ಹೊಸಪೇಟೆ: ಮಂಗಳೂರು ಮರ್ಡರ್ ವಿಚಾರ ಒಂದು ಕೈಯಿಂದ ಚಪ್ಪಾಳೆ ತಟ್ಟೋಕೆ ಸಾಧ್ಯವಿಲ್ಲ. ಎರಡು ಕಡೆಯವರು ಯಾರಿಗೆನು ಕಮ್ಮಿಯಿಲ್ಲ ಎನ್ನುವಂತೆ ಇದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ತಾಲೂಕಿನ ಹೊರವಲಯದ ರಾಷ್ಟಿçÃಯ ಹೆದ್ದಾರಿ 50ರಲ್ಲಿ ನಿರ್ಮಾಣಗೊಂಡಿರುವ ನೂತನ ಡಿ.ದೇವರಾಜು ಅರಸು ಟ್ರಕ್ ಟರ್ಮಿನಲನ್ನು ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಂಗಳೂರು ಕೊಲೆ ಪ್ರಕರಣ ಎರಡು ಕಡೆಯವರು ಯಾರಿಗೆನು ಕಮ್ಮಿಯಿಲ್ಲ ಎನ್ನುವಂತೆ ಇದ್ದಾರೆ. ಇವರೆಷ್ಟು ಸಂಖ್ಯೆಯಲ್ಲಿ ಮರ್ಡರ್ ಮಾಡಿದ್ದಾರೋ ಅವರು ಅಷ್ಡೇ ಸಂಖ್ಯೆಯಲ್ಲಿ ಮಾಡಿದ್ದಾರೆ. ಗಲಾಟೆ ಮಾಡಿದವರು ಮರ್ಡರ್ ಮಾಡಿದವರು ಆರೆಸ್ಟ್ ಅಗುತ್ತಿದ್ದಾರೆ. ಅದರೆ ಹಿಂದೆ ಇರೋ ಶಕ್ತಿ ಅರೆಸ್ಟ್ ಅಗ್ತಿಲ್ಲ. ನಾನು ಗೃಹಮಂತ್ರಿ ಯಾಗಿದ್ದಾಗ ಯಾರು ಹಿಂದೆ ಇದ್ದಾರೋ ಅವರನ್ನು ಫಿಟ್ ಮಾಡುತ್ತಿದ್ದೆ. ಬಷೀರ್, ದೀಪಕ್ ರಾವ್ ಕೇಸ್ ನಲ್ಲಿ ಫೀಟ್ ಮಾಡಿದ್ದೆವು. ಐದಾರು ವರ್ಷ ಯಾವುದೇ ಮರ್ಡರ್ ಅಗಿರಲಿಲ್ಲ. ಈಗ ಮತ್ತೆ ಪ್ರಾರಂಭವಾಗಿದೆ ಎಂದರು.
ಬಿಜೆಪಿ ಸರ್ಕಾರದಲ್ಲಿ ಸುಹಾಸ್ ಶೆಟ್ಟಿಗೆ ರೌಡಿ ಶೀಟರ್ ಮಾಡಿದ್ದು. ಒಂದು ಕಡೆ ಹಿಂದು ಸಂಘಟನೆಯವರ ಮತ್ತೊಂದು ಕಡೆ ಮುಸ್ಲಿಂ ಸಂಘಟನೆಯವರ ಭಯೋತ್ಪಾದಕರ ಫ್ಯಾಕ್ಟರಿ ಇದೆ. ಪ್ರೀ ಪ್ಲಾನ್ ಇವರು ಮಾಡ್ತಾರೆ ಅವರು ಮಾಡ್ತಾರೆ. ಸೌತ್ ಕೆನಾರ ಚರಿತ್ರೆ ತೆಗೆದು ನೋಡಿ, ಯಾರೇನು ಕಮ್ಮಿ ಇಲ್ಲ ಎಂದು ತಿಳಿಯುತ್ತದೆ. ನಗ್ನ ಸತ್ಯ ಎನ್ನುವ ಪುಸ್ತಕ ಬಿಡುಗಡೆ ಮಾಡಿದ್ದೇ.. ಗಲಭೆ ಕುರಿತು ಪುಸ್ತಕ ಇದನ್ನು ಓದಿದರೆ ಗೊತ್ತಾಗುತ್ತದೆ. ಯಾರ ಕಡೆಯವರೇ ಇರಲಿ ಶಿಕ್ಷೆಯಾಗಬೇಕು. ಗಲಾಟೆ ಮಾಡಿಸಿದವರಿಗೆ ಶಿಕ್ಷೆಯಾಗಬೇಕು. ಆರೋಪಿಗಳು ಜೈಲಿಗೆ ಹೋದಾಗ, ಕುಟುಂಬ ಸಂರಕ್ಷಣೆ ಮಾಡೋರು ಯಾರು? ಕೋರ್ಟ್ ಓಡಾಡೊರು ಯಾರು? ನಾವ್ಯಾರಿಗೂ ಕುಮ್ಮುಕ್ಕು ಕೊಡಲ್ಲ ನಮ್ಮ ಪಕ್ಷದವರು ಇದ್ದರೂ ಒಳಗೆ ಹಾಕಿ ಎನ್ನುತ್ತೇವೆ ಎಂದರು.
ಕೆಎಸ್‌ಆರ್ಟಿಸಿ ನೌಕರರ ಅರಿಯರ್ಸ್ ಬಿಜೆಪಿ ಸರ್ಕಾರದಲ್ಲಿ ಉಳಿಸಿದ ಬಾಕಿ ಹೆಚ್ಚಾಗಿದೆ. ಬಜೆಟ್ ಇಲ್ಲದೇ ಘೋಷಣೆ ಮಾಡಿದ ಹಿನ್ನೆಲೆ ಹೀಗಾಗಿದೆ. ಸದ್ಯದಲ್ಲಿ ಇದನ್ನು ಬಗೆ ಹರಿಸುತ್ತೇವೆ ಎಂದರು.
ಅವಧಿ ಮುಗಿದ ಯಾವುದೇ ವಾಹನ ಓಡಿದಲ್ಲ. ಹದಿನೈದು ವರ್ಷದ ಮೇಲೆ ಯಾವುದೇ ಕಾರಣಕ್ಕೂ ವಾಹನ ಓಡಿಸಲ್ಲ. ಹೊಸದಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ 700 ಬಸ್ ನೀಡುತ್ತೇವೆ. ಬಿಜೆಪಿ ಅವಧಿಯಲ್ಲಿ ಒಂದು ಬಸ್ ಕೊಟ್ಟಿಲ್ಲ ಎಂದು ಆರೋಪಿಸಿದರು.