ಹೊಸಪೇಟೆಯ ಡಿ.ದೇವರಾಜು ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ಜಿಪಂ ಸಿಇಒ ಬಿ.ಸದಾಶಿವ ಪ್ರಭು ಗುರುವಾರ ಭೇಟಿ ನೀಡಿ, ಮಕ್ಕಳಿಂದ ಮಾಹಿತಿ ಪಡೆದರು. ವಾರ್ಡನ್ ಅಶ್ವಿನಿ ಲಟ್ಟಿ ಇದ್ದರು. 
ಜಿಲ್ಲೆ

ವಿದ್ಯಾರ್ಥಿಗಳಿಗೆ ಶುಚಿ-ರುಚಿ ಆಹಾರ ನೀಡಿ

ನರೇಶ್ ಕುಮಾರ್

ಹೊಸಪೇಟೆ: ನಗರದ ಡಿ.ದೇವರಾಜು ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ಜಿಪಂ ಸಿಇಒ ಬಿ.ಸದಾಶಿವ ಪ್ರಭು ಗುರುವಾರ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲಿಸಿದರು.

ವಸತಿ ನಿಲಯದಲ್ಲಿ ತಯಾರಿಸುತ್ತಿದ್ದ ಬೆಳಗಿನ ತಿಂಡಿಯ ವಿವರ ಪಡೆದು ಚಹಾ ಸೇವಿಸಿ ಗುಣಮಟ್ಟವನ್ನು ಪರೀಕ್ಷಿಸಿದರು. ಅಲ್ಲದೆ, ತರಕಾರಿ ಸಂಗ್ರಹ, ಅಡುಗೆ ಕೋಣೆ, ಕುಡಿಯಲು ಮತ್ತು ಅಡುಗೆಗೆ ಬಳಸುವ ನೀರಿನ ವ್ಯವಸ್ಥೆಯನ್ನು ಸಮಗ್ರವಾಗಿ ಪರಿಶೀಲಿಸಿದರು. ವಸತಿ ನಿಲಯದ ಸ್ವಚ್ಛತೆಗೆ ತೃಪ್ತಿ ವ್ಯಕ್ತಪಡಿಸಿದರೂ, ಇನ್ನೂ ಹೆಚ್ಚಿನ ಸ್ವಚ್ಛತೆಗೆ ಗಮನ ಹರಿಸಲು ಸಿಇಒ ಸದಾಶಿವ ಪ್ರಭು ಸೂಚಿಸಿದರು.

ಇಲಾಖೆ ನಿಗದಿಪಡಿಸಿರುವಂತೆ ವಿದ್ಯಾರ್ಥಿಗಳಿಗೆ ಶುಚಿ ಮತ್ತು ರುಚಿಯಾದ ಆಹಾರ ನೀಡಬೇಕು. ದಾಸ್ತಾನು ಪುಸ್ತಕವನ್ನು ನಿಯಮಿತವಾಗಿ ಬರೆಯಬೇಕು ಎಂದು ವಾರ್ಡನ್ ಅಶ್ವಿನಿ ಲಟ್ಟಿ ಅವರಿಗೆ ನಿರ್ದೇಶಿಸಿದರು. ಇದೇ ವೇಳೆ ವಿದ್ಯಾರ್ಥಿಗಳಿಂದ ಸಮಸ್ಯೆಗಳನ್ನು ಆಲಿಸಿ, ಹೆಚ್ಚಿನ ಆಸಕ್ತಿಯಿಂದ ಅಭ್ಯಾಸ ಮಾಡಬೇಕು. ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಬೇಕು ಎಂದು ಕಿವಿಮಾತು ಹೇಳಿದರು.