ಜಿಲ್ಲೆ

ತುಂಗಭದ್ರಾ ಒಡಿಲಲ್ಲಿ ಕೃಷಿ ಚಟುವಟಿಕೆ ಜೋರು

ಮಂಜುನಾಥ

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ತ್ರಿವಳಿ ರಾಜ್ಯಗಳಲ್ಲಿ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ದಿನೇ ದಿನೆ ಹೆಚ್ಚುತ್ತಿದೆ. ಇದರಿಂದಾಗಿ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಭರವಸೆ ಮೂಡಿದ್ದು, ಮೊದಲನೇ ಬೆಳೆ ಭತ್ತದ ನಾಟಿ ಚುರುಕುಗೊಂಡಿದೆ.

ಕಳೆದ ಬಾರಿ ಜಲಾಶಯದ 19ನೇ ಗೇಟ್ ದುರಂತದಿAದ ಈ ಭಾಗದ ರೈತರಲ್ಲಿ ಆತಂಕ ಮೂಡಿತು. ನಂತರ ತಜ್ಞರ ಪ್ರಕಾರ ಈ ಎಲ್ಲ ಗೇಟ್‌ಗಳು ಬದಲಿಸಬೇಕು. ಅಲ್ಲಿಯ ವರೆಗೆ ಜಲಾಶಯ ಶೇ.80ರಷ್ಟು ಮಾತ್ರ ತುಂಬೇಕು ಎಂದು ಟಿಬಿಬಿ ಆಡಳಿತ ಮಂಡಳಿ ಎಂದು ತಿಳಿಸಿದೆ. ಆದ್ದರಿಂದ ಈ ಬಾರಿ ಒಂದು ತಿಂಗಳ ಮುನ್ನ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಚಟುವಟಿಕೆ ಜೋರಾಗಿದ್ದು, ಮೊದಲ ಬೆಳೆ ಭತ್ತದ ನಾಟಿ ಕಾರ್ಯ ಶುರುವಾಗಿದೆ.

ಮಳೆನಾಡು ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಸೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಿಂದ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಆದ್ದರಿಂದ ತುಂಗಭದ್ರಾ ಒಡಿಲಲ್ಲಿ ಭತ್ತದ ನಾಟಿ ಸೇರಿ ಇತರೆ ಬೆಳೆಗಳ ಬಿತ್ತನೆ ಕಾರ್ಯ ಸಿದ್ದತೆ ನಡೆದಿದೆ. ಈಗಾಗಲೇ ಕೊಳವೇ ಬಾರಿ ಇರುವ ಜಮೀನುಗಳಲ್ಲಿ ಭತ್ತದ ಸಸಿ ಮಡಿಗಳು ಹಾಕಿಕೊಂಡಿರುವ ರೈತರು, ಕೆಲ ದಿನಗಳಿಂದ ನಾಟಿ ಕಾರ್ಯ ಆರಂಭ ಮಾಡಿದ್ದಾರೆ.

ಅಚ್ಚಕಟ್ಟು ಪ್ರದೇಶದಲ್ಲಿ 9.26 ಲಕ್ಷ ಎಕರೆ ಪ್ರದೇಶ ನೀರಾವರಿ ರಾಜ್ಯದ ಪಾಲಿದ್ದರೆ, ಆಂದ್ರಪ್ರದೇಶದಲ್ಲಿ 6.61 ಲಕ್ಷ ಎಕರೆ, ತೆಲಂಗಾಣದಲ್ಲಿ 87 ಸಾವಿರ ಎಕರೆ ಪದೇಶ ಒಟ್ಟು 16.29 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರು ತುಂಗಭದ್ರಾ ಜಲಾಶಯವನ್ನು ನಂಬಿದ್ದಾರೆ. ಈ ಪೈಕಿ ಅಂದಾಜು 12 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಆದ್ದರಿಂದ ಮೊದಲನೇ ಬೆಳೆಗೆ ಬೇಕಾಗಿರುವ ಎಲ್ಲಾ ಸಿದ್ದತೆಗಳನ್ನು ರೈತರು ಈಗಾಗಲೇ ಮಾಡಿಕೊಂಡಿದ್ದಾರೆ.

ಜಲಾಶಯಕ್ಕೆ ರೈತರ ದೌಡು

ಕಳೆದ ಬಾರಿ ತುಂಗಭದ್ರಾ ಜಲಾಶಯ 19ನೇ ಗೇಟ್ ದುರಂತದಿAದ ಆತಂಕದಲ್ಲಿದ್ದ ರೈತರು ಆಗಾಗ ಟಿಬಿಡ್ಯಾಂಗೆ ಬೇಟಿ ನೀಡುತ್ತಿದ್ದಾರೆ. ಈ ಬಾರಿ ಮುಂಗಾರ ಶುಭ ಆರಂಭ ಮಾಡಿದೆ. ಎಲ್ಲೆಡೆ ಉತ್ತಮ ಮಳೆಯಾಗುತ್ತಿದೆ. ಜಲಾಶಯಕ್ಕೂ ಒಳಹರಿವು ಹರಿದು ಬರುತ್ತಿದೆ. ಇದರಿಂದಾಗಿ ಸ್ಥಳೀಯರು ಸೇರಿದಂತೆ ಬಳ್ಳಾರಿ, ಕೊಪ್ಪಳ, ರಾಯಚೂರಿನ ರೈತರು ದೌಡಾಯಿಸುತ್ತಿದ್ದಾರೆ.

ಶೇ.40 ಭರ್ತಿಯಾದರೆ ಕಾಲುವೆಗಳಿಗೆ ನೀರು

ತುಂಗಭದ್ರಾ ಜಲಾಶಯದಲ್ಲಿ ಈಗಾಗಲೇ ಉತ್ತಮ ಒಳಹರಿವು ದಾಖಲಾಗಿದೆ. ಐದು ದಿನದಲ್ಲಿ 23 ಟಿಎಂಸಿಗೂ ಅಧಿಕ ನೀರು ಸಂಗ್ರಹವಾಗಿದೆ. ಶೇ.40 ಟಿಎಂಸಿ ಸಂಗ್ರಹವಾಗಿ, ಉತ್ತಮ ಒಳಹರಿವು ದಾಖಲಾದರೇ ಐಸಿಸಿ ಸಭೆ ಕರೆದು ನಂತರ ಕಾಲೂವೆಗಳಿಗೆ ನೀರು ಇರಿಸಲಾಗುತ್ತದೆ. ಇದೇ ರೀತಿ ಜಲಾಶಯಕ್ಕೆ ಒಳಹರಿವು ನಿರಂತವಾಗಿದ್ದರೆ ಕೆಲ ವಾರದಲ್ಲಿ ವಾರದಲ್ಲಿ ಶೇ.40ರಷ್ಟು ಭರ್ತಿಯಾಗಲಿದೆ.

ಕಳೆದ ಬಾರಿ ಟಿಬಿಡ್ಯಾಂ 19ನೇ ಗೇಟ್ ದುರಂತದಿAದ ಕಂಗೆಟ್ಟಿದ ರೈತರಿಗೆ ಈ ಭಾರಿ ಉತ್ತಮ ಮಳೆಯಾಗಿ ಭರವಸೆ ಮೂಡಿಸಿದೆ. ಜಲಾಶಯದಲ್ಲಿ ಕೂಡ ಒಳಹರಿವು ಹೆಚ್ಚಿದೆ. ಇದರಿಂದ ಅಚ್ಚುಕಟ್ಟು ಪ್ರದೇಶದಲ್ಲಿನ ರೈತರು ಭತ್ತ ಸೇರಿ ಇತರೆ ಬೆಳೆಗೆ ಸಿದ್ದತೆ ನಡೆಸಿದ್ದಾರೆ. - ಗಂಟೆ ಸೋಮಶೇಖರ್, ರೈತ ಮುಖಂಡ, ಹೊಸಪೇಟೆ