ಜಿಲ್ಲೆ

ಉಪಗ್ರಹ ತಯಾರಿಯಲ್ಲಿ ಭಾರತ ಮುಂಚೂಣಿ

ಮಂಜುನಾಥ

ಹೊಸಪೇಟೆ: ಪ್ರಪಂಚದಾದ್ಯAತ ಅಂತರಿಕ್ಷ ಉಪಗ್ರಹದ ಉಪಕರಣಗಳ ತಯಾರಿಯಲ್ಲಿ ಭಾರತವು ಕೂಡ ಪ್ರಮುಖ ಸ್ಥಾನವನ್ನು ಹೊಂದಿದೆ ಎಂದು ಬೆಂಗಳೂರಿನ ಇಸ್ರೋದ ವಿಜ್ಞಾನಿ ಡಿ.ಆರ್.ವೀರೇಶ ಹೇಳಿದರು.

ಬೆಂಗಳೂರಿನ ಇಸ್ರೋದ ಯು.ಆರ್.ರಾವ್ ಉಪಗ್ರಹ ಕೇಂದ್ರದಿAದ ನಗರದ ಪ್ರೌಢದೇವರಾಯ ತಾಂತ್ರಿಕ ಕಜಾಲೇಜಿನಲ್ಲಿ ಶನಿವಾರ ವರ್ಲ್ಡ್ ಸ್ಪೇಸ್ ವೀಕ್ 2024 ನಿಮಿತ್ತ ಬಾಹ್ಯಾಕಾಶ ಮತ್ತು ಹವಾಮಾನ ಬದಲಾವಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಸ್ರೋ ಈ ಬಾಹ್ಯಾಕಾಶ ಸಪ್ತಾಹದ ಆಚರಣೆಯನ್ನು ಅ.04 ರಿಂದ ಅ,10ರ ವರೆಗೆ ಎಲ್ಲ ಜಿಲ್ಲೆಗಳಲ್ಲಿ ಬಾಹ್ಯಾಕಾಶದ ವಿಜ್ಞಾನಿಕ ಮನೋಭಾವ ವಿದ್ಯಾರ್ಥಿಗಳಲ್ಲಿ ಮೂಡಿಸುತ್ತಿದೆ. ಇಸ್ರೋ ಇದುವರೆಗೂ 97 ರಾಕೆಟ್ ಗಳನ್ನು, 127 ಉಪಗ್ರಹಗಳನ್ನು ಉಡಾವಣೆ ಮಾಡಿದೆ. 8 ರಿ-ಎಂಟ್ರಿ ಮಿಷನ್‌ಗಳನ್ನು ಸುರಕ್ಷಿತವಾಗಿ ಭೂಮಿಗೆ ವಾಪಸ್ ತರುವಲ್ಲಿ ಯಶಸ್ವಿಯಾಗಿದೆ. 250 ಕ್ಕೂ ಹೆಚ್ಚು ಪ್ರಯೋಜನಗಳನ್ನು ಜನರಿಗೆ ತಲುಪುವಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಗೂಗಲ್ ತರಹದ ಭಾರತದ ಭುವನ್ ಎಂಬ ಅಪ್ಲಿಕೇಷನ್ ಅನ್ನು ಬಳಸಬಹುದು. ಅಮೆರಿಕಾದ ಜಿಪಿಎಸ್ ಬದಲಾಗಿ ನಾವಿಕ್ ಎಂಬ ಚಿಪ್ ಅನ್ನು ಈಗಿನ ಮೊಬೈಲ್ ಫೋನ್ ಟೆಕ್ನಾಲಜಿಯಲ್ಲಿ ಬಳಿಸಲಾಗಿದೆ. ಇದರಿಂದ ನೇವಿಗೇಷನ್, ಲೊಕೇಷನ್ ಮುಂತಾದ ನಮ್ಮ ದೇಶದ ಅಪ್ಲಿಕೇಷನ್ ಅನ್ನು ಜನರು ಉಪಯೋಗಿಸಬಹುದು. ಟೆಲಿಮೆಡಿಸಿನ್, ದೂರಶಿಕ್ಷಣ, ವ್ಯವಸಾಯ, ನಗರ ಹಾಗೂ ಗ್ರಾಮೀಣಾಭಿವೃದ್ಧಿ, ಅರಣ್ಯ ನಕ್ಷೆ, ಹವಾಮಾನ ವಿಪತ್ತು ನಿರ್ವಹಣೆ, ಡಿ.ಟಿ.ಎಚ್ ಸೇವೆ, ಭೂಮಿಯ ವೀಕ್ಷಣೆ ಹೀಗೆ ಉಪಗ್ರಹದ ಹಲವಾರು ಉಪಯೋಗಗಳನ್ನು ಕಾಣಬಹುದು. ಇದರಿಂದ ದೇಶವು ಒಂದು ಉಪಗ್ರಹ ಉಡಾವಣೆಗೆ ಬೇಕಾದ ಬೃಹತ್ ವೆಚ್ಚವು ಹೀಗೆ ಲಾಭದಾಯಕವಾಗಿವೆ ಎಂದರು.

ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್ ಉಪಗ್ರಹ ಮಾದರಿಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು. ವಿಜ್ಞಾನಿಗಳಾದ ಫರ್ಹಾನಾ ತಬಸ್ಸುಮ್, ಯುಆರ್‌ಎಸ್‌ಸಿಯ ಎಸ್.ಅರುಣ್ ಕುಮಾರ್, ಇಸ್ರೋ ತಂಡದ ಸಿಬ್ಬಂದಿಗಳಾದ ಮೀನಾ ರವೀಂದ್ರ, ಗೋವಿಂದ ರಾಜ್, ಆರ್.ಬಾಲಾಜಿ, ಶಂಕರಪ್ಪ ಲಮಾಣಿ, ಸಲೀಂ ಹವಾಲ್ದಾರ್, ಕಾಲೇಜಿನ ಅಧ್ಯಕ್ಷ ಕರಿಬಸವರಾಜ ಬಾದಾಮಿ, ಪ್ರಾಂಶುಪಾಲ ಡಾ.ಯು.ಎಂ.ರೋಹಿತ್ ಇತರರಿದ್ದರು.