ಜಿಲ್ಲೆ

ಸ್ಲೀಪರ್ ಬಸ್ನಲ್ಲಿ ತಪ್ಪಿದ ಅನಾಹುತ

ಮಂಜುನಾಥ

ಹೊಸಪೇಟೆ: ಸ್ಲೀಪರ್ ಬಸ್ ನ ಮೇಲಿನ ಸೀಟ್ ಕುಸಿದು ಬಿದ್ದು ಭಾರಿ ದುರಂತ ತಪ್ಪಿದ ಘಟನೆ ನಗರದ ಕೆಎಸ್ ಆರ್ ಟಿಸಿ ಬಸ್‌ನಲ್ಲಿ ಸೋಮವಾರ ತಡ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕಲಬುರಗಿಯಿAದ ಹರಪನಹಳ್ಳಿಗೆ ಬರುತ್ತಿದ್ದ ಹೊಸಪೇಟೆ ವಿಭಾಗಕ್ಕೆ ಸೇರಿದ ಕೆಎ 35 ಎಫ್ 138 ನಂಬರ್ ನ ಸಾರಿಗೆ ಬಸ್ ನಲ್ಲಿ ಜನರು ಪ್ರಯಾಣಿಸುತ್ತಿದ್ದರು. ಮಧ್ಯರಾತ್ರಿ ಪ್ರಯಾಣಿಕರು ಸ್ಲೀಪರ್ ಕೋಚ್ ಬಸ್ ನಲ್ಲಿ ಒಳ್ಳೆ ನಿದ್ದೆಯಲ್ಲಿದ್ದರು. ಈ ವೇಳೆ ಮೇಲಿನ 25 ಮತ್ತು 26ನೇ ಸೀಟ್ ಕಳಚಿ ಕೆಳಗಿನಗೆ ಬಿದ್ದು, ಸೀಟ್ ನಂಬರ್ 7 ಮತ್ತು 8ರ ಮೇಲೆ ಕೆಳಗೆ ಬಿದ್ದಿದ್ದು ಒಬ್ಬರಿಗೆ ಗಾಯವಾಗಿದೆ.

ಸ್ಲೀಪರ್ ಕೋಚ್ ಆರಾಮಾಗಿ ಮಲಗಿಕೊಂಡು ಊರು ಸೇರಬಹುದು ಎಂದು ಮುಂಗಡವಾಗಿ ಬುಕ್ ಮಾಡಿಕೊಂಡು ಕೆಲವರು ಪ್ರಯಾಣಿಸುತ್ತಾರೆ. ಇದರಂತೆ ನಗರದ ಪಿಡಿಐಟಿ ಕಾಲೇಜಿನ ಪ್ರಾಧ್ಯಾಪಕ ರಾಜಕುಮಾರ್ ಗಾಳೆ ಎಂಬುವರು ಕೂಡ ಸೀಟ್ ನಂಬರ್ 7 ರಲ್ಲಿ ಪ್ರಯಾಣಿಸುತ್ತಿದ್ದರು. ಸೀಟ್ ನಂಬರ್ 8 ಮಳೆಯಿಂದ ಒದ್ದೆಯಾಗಿತ್ತು. ಆದ್ದರಿಂದ ಆ ಸೀಟ್ ಖಾಲಿಯಿತ್ತು ಬಂದು ಸೀಟ್ ನಂಬರ್ 7 ಒದ್ದೆಯಾಗಿದ್ದರಿಂದ ಅದು ಖಾಲಿ ಇತ್ತು. ಈ ವೇಳೆ ಮೇಲಿಂದ ಸೀಟ್ ಬಿದ್ದಿದ್ದು ರಾಜಕುಮಾರ್ ಅವರ ಕೈಗೆ ಗಾಯಾಗಿದೆ. ಇಲ್ಲಿ ಸ್ವಲ್ಪ ಯಾಮಾರಿದರು ಪ್ರಯಾಣಿಕರ ಜೀವಕ್ಕೆ ಕುತ್ತು ಬರ್ತಿತ್ತು. ಹಳೆ ಬಸ್ ಗಳನ್ನು ರಸ್ತೆ ಬಿಡಬಾರದು ಎಂದು ಪ್ರಯಾಣಿಕರಿಂದ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.

ಹರಪನಹಳ್ಳಿ ಘಟಕದ ಕೆಎ 35 ಎಫ್ 138 ನಂಬರ್ ಬಸ್ ಸಂಪೂರ್ಣ ಹಳೆದಾಗಿದೆ. ಹೆಚ್ಚುವರಿಯಾಗಿ ಇರಿಸಲಾಗಿತ್ತು. ಬಸ್ ಕೊರತೆಯಿಂದ ಹರಪನಹಳ್ಳಿಯಿಂದ ಕಲಬುರಗಿಗೆ ಬಳಸಲಾಹಿತ್ತು. ಈ ವೇಳೆ ಸೀಟ್ ಕಳಚಿದೆ. ಒಬ್ಬರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಈಗ ಆ ಬಸ್ ನಿಲ್ಲಿಸಲಾಗಿದೆ. - ತಿಮ್ಮರೆಡ್ಡಿ, ಉಪವಿಭಾಗಿಯ ನಿಯಂತ್ರಣಾಧಿಕಾರಿ, ಹೊಸಪೇಟೆ