ಹೊಸಪೇಟೆ ಗ್ರಾಮೀಣ ಠಾಣೆಯ ಪೊಲೀಸರು ಗುರುವಾರ ಬಂದಿಸಿದ ಕಳ್ಳತನ ಆರೋಪಿಯಿಂದ 8 ಮೊಬೈಲ್ಗಳು ವಶಕ್ಕೆ ಪಡೆದಿದ್ದಾರೆ.  
ಜಿಲ್ಲೆ

ಕಳುವಾಗಿದ್ದ 8 ಮೊಬೈಲ್ ವಶ

ಮಂಜುನಾಥ

ಹೊಸಪೇಟೆ: ಇಲ್ಲಿನ ಗ್ರಾಮೀಣ ಠಾಣೆಯ ಪೊಲೀಸರು ಗುರುವಾರ ಕಳ್ಳತನ ಆರೋಪಿಯನ್ನು ಬಂದಿಸಿ 85 ಸಾವಿರ ರೂ.ಗೆ ಬೆಲೆ ಬಾಳುವ ವಿವಿಧ ಕಂಪನಿಯ 8 ಮೊಬೈಲ್‌ಗಳು ವಶಕ್ಕೆ ಪಡೆದಿದ್ದಾರೆ.

ನಗರದ ಎಲ್.ಭೀಮನಾಯ್ಕ ಎಂಬುವರು ಮೊಬೈಲ್ ಕಳುವಾಗಿದೆ ಎಂದು ದೂರು ನೀಡಿದ ಬೆನ್ನಲ್ಲೇ ಪತ್ತೆಗಾಗಿ ಪೊಲೀಸರು ತನಿಖೆ ನಡೆಸಿದ್ದಾರೆ. ನಗರದ ಅನಂತಾಶಯನಗುಡಿಯ ಆಟೋ ಸ್ಟ್ಯಾಂಡ್ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಲ್ಲಿನ ನಿವಾಸಿ ಹುಲಗಪ್ಪನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಒಂದು ತಿಂಗಳಿAದ ಇಲ್ಲಿನ ಪಾಂಡುರAಗ ಕಾಲೋನಿ ಮತ್ತು ಅನಂತಾಶಯನಗುಡಿ ಪ್ರದೇಶದಲ್ಲಿ 5 ಮನೆಗಳಲ್ಲಿ ಮನೆ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪ್ರಕರಣ ದಾಖಲಾಗಿದೆ.

ಪಿಎಸ್‌ಐಗಳಾದ ಸೂರ್ಯನಾರಾಯಣ, ಪರಮೇಶ್ವರಪ್ಪ, ಸಿಬ್ಬಂದಿ ಮಂಜುನಾಥ ಮೇಟಿ, ಕೊಟ್ರೇಶ್ ಏಳಂಚಿ, ಸಣ್ಣಗಾಳಪ್ಪ ಇತರರಿದ್ದರು.