ಜಿಲ್ಲೆ

ತಿರುಪತಿ ರೈಲು ಮತ್ತೆ ಆರಂಭ

ಮಂಜುನಾಥ

ಹೊಸಪೇಟೆ: ಮಹಾ ಕುಂಬಮೇಳದ ನಿಮಿತ್ತ ಪ್ರಯಾಗ್‌ರಾಜ್‌ಗೆ ತೆರಳಿದ್ದ ಹುಬ್ಬಳ್ಳಿ - ತಿರುಪತಿ (ಗಾಡಿ ಸಂಖ್ಯೆ: 57401/57402) ಮೂರು ತಿಂಗಳ ನಂತರ ಸೋಮವಾರದಿಂದ ಮತ್ತೆ ಆರಂಭಗೊAಡಿದೆ.

ಈ ರೈಲು ಹಿಂದಿನ ವೇಳಾಪಟ್ಟಿಯಂತೆ ಹುಬ್ಬಳ್ಳಿಯಿಂದ ಬೆಳಗ್ಗೆ 6 ಗಂಟೆಗೆ ನಿರ್ಗಮಿಸಿ ಗದಗ ಮಾರ್ಗವಾಗಿ ಹೊಸಪೇಟೆಗೆ ಬೆಳಗ್ಗೆ 9 ಗಂಟೆಗೆ ಆಗಮಿಸುವುದು, ನಂತರ ಬಳ್ಳಾರಿ - ಕಡಪ ಮಾರ್ಗವಾಗಿ ರಾತ್ರಿ 10 ಗಂಟೆಗೆ ತಿರುಪತಿಗೆ ತಲುಪುತ್ತದೆ. ಅದೇ ರೀತಿ ತಿರುಪತಿಯಿಂದ ಬೆಳಗ್ಗೆ 6 ಗಂಟೆಗೆ ನಿರ್ಗಮಿಸಿ ಹೊಸಪೇಟೆಗೆ ಸಂಜೆ 5.20ಕ್ಕೆ ಆಗಮಿಸಿ ಹುಬ್ಬಳ್ಳಿಯನ್ನು ರಾತ್ರಿ 9.30ಕ್ಕೆ ತಲುಪುತ್ತದೆ.

ಈ ರೈಲು ಪ್ಯಾಸೆಂಜರ್ ರೈಲಾಗಿದ್ದು, ಟಿಕೆಟ್ ದರ ಇಂತಿದೆ, ಹೊಸಪೇಟೆಯಿಂದ ಹುಬ್ಬಳ್ಳಿಗೆ 35 ರೂ., ಬಳ್ಳಾರಿಗೆ 20 ರೂ., ಗುಂತಕಲ್‌ಗೆ 35 ರೂ. ಹಾಗೂ ತಿರುಪತಿಗೆ 85 ರೂ. ಆಗಿರುತ್ತದೆ. ಅತ್ಯಂತ ಕಡಿಮೆ ದರ ರಿಯಾಯಿತಿ ಸೌಲಭ್ಯವನ್ನು ಪ್ರಯಾಣಿಕರು ಸದ್ಬಳಕೆ ಮಾಡಿಕೊಳ್ಳಬೇಕು.

ಹೈದರಾಬಾದ್ ರೈಲಿಗಾಗಿ ಒತ್ತಾಯ

ಅದೇ ರೀತಿ ಮಹಾ ಕುಂಭಮೇಳದ ನಿಮಿತ್ತ ರದ್ದಾಗಿರುವ ಎಕ್ಸ್ಪ್ರೆಸ್ ರೈಲು ಬೆಳಗಾವಿ - ಹೊಸಪೇಟೆ - ಹೈದರಾಬಾದ್ - ಮಣಗೂರು (ಗಾಡಿ ಸಂಖ್ಯೆ:07335/07336) ಇನ್ನೂ ಆರಂಭವಾಗಿಲ್ಲ. ಆದರಿಂದ ಸದರಿ ರೈಲನ್ನು ಕೂಡಲೇ ಪುನರಾರಂಭಿಸಬೇಕು. ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಿಂದ ಇಲಾಖೆಗೆ ಅತ್ಯಧಿಕ ಆದಾಯ ಇದೆ. ಆದರಿಂದ ಈ ಭಾಗದಲ್ಲಿ ಸಕಾಲದಲ್ಲಿ ನಿಗದಿತ ವೇಳಾಪಟ್ಟಿಯಂತೆ ರೈಲುಗಳ ಸಂಚಾರ ಹಾಗೂ ಪ್ರಯಾಣಿಕರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಿಲು ಕ್ರಮ ಕೈಗೊಳ್ಳಬೇಕು ಎಂದು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಅಧ್ಯಕ್ಷ ವೈ.ಯಮುನೇಶ್, ಕಾರ್ಯದರ್ಶಿ ಮಹೇಶ್ ಕುಡುತಿನಿ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಒತ್ತಾಯಿಸಿದ್ದಾರೆ.