ಜಿಲ್ಲೆ

ಕುಂಬಾರಗಿರಿಗೆ ಸ್ಲಂ ಎಂದು ಘೋಷಿಸಿ

ಮಂಜುನಾಥ

ಹೊಸಪೇಟೆ: ಇಲ್ಲಿನ ಕುಂಬಾರಗಿರಿ ಪ್ರದೇಶವನ್ನು ಸ್ಲಂ ಎಂದು ಘೋಷಿಸುವಂತೆ ಒತ್ತಾಯಿಸಿ ಸ್ಲಂ ಜನರ ಸಂಘಟನೆಯಿAದ ಪೌರಾಯುಕ್ತ ಶಿವಕುಮಾರಗೆ ಬುಧವಾರ ಮನವಿ ಸಲಿಸಲಾಯಿತು.

ನಗರದ ಕುಂಬಾರಗಿರಿ ಪ್ರದೇಶವನ್ನು ಘೋಷಣೆ ಆಗದಿರುವ ಕೊಳಚೆ ಪ್ರದೇಶಗಳನ್ನು ಗುರುತಿಸಿ ಕಾನೂನು ವ್ಯಾಪ್ತಿಗೆ ತಂದು ಮೂಲ ಸೌಲಭ್ಯ ಕಲ್ಪಿಸಬೇಕು. ಪ್ರದೇಶವನ್ನು ಸ್ಲಂ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ನಗರಾಭಿವೃದ್ಧಿ ಹಾಗೂ ವಸತಿ ಇಲಾಖೆಯಲ್ಲಿ ಪ್ರತ್ಯೇಕವಾದ ಹಣವನ್ನು ಮೀಸಲಿಡಬೇಕು. ಕೊಳಗೇರಿ ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆಗೆ ಪ್ರತ್ಯೇಕ ಸಚಿವಾಲಯವನ್ನು ಘೋಷಣೆ ಮಾಡಬೇಕಿದೆ. ಅಂದಾಗಲೇ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನಗರದಲ್ಲಿ ನಿರ್ಮಾಣವಾಗುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಬಡಾವಣೆ ನಿವೇಶ, ವಸತಿ ಯೋಜನೆಗಳಲ್ಲಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಗಳು ನಿರ್ಮಿಸುವ ಬಡಾವಣೆಗಳಲ್ಲಿ ಕಡ್ಡಾಯವಾಗಿ ನಗರ ವಂಚಿತ ಸಮುದಾಯಗಳಿಗೆ ಶೇ.25ರಷ್ಟು ಭೂಮಿ, ವಸತಿಯನ್ನು ಮೀಸಲಿಡಬೇಕು. ಬಡ ಹಾಗೂ ಮಧ್ಯಮ ವರ್ಗದವರ ಸಮಸ್ಯೆಗಳನ್ನು ನಿವಾರಣೆ ಮಾಡಲು ಪ್ರಾಮಾಣಿಕವಾದ ಪ್ರಯತ್ನ ಮಾಡಬೇಕಿದೆ. ಇದರಲ್ಲಿ ಯಾವುದೇ ಕಾರಣಕ್ಕೂ ನಿಷ್ಕಾಳಜಿತನ ತೋರಿಸಬಾರದು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಎಚ್.ಶೇಷು, ಪ್ರಧಾನ ಕಾರ್ಯದರ್ಶಿ ಎನ್.ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಕೈಲಾಸ್, ಉಪಾಧ್ಯಕ್ಷ ರಾಜಭಕ್ಷಿ ಬರಕಾತಿ, ಮಹಿಳಾ ಘಟಕದ ಅಧ್ಯಕ್ಷೆ ಎನ್.ಹುಲಿಗೆಮ್ಮ, ಉಪಾಧ್ಯಕ್ಷ ನೂರ್ ಜಹಾನ್, ಪ್ರಧಾನ ಕಾರ್ಯದರ್ಶಿ ಬೀನಾರೂಪಲತಾ ಇತರರಿದ್ದರು.