ಹೊಸಪೇಟೆ: ತುಂಗಾ ಮತ್ತು ವರದ ನದಿಗಳಿಂದ ಭಾರಿ ಪ್ರಮಾಣದಲ್ಲಿ ತುಂಗಭದ್ರಾ ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದು, 33 ಗೇಟ್ ಮೂಲಕ ಅಂದಾಜು 1.50 ಲಕ್ಷ ಕ್ಯೂಸೆಕ್ ಹೆಚ್ಚವರಿ ನೀರು ನದಿಗೆ ಬಿಡುಗಡೆಯಾಗಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ತುಂಗಾ ಜಲಾಶಯದಿಂದ ಶುಕ್ರವಾರ 58 ಸಾವಿರ ಕ್ಯೂಸೆಕ್ ಒಳಹರಿವಿಗೆ 68 ಸಾವಿರ ಕ್ಯೂಸೆಕ್ ನೀರು ಹೊರಗೆ ಬಿಡಲಾಗಿದೆ. ವರದ ನದಿಯಿಂದ ಕೂಡ ಒಳಹರಿವು ಸರಿಸುಮಾರು ಹರಿದು ಬರುತ್ತಿದೆ. ಶನಿವಾರ ತುಂಗಭದ್ರಾ ಜಲಾಶಯಕ್ಕೆ 1.31 ಲಕ್ಷ ಕ್ಯೂಸೆಕ್ ಗೂ ಅಧಿಕ ಒಳಹರಿವಿದೆ. ಜಲಾಶಯದ 25 ಗೇಟ್‌ಗಳನ್ನು ತಲಾ 3.5 ಅಡಿ ಹಾಗೂ 8 ಗೇಟ್‌ಗಳನ್ನು ತಲಾ ಒಂದು ಅಡಿ ತೆರೆದು ನದಿಗೆ 1,41,485 ಕ್ಯೂಸೆಕ್ ನೀರು ನದಿಗೆ ಹಾಗೂ 8,895 ಕ್ಯೂಸೆಕ್ ನೀರು ಕಾಲುವೆಗಳಿಗೆ, ಒಟ್ಟು 1,50,500 ನೀರು ಹೊರೆಗೆ ಬಿಡಲಾಗುತ್ತಿದೆ. 105.788 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 101.523 ಟಿಎಂಸಿ ನೀರು ಸಂಗ್ರಹವಾಗಿದೆ. 1633 ಅಡಿ ಎತ್ತರದ ಜಲಾಶಯದಲ್ಲಿ 1631.68 ಅಡಿ ನೀರು ಸಂಗ್ರಹವಾಗಿದೆ. ಇನ್ನೂ ಜಲಾಶಯಕ್ಕೆ ಒಳ ಹರಿವು ಪ್ರಮಾಣ ಹೆಚ್ಚಾದಂತೆ ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗುತ್ತದೆ. ಸಾಕಷ್ಟು ಪ್ರಮಾಣದ ನೀರು ನದಿಗೆ ಹರಿಸುತ್ತಿರುವುದರಿಂದ ತುಂಗಭದ್ರಾ ನದಿ ಸದ್ಯ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿ ಪಾತ್ರದಲ್ಲಿರುವ ವಿಧಿವಿಧಾನ ಮಂಟಪ, ಪುರಂದರ ದಾಸರ ಮಂಟಪ, ಕೊಪ್ಪಳ, ಬಳ್ಳಾರಿ ವ್ಯಾಪ್ತಿಯಲ್ಲಿ ಕೂಡ ಹಲವು ಸ್ಮಾರಕ, ಮಂಟಪಗಳು ಮುಳುಗಡೆಯಾಗಿವೆ. ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗಿದ್ದು, ಸಾಕಷ್ಟು ಪ್ರಮಾಣದ ಬೆಳೆ ಹಾನಿಯಾಗಿದೆ.
ನಿರ್ಬಂಧ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಭದ್ರಾ ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡಲು ನಿರ್ಬಂಧ ಹಾಕಲಾಗಿದೆ. ಮೀನುಗಾರರು ನದಿಗಿಳಿಯುವಂತಿಲ್ಲ, ಹರಿಗೋಲು ಹಾಕುವಂತಿಲ್ಲ ಎಂದು ನಿರ್ಬಂಧ ಹಾಕಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕಂದಾಯ ಇಲಾಖೆ ಗ್ರಾಮ ಸಹಾಯಕರು ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಯನ್ನು ನದಿ ಪಾತ್ರಗಳಲ್ಲಿ ನಿಯೋಜಿಸಲಾಗಿದೆ. ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಹೆಚ್ಚಳವಾಗುತ್ತಿದ್ದು ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ. ನದಿ ಪಾತ್ರಗಳಲ್ಲಿ ತಿರುಗಾಡದಂತೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ಕಂದಾಯ ಇಲಾಖೆ, ಪೆuಟಿಜeಜಿiಟಿeಜಲೀಸ್ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮಾಹಿತಿ ನೀಡಿದ್ದಾರೆ.