ಹೊಸಪೇಟೆ : ಶೃಂಗೇರಿ ಸಂಸ್ಥಾನದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ನಗರದಲ್ಲಿ ಪುರ ಪ್ರವೇಶ ಮಾಡಿದ್ದು, ಶ್ರೀಗಳಿಗೆ ರ‍್ಣಕುಂಭ ಹಾಗೂ ಭಜನಾ ಮಂಡಳಿಯ ಗೀತಗಾಯನ ಋತ್ವಿಕರ ವೇದಘೋಷಗಳೊಂದಿಗೆ ಸ್ವಾಗತಿಸಲಾಯಿತು.
ಚಿಂತಾಮಣಿ ಮಠದ ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಶ್ರೀಗಳು, ಬ್ರಾಹ್ಮಣ ಸಂಘದ ಪದಾಧಿಕಾರಿಗಳು ಮಹಿಳಾ ಭಜನಾ ಮಂಡಳಿಯ ಸದಸ್ಯರು ಹಾಗೂ ವಿವಿಧ ಸಮಾಜದ ಗಣ್ಯರು ಸ್ವಾಗತಕೋರಿ ಶೋಭಾಯಾತ್ರೆಗೆ ಸ್ವಾಗತ ಕೋರಿದರು.
ವಿಜಯನಗರ ಸಂಸ್ಥಾನದ ಸ್ಥಾಪಕ ವಿದ್ಯಾರಣ್ಯರು ಶೃಂಗೇರಿ ಸಂಸ್ಥಾನ 12ನೇ ಪೀಠಾಧಿಪತಿಗಳಾಗಿದ್ದು ಆ ಪರಂಪರೆಗೂ ಪುಣ್ಯಕ್ಷೇತ್ರ ಹಂಪಿ ಹೊಸಪೇಟೆಗೂ ಅವಿನಾಭಾವ ಸಂಬAಧವಿದೆ, ಈ ಹಿನ್ನೆಲೆಯಲ್ಲಿಯೆ ಶ್ರೀಗಳು ಮೂರುದಿನಗಳ ಪ್ರವಾಸದ ಮೊದಲ ದಿನ ಹಂಪಿಯ ಆನೆಗುಂದಿ ಮಹಾ ಸಂಸ್ಥಾನಕ್ಕೆ ಭೇಟಿ ನೀಡಿ ಕಾಶಿ ವಿಶ್ವೇಶ್ವರ ಸ್ವಾಮಿಗೆ ಅಭಿಷೇಕ ಸಲ್ಲಿಸಲಿದ್ದಾರೆ. ಸಂಜೆ ಹುಲಿಗೆಮ್ಮ ತಾಯಿಯ ರ‍್ಶನ ಪಡೆದು ಹೊಸಪೇಟೆ ಪುರ ಪ್ರವೇಶ ಮಾಡಿದರು.
ವಡಕರಾಯಸ್ವಾಮಿ ದೇವಸ್ಥಾನದಿಂದ ವಾಸವಿ ಕಲ್ಯಾಣ ಮಂಟಪದ ವರೆಗೆ ರ‍್ಣಕುಂಭ ಸ್ವಾಗತ ಹಾಗೂ ಶೋಭಾಯಾತ್ರೆ ನಡೆಯಿತು. ವಾಸವಿ ದೇಗುಲದಲ್ಲಿ ಶ್ರೀಗಳ ಧೂಳಿ ಪಾದಪೂಜೆ, ಮತ್ತು ಫಲ ಮಂತ್ರಾಕ್ಷತೆ ನಡೆಯಿತು. ನಂತರ ಚಂದ್ರಮೌಳೇಶ್ವರಸ್ವಾಮಿಯ ಪೂಜೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು.
ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ.ದಿವಾಕರ, ರ‍್ಯರ‍್ಶಿ ವೇಣುಗೋಪಾಲ ವೈದ್ಯ, ಪ್ರಮುಖರಾದ ಚಂದ್ರಕಾAತ ಕಾಮತ್, ಅನಂತಪದ್ಮನಾಭ, ನಾಗರಾಜ್, ಅನಂತ ರಮೇಶ ಪುರೋಹಿತ, ವಿಶ್ವನಾಥ ಭಟ್, ರ‍್ತಿನಾಥ ರ‍್ತಕೋಟಿ, ಪವನ ಇತರರಿದ್ದರು.