ಜಿಲ್ಲೆ

ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ

ಮಂಜುನಾಥ

ಹೊಸಪೇಟೆ: ನಗರ ಸೇರಿದಂತೆ ಶನಿವಾರ ರಾತ್ರಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ಸುರಿದಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಸುರಿದ ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಇನ್ನೂ ಭತ್ತ ಸೇರಿ ಕಬ್ಬು, ಬಾಳೆ ನೆಲ ಸಮವಾಗಿವೆ.

ಗುಡುಗು ಸಿಡಲಿನೊಂದಿಗೆ ರಾತ್ರಿ 10ರ ಸುಮಾರಿಗೆ ಆರಂಭವಾಗಿ ರಾತ್ರಿ ಭಾನುವಾರ ಬೆಳಗಿನ ಜಾವದ ವರೆಗೆ ಬಿಟ್ಟು ಬಿಟ್ಟು ಮಳೆ ಸುರಿದಿದೆ. ಹಾನಿಯ ವರದಿ ಇನ್ನು ಬಂದಿಲ್ಲ. ಶುಕ್ರವಾರ ಸುರಿದ ಮಳೆಗೆ ಭಾರಿ ಹಾನಿ ಉಂಟು ಮಾಡಿದೆ. ನಿರಂತರ ಗುಡುಗು, ಸಿಡಿಲಿನ ಆರ್ಭಟಕ್ಕೆ ಜನರು ಆತಂಕಗೊAಡಿದ್ದು, ಮನೆಗಳಲ್ಲಿನ ಹಲವಾರು ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಚರಂಡಿಗಳು ತುಂಬಿ ಹರಿಯುತ್ತಿದ್ದು, ರಸ್ತೆಗಳು ನದಿಯಂತೆ ಹರಿದಿದೆ. ಹೆಚ್ಚಿನ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಿವಿಧೆಡೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಹಂಪಿ ಪರಿಸರ ಸೇರಿದಂತೆ ವಿವಿಧ ಕಡೆ ಸುರಿದ ಗಾಳಿ ಮಳೆಗೆ ಉರುಳಿದ ಬಾಳೆ, ಕಬ್ಬು ಸೇರಿ ಇತರೆ ಬೆಳೆಗಳು ನೆಲಸಮವಾಗಿವೆ. ಹೊಸಪೇಟೆ ತಾಲೂಕಿನ ಹಂಪಿ, ಕಮಲಾಪುರ, ವೆಂಕಟಾಪುರ, ನಿಂಬಾಪುರ, ಬುಕ್ಕಸಾಗರ ಸೇರಿದಂತೆ ಇತರೆ ಗ್ರಾಮದಲ್ಲಿ ಬಿರುಗಾಳಿಂದ ನೂರಾರು ಎಕರೆ ಬೆಳೆ ಹಾನಿಯಾಗಿವೆ. ಇಲಾಖೆಯಿಂದನಿಖರ ಮಾಹಿತಿ ತಿಳಿದು ಬಂದಿಲ್ಲ.