ಹೊಸಪೇಟೆ: ಸಿ ಅಂಡ್ ಆರ್ ನಿಯಮ ತಿದ್ದುಪಡಿಯಾಗಲಿ ಎಂದು ಆಗ್ರಹಿಸಿ ನಗರದ ತಹಸೀಲ್ದಾರ್ ಕಚೇರಿ ಮುಂದೆ ಸೋಮವಾರ ಸಂಜೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಪ್ರತಿಭಟನೆ ನಡೆಸಿದರು.
2017ರ ನಿಯಮ ತಿದ್ದುಪಡಿಯಿಂದ ಜಿಪಿಟಿ ಮತ್ತು ಪಿಎಸ್‌ಟಿ ಎಂಬ ಶಿಕ್ಷಕರ ಹುದ್ದೆಯ ಪದನಾಮ ಸೃಷ್ಟಿಸಲಾಗಿದೆ. ಜಿಪಿಟಿ ಶಿಕ್ಷಕರನ್ನು 6 ರಿಂದ 8ನೇ ತರಗತಿಗೆ ಎಂದು ಸೂಚಿಸುವ ಮೂಲಕ ಪಿಎಸ್‌ಟಿ ಶಿಕ್ಷಕರನ್ನು ಹಿಂಬಡ್ತಿಗೆ ತಳ್ಳಿದೆ. ಸ್ಥಳೀಯ ಪಿಎಸ್‌ಟಿ ಶಿಕ್ಷಕರಿಗೆ ವರ್ಗಾವಣೆಗೆ ಅವಕಾಶವಿಲ್ಲದಂತಾಗಿದೆ ಎಂದು ಆಗ್ರಹಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ಜಿಪಿಟಿ ಮತ್ತು ಪಿಎಸ್‌ಟಿ ವಿಭಜನೆಯಿಂದ ಪಿಎಸ್‌ಟಿ ಶಿಕ್ಷಕರಿಗೆ ಸೇವಾ ಹಿರಿತನವಿದ್ದರೂ, ಮುಖ್ಯಗುರು, ಪ್ರೌಢ ಶಾಲಾ ಶಿಕ್ಷಕರಾಗಿ ಮುಂಬಡ್ತಿ ಪಡೆಯುವಂತಿಲ್ಲ. ಈ ಹಿನ್ನೆಲೆಯಲ್ಲಿ ಸಿ ಅಂಡ್ ಆರ್ ನಿಯಮವನ್ನು ಮತ್ತೆ ತಿದ್ದುಪಡಿ ಮಾಡಿ, ಪಿಎಸ್‌ಟಿ ಶಿಕ್ಷಕರಿಗೆ ನ್ಯಾಯ ಒದಗಿಸಬೇಕು. ವಿಶೇಷ ಪ್ರಕರಣವನ್ನಾಗಿ ಪರಿಗಣಿಸಿ ವಿಜಯನಗರ ಜಿಲ್ಲೆಯಲ್ಲಿ ಖಾಲಿಯಿರುವ ಜಿಪಿಟಿ ಹುದ್ದೆಗಳಿಗೆ ಪಿಎಸ್‌ಟಿ ಶಿಕ್ಷಕರ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲಾ ಜಿಲ್ಲಾಗೌರವಾಧ್ಯಕ್ಷ ಮಾರ್ಗದ್ಯಪ್ಪ, ತಾಲುಕು ಅಧ್ಯಕ್ಷ ಕೆ.ಬಸವರಾಜ್ ಪ್ರಮುಖರಾದ ಕುಭೇರ ಆಚಾರ್, ಕಡ್ಲಿ ವೀರಭದ್ರಪ್ಪ, ಆರ್,ಸುಧಾದೇವಿ, ಜಕಿರ್ ಹುಸೆನ್, ದ್ಯಾಮನಾಯ್ಕ ಇತರರಿದ್ದರು.