ಹೊಸಪೇಟೆ: ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಮತ್ತು ಸಮಾಜವನ್ನು ಎಸ್.ಟಿ. ಕೆಟಗರಿಗೆ ಸೇರ್ಪಡೆ ಮಾಡಬೇಕು ಎಂದು ಎಸ್.ಎಸ್.ಕೆ. ಸಮಾಜದ ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ ಹನುಮಂತ ಸಾ ನಿರಂಜನ್ ಒತ್ತಾಯಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ 10ರಿಂದ 12 ಲಕ್ಷ ಜನಸಂಖ್ಯೆಯ ಹೊಂದಿದ್ದು, ಇದುವರೆಗೆ ಸಮಾಜ ಸರ್ವಾಂಗೀಣ ಅಭಿವೃದ್ಧಿ ಕಂಡಿಲ್ಲ. ಸಮಾಜದವರು ಸಾವಜಿ ಹೊಟೇಲ್, ಕೂಲ್ಡ್ರಿಂಕ್ಸ್ ಅಂಗಡಿ, ಇಡ್ಲಿ ಸೆಂಟರ್, ಡಿಟಿಪಿ ಸೆಂಟರ್, ಗ್ಯಾರೇಜ್, ಟೈಲರ್, ಪಂಚರ್ ಅಂಗಡಿ, ವೇಲ್ಡಿಂಗ್ ಕೆಲಸ ಸೇರಿದಂತೆ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಸಮಾಜ ಶಿಕ್ಷಣದಲ್ಲಿ ಭಾರೀ ಹಿನ್ನಡೆಯಲಿದೆ. ಹಾಗಾಗಿ ಸಮಾಜದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಮತ್ತು ಸಮಾಜವನ್ನು ಎಸ್.ಟಿ. ಕೆಟಗರಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.
ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಸಮಾಜವನ್ನು ಸಂಘಟಿಸಿ ರಾಜ್ಯ ಮಟ್ಟದ ದೊಡ್ಡ ಸಮಾವೇಶ ಮಾಡುವ ಮೂಲಕ ಸರ್ಕಾರದ ಎದುರು ಹಕ್ಕೊತ್ತಾಯ ಮಂಡಿಸಲಾಗುವುದು ಎಂದರು.
ಮುಖAಡರಾದ ಕಾಶೀನಾಥಸಾ ಬಾವಿಕಟ್ಟಿ,ರಾಘವೇಂದ್ರ ಕಬಾಡಿ, ದುಂಡುಸಾ ಜೆಡಿ, ಪ್ರಕಾಶ ಮೆಹರವಾಡೆ, ಚೇತನ್ ಪವಾರ್, ರಾಮಚಂದ್ರಸಾ ಭರಾಡೆ, ಯಲ್ಲಪ್ಪ ಕಾಟವಾ, ವಿಶ್ವನಾಥ ರಂಗರೇಜ್, ವಿಶಾಲ್ ಜಿತುರೆ ಮತ್ತಿತರರಿದ್ದರು.