ತುಂಗಭದ್ರಾ ಜಲಾಶಯದ 30 ಗೇಟ್ ಮೂಲಕ ನದಿಗೆ ಹೆಚ್ಚವರಿ ನೀರು ಬಿಡುಗಡೆ ಮಾಡಲಾಯಿತು. 
ಜಿಲ್ಲೆ

ಟಿಬಿಡ್ಯಾಂನಿಂದ ಲಕ್ಷ ಕ್ಯೂಸೆಕ್ ನೀರು ನದಿಗೆ

ಮಂಜುನಾಥ

ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಿದ್ದರಿಂದ 30 ಗೇಟ್ ಮೂಲಕ ನದಿಗೆ ಒಂದು ಲಕ್ಷ ಕ್ಯೂಸೆಕ್‌ಗೂ ಅಧಿಕ ಹೆಚ್ಚವರಿ ನೀರು ಬಿಡುಗಡೆ ಮಾಡಲಾಗಿದೆ.

ಜಲಾಶಯದ ಒಳಹರಿವಿನ ಪ್ರಮಾಣ ಆಧಾರಿಸಿ 20 ಗೇಟ್‌ಗಳನ್ನು ತಲಾ 2.5 ಅಡಿ ಹಾಗೂ 10 ಗೇಟ್‌ಗಳನ್ನು ತಲಾ ಎರಡು ಅಡಿ ಒಟ್ಟು 30 ಗೇಟ್ ತೆರೆದು ನದಿಗೆ 107035 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. 98702 ಕ್ಯೂಸೆಕ್ ಒಳಹರಿವು ಇದ್ದು, 105.788 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 101.695 ಟಿಎಂಸಿ ನೀರು ಸಂಗ್ರಹವಾಗಿದೆ.

ಸದ್ಯ ಜಲಾಶಯದಲ್ಲಿ 1631.98 ಅಡಿ ನೀರು ಸಂಗ್ರಹವಾಗಿದೆ. ನದಿ ಹಾಗೂ ಕಾಲುವೆಗಳಿಗೆ ಒಟ್ಟು 116026 ಕ್ಯೂಸೆಕ್ ಹೊರಹರಿವಿದೆ. ಇನ್ನೂ ಜಲಾಶಯಕ್ಕೆ ಒಳ ಹರಿವು ಪ್ರಮಾಣ ಹೆಚ್ಚಾದಂತೆ ಹೆಚ್ಚುವರಿ ನೀರನ್ನು1.20 ಲಕ್ಷ ಕ್ಯೂಸೆಕ್ ವರೆಗೆ ನದಿಗೆ ಹರಿಬಿಡಲಾಗುತ್ತದೆ. ಜತೆಗೆ ಹಂಪಿಯ ನದಿ ಪಾತ್ರದಲ್ಲಿರುವ ಕೆಲ ಸ್ಮಾರಕ, ಮಂಟಪಗಳು ಇನಷ್ಟು ಮುಳುಗಡೆಯಾಗಲಿವೆ.