ಜಿಲ್ಲೆ

ಸಕ್ಕರೆ ಕಾರ್ಖಾನೆಯನ್ನು ಪುನರ್ ಆರಂಭಿಸಿ

ಮಂಜುನಾಥ

ಹೊಸಪೇಟೆ: ಸಕ್ಕರೆ ಕಾರ್ಖಾನೆಯನ್ನು ಪುನರ್ ಆರಂಭಿಸುವAತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಗರದಲ್ಲಿ ಬುಧವಾರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಜಿಲ್ಲಾಧ್ಯಕ್ಷ ಟಿ.ನಾಗರಾಜ ಮಾತನಾಡಿ, ಕೆಲ ಕಾಣದ ಕೈಗಳು ರೈತರ ನಡುವೆ ಅಪನಂಬಿಕೆಗಳನ್ನು ಹುಟ್ಟು ಹಾಕಿ 2016ರಲ್ಲಿ ಸಕ್ಕರೆ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚುವಂತೆ ಮಾಡಿದರು. 9 ದಶಕದ ಸುದೀರ್ಘ ಇತಿಹಾಸ ಇದ್ದ ಸಕ್ಕರೆ ಕಾರ್ಖಾನೆಯನ್ನು ಮುಚ್ಚಿದರಿಂದ ನಷ್ಟದಲ್ಲಿ ದೂರದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡುವಂತಾಗಿದೆ ಎಂದು ಆಗ್ರಹಿಸಿದರು.

ಇಲ್ಲಿ ರಾಜಕೀಯವಾಗಿ ಸಕ್ಕರೆ ಕಾರ್ಖಾನೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡ ಹಲವು ಬಾರಿ ನೀಡಿ ಭರವಸೆ ಸುಳ್ಳಾಗಿದೆ. ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಯಾವುದೇ ನಿಲುವಲ್ಲಿ ಸ್ಪಷ್ಟತೆಯಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡಲು ಸಿದ್ದರಿರುತ್ತೇವೆ. ಇದಕ್ಕೆ ಅವಕಾಶ ಮಾಡದೇ ಸ್ಥಳಿಯವಾಗಿಯೇ ಸಕ್ಕರೆ ಕಾರ್ಖಾನೆ ಪುನರ್ ಆರಂಭಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಭಾಗದಲ್ಲಿ ಭತ್ತ ಕಟಾವಿಗೆ ಬಂದಿದೆ. ಕ್ವಿಂಟಲ್ ಭತ್ತಕ್ಕೆ ಕೇವಲ 1750 ರಿಂದ 1850 ರೂ.ಗೆ ಮಾತ್ರ ಖರೀದಿಯಾಗುತ್ತಿದೆ. ಕಳೆದ ಬಾರಿಗಿಂತ 400 ರಿಂದ 500 ರೂ. ನಷ್ಟ ಅನುಭವಿಸುವಂತಾಗಿದೆ. ಈ ಕೂಡಲೇ ಕ್ವಿಂಟಲ್ ಭತ್ತಕ್ಕೆ 2500 ರೂ.ನಿಗಧಿಪಡಿಸಬೇಕು. ಭತ್ತ ಕಟಾವು ಮಾಡುವ ಮಿಷಿನ್ 1800 ರೂ. ನಿಗಧಿಪಡಿಸಬೇಕು. ತುಂಗಭದ್ರ ಜಲಾಶಯದಲ್ಲಿ ಎಲ್ಲ ಗೇಟ್‌ಗಳನ್ನು ಜೂನ್ ಒಳಗಾಗಿ ಅಳವಡಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಸಣ್ಣಕಿ ರುದ್ರಪ್ಪ, ಎಂ.ಜಡಿಯಪ್ಪ, ಆರ್.ಆರ್.ತಾಯಪ್ಪ, ಗಾಳೇಪ್ಪ, ಎಲ್.ನಾಗೇಶ್, ಸುರೇಶ್, ಗೋವಿಂದಪ್ಪ, ಮೂರ್ತಿ, ರೇವಣಸಿದ್ದಪ್ಪ, ರಾಮಾಂಜಿನಿ, ಸತೀಷ, ಬಸವರಾಜ ಇತರರಿದ್ದರು.