ಜಿಲ್ಲೆ

ಸ್ಕೋಲಿಯೋಸಿಸ್ ಪತ್ತೆಯಾದರೆ ಚಿಕಿತ್ಸೆಗೆ ಮುಂದಾಗಿ

ಮಂಜುನಾಥ

ಹೊಸಪೇಟೆ: ಸ್ಕೋಲಿಯೋಸಿಸ್ ಬೆನ್ನು ಮೂಳೆಯ ಪಕ್ಕದ ವಕ್ರರೇಖೆಯ ಲಕ್ಷಣಗಳು ಪತ್ತೆಯಾದರೇ ವೈದ್ಯರ ಬಳಿ ಸೂಕ್ತ ಚಿಕಿತ್ಸೆಗೆ ಮುಂದಾಗಿ ಎಂದು ಡಿಎಚ್‌ಒ ಡಾ.ಶಂಕರ್ ನಾಯ್ಕ ಹೇಳಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಬೆನ್ನು ಮೂಳೆಯ ನ್ಯೂನ್ಯತೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರ ಬೆನ್ನು ಮೂಳೆಯು ಸಾಮಾನ್ಯವಾಗಿ ವಕ್ರರೇಖೆಗಳನ್ನು ಹೊಂದಿರುತ್ತದೆ. ಮತ್ತು ಹಿಂದಿನಿAದ ನೋಡಿದಾಗ, ಬೆನ್ನು ಮೂಳೆಯು ನೇರವಾಗಿ ಕಾಣುತ್ತದೆ. ಆದಾಗ್ಯೂ ಸ್ಕೋಲಿಯೋಸಿಸ್ ಇರುವ ಮಕ್ಕಳು ಮತ್ತು ಹದಿಹರೆಯದವರು ಬೆನ್ನುಮೂಳೆಯ ಅಸಹಜ ಎಸ್ ಆಕಾರದ ಮತ್ತು ಸಿ ಆಕಾರದ ವಕ್ರರೇಖೆಯನ್ನು ಹೊಂದಿರುತ್ತಾರೆ. ಬೆನ್ನುಮೂಳೆಯ ಕಾಯಿಲೆಯ ಲಕ್ಷಣಗಳು ಮತ್ತು ಅವರಿಗೆ ಅವಶ್ಯವಿರುವ ಹಾರೈಕೆ ಮತ್ತು ವೈದ್ಯಕೀಯ ಸಲಹೆಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ಶಿಬಿರದ ಉದ್ದೇಶವಾಗಿದೆ. ಬೆಂಗಳೂರಿನ ಭಗವಾನ್ ಮಹಾವೀರ ಜೈನ್ ಆಸ್ಪತ್ರೆ ಸಹಯೋಗದಲ್ಲಿ ಉಚಿತವಾಗಿ ಚಿಕಿತ್ಸೆ ನೀಡುತ್ತಾರೆ. ಹಣಕಾಸಿನ ತೊಂದರೆ ತುಂಬಾ ಜನರಲ್ಲಿ ಕಂಡು ಬರುವುದರಿಂದ ಈ ಒಂದು ಸಂಸ್ಥೆಯ ಸಮಾಜ ಸೇವೆಯ ಮೂಲಕ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುವುದು ಎಂದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ ಮಾತನಾಡಿ, ರಾಜ್ಯದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಮೂಲಕ 450 ಮಕ್ಕಳಿಗೆ ಉಚಿತ ಶಸ್ತ್ರ ಚಿಕಿತ್ಸೆಯನ್ನು ನೀಡಿ ಯಶಸ್ವಿಯಾಗಿದ್ದಾರೆ ಎಂದರು.