ಜಿಲ್ಲೆ

ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪನಾ ದಿನಾಚಾರಣೆ

ಮಂಜುನಾಥ

ಹೊಸಪೇಟೆ: ಬಂಡವಾಳಶಾಹಿ ವ್ಯವಸ್ಥೆ ಸರ್ವ ರಂಗಗಳಲ್ಲಿ ಕೊಳೆತುಹೊಗಿದ್ದು, ಸಮಾಜವಾದಿ ವ್ಯವಸ್ಥೆ ಬಿಟ್ಟು ಬೇರೆ ಮಾರ್ಗವಿಲ್ಲ ಎಂದು ಎಸ್‌ಯುಸಿಐ ಬಳ್ಳಾರಿ ಜಿಲ್ಲಾ ಸಮಿತಿ ಕಾರ್ಯದರ್ಶಿ ರಾಧಾಕೃಷ್ಣ ಉಪಾದ್ಯಾ ಹೇಳಿದರು.

ನಗರದ ಎಸ್‌ಯುಸಿಐ ಪಕ್ಷದ ಕಚೇರಿಯಲ್ಲಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷದ 77ನೇ ಸಂಸ್ಥಾಪನಾ ದಿನಾಚಾರಣೆಯಲ್ಲಿ ಮಾತನಾಡಿದರು.

ಬೆರಳೆಣಿಕಯಷ್ಟು ಬಂಡವಾಳಶಾಹಿಗಳು ಮಿಲಿಯಾದಿಪತಿಗಳಾಗುತ್ತಿರುವ ಹಾಗೂ ಅಸಂಖ್ಯಾತ ಬಡವರು ಎಲ್ಲದ್ದನ್ನೂ ಕಳೆದುಕೊಂಡು ಅತೀ ಬಡವರಾಗುತ್ತೀರುವ ಪ್ರಸಕ್ತ ವ್ಯವಸ್ಥೆ ವರ್ಗ ವಿಭಜಿತ ವ್ಯವಸ್ಥೆಯಾಗಿದ್ದು 47ರ ಸ್ವಾತಂತ್ರö್ಯ ಬಂಡವಾಳಶಾಹಿಗಳ ಪಾಲಾಗಿದೆ.

ಭೌತಿಕ ಸಂಗತಿಗಳAತೆ, ಸಮಾಜ ಕೂಡಾ ನಿರಂತರ ಬದಲಾವಣೆಗೆ ಒಳಗಾಗುತ್ತಿದೆ. ಬೆರಳೆಣಿಕಯಷ್ಟು ಬಂಡವಾಳಶಾಹಿಗಳು ಮಿಲಿಯಾದಿಪತಿಗಳಾಗುತ್ತಿರುವ ಹಾಗೂ ಅಸಂಖ್ಯಾತ ಬಡವರು ಎಲ್ಲದ್ದನ್ನೂ ಕಳೆದುಕೊಂಡು ಅತೀ ಬಡವರಾಗುತ್ತೀರುವ ಪ್ರಸಕ್ತ ವ್ಯವಸ್ಥೆ ವರ್ಗ ವಿಭಜಿತ ವ್ಯವಸ್ಥೆಯಾಗಿದ್ದು 47ರ ಸ್ವಾತಂತ್ರö್ಯ ಬಂಡವಾಳಶಾಹಿಗಳ ಪಾಲಾಗಿದೆ. ಭಾರತದ ಸ್ಥಿತಿಗೆ ಅನ್ವಯಿಸಿ ‘ಬಂಡವಾಳಶಾಹಿ ವಿರೋಧಿ, ಸಮಾಜವಾದಿ ಕ್ರಾಂತಿ’ ಪಥದಲ್ಲಿ ಮುನ್ನಡೆಯುವ ಎಸ್.ಯು.ಸಿ.ಐ-ಕಮ್ಯುನಿಸ್ಟ್ ಪಕ್ಷವನ್ನು 1948ರ ಏ.24ರಂದು ಹೋರಾಟಗಾರ ಶಿವದಾಸ್ ಘೋಷ್ ಅವರು ಸ್ಥಾಪಿಸಿದರು. ಐದು ಸದಸ್ಯರಿಂದ ಆರಂಭವಾದ ಪಕ್ಷವು ರಾಜಿರಹಿತ ಹೋರಾಟದ ಮೂಲಕ ಜನತೆಯ ವಿಶ್ವಾಸ ಗೆದ್ದು, ದೇಶದ 25ಕ್ಕು ಹೆಚ್ಚು ರಾಜ್ಯಗಳಲ್ಲಿ ವಿಸ್ತರಿಸಿರುವುದು ಘೋಷ್ ಅವರ ವಿಚಾರಗಳÀ ಶಕ್ತಿ ಎಂದರು.

ರಾಜ್ಯ ಸಮಿತಿ ಸದಸ್ಯೆ ಎಂ.ಮAಜುಳಾ ಮಾತನಾಡಿ, ಬಂಡವಾಳಶಾಹಿ ವ್ಯವಸ್ಥೆ ಜಾರಿಯಲ್ಲಿದ್ದರೂ ಇನ್ನು ಉಳಿದುಕೊಂಡಿರುವ ಜಮೀನ್ದಾರಿ ವ್ಯವಸ್ಥೆಯ ಆಚರಣೆಗಳು, ಪ್ರಸಕ್ತ ವ್ಯವಸ್ಥೆ ವ್ಯಕ್ತಿವಾದವು ಶೋಷಣೆ ಸಾಂಸಕೃತಿಕ ರಂಗದಲ್ಲೂ ಪ್ರವೇಶಿಸಿದೆ. ಸಮಾಜದಲ್ಲಿ ಕೊಲೆ, ಸುಲಿಗೆ, ಭ್ರಷ್ಟಾಚಾರ, ಕೋಮುವಾದ, ಜಾತಿವಾದ, ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗಲು ಈ ವ್ಯವಸ್ಥೆ ಕಾರಣ. ಸರ್ವ ಜನರ ವಿಮುಕ್ತಿಯನ್ನು ಸಾಧಿಸಬೇಕಾದರೇ ಸಾಮೂಹಿಕ ಸಂಘಟಿಕ ಚಳುವಳಿಗಳು ಮಾತ್ರ ಭರವಸೆ ಎಂದರು.