ಹೊಸಪೇಟೆ: ಶುಕ್ರವಾರ ವರಮಾಹಲಕ್ಷಿö್ಮ, ಎರಡನೇ ಶನಿವಾರ ಹಾಗೂ ಭಾನುವಾರ ವಿಕೇಂಡ್, ಇನ್ನೂ ಶ್ರಾವಣ ಸೋಮವಾರದ ನಿಮಿತ್ತ ಸಾವಿರ ಸಂಖ್ಯೆಯಲ್ಲಿ ಹಂಪಿಗೆ ಪ್ರವಾಸಿಗರ ದಂಡು ಹರಿದು ಬಂದಿದೆ.
ಶುಕ್ರವಾರದಿAದಲೇ ಹಂಪಿ ಪರಿಸರದಲ್ಲಿ ಪ್ರವಾಸಿಗರು ಹೆಚ್ಚಿನ ಪ್ರವಾಸಿಗರಿದ್ದರು. ಶನಿವಾರ ಹಾಗೂ ಭಾನುವಾರ ಹಿನ್ನೆಲೆಯಲ್ಲಿ ಇನಷ್ಟು ಹೆಚ್ಚಾಗಿದ್ದರು. ಕೋದಂಡರಾಮ ದೇಗುಲ, ಯಂತ್ರೋಧಾರಕ ಪ್ರಾಣದೇವರು, ಎದುರು ಬಸವಣ್ಣ ಮಂಟಪ, ಸಾಸಿವೆ ಕಾಳು ಗಣಪತಿ, ಕಡಲೆ ಕಾಳು ಗಣಪತಿ, ಹಜಾರ ರಾಮ ದೇಗುಲ, ಉಗ್ರನರಸಿಂಹ, ಆನೆಲಾಯ, ಕಮಲ ಮಹಲ್, ಮಹಾನವಮಿ ದಿಬ್ಬ, ವಿಜಯ ವಿಠ್ಠಲ ದೇಗುಲದ ಕಲ್ಲಿನತೇರು, ಪುರಂದರ ಮಂಟಪ ಸೇರಿದಂತೆ ಇತರೆ ಸ್ಮಾರಕಗಳನ್ನು ವೀಕ್ಷಿಸಿದರು.
ಹಂಪಿಯ ಸ್ಮಾರಕಗಳ ಸೊಬಗನ್ನು ವೀಕ್ಷಿಸಿದ ಪ್ರವಾಸಿಗರು ಸ್ಮಾರಕಗಳ ಬಗ್ಗೆ ಹಾಗೂ ವಿಜಯನಗರ ಚರಿತ್ರೆಯನ್ನು ಮಾರ್ಗದರ್ಶಕರಿಂದ ಮಾಹಿತಿ ಪಡೆದರು. ನಿರಂತರ ಮಳೆ ಹಿನ್ನೆಲೆಯಲ್ಲಿ ವಾತವರಣ ತಂಪಾಗಿತ್ತು. ಇದರಿಂದಲೂ ಹಂಪಿಗೆ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದಾರೆ. ಆ.೧೧ ಶ್ರಾವಣ ಸೋಮವಾರ ಹಿನ್ನೆಲೆಯಲ್ಲಿ ಶ್ರೀ ವಿರೂಪಾಕ್ಷೇಶ್ವರ ದೇಗುಲಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.