಬಿ.ಎನ್., ಪ್ರಶಾಂತ್ ನಾಗಲಾಪುರ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಶ್ರೀನಿವಾಸಮೂರ್ತಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲಿಂ ಪಾಷ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ಹೀರಾ, ಆರ್‌ಟಿಓ ವಸಂತ ಚವ್ಹಾಣ್, ಪಿಐ ಲಕನ್ ಆರ್ ಮಸುಗುಪ್ಪಿ ಇತರರಿದ್ದರು.