ಜಿಲ್ಲೆ

ಶ್ರದ್ಧಾಭಕ್ತಿಯ ಶ್ರೀವಾಸವಿ ಜಯಂತಿ

ಮಂಜುನಾಥ

ಹೊಸಪೇಟೆ: ಶ್ರೀ ವಾಸವಿ ಜಯಂತಿ ನಿಮಿತ್ತ ಆರ್ಯವೈಶ್ಯ ಸಂಘದಿAದ ಇಲ್ಲಿನ ಮೇನ್ ಬಜಾರದ ನಗರೇಶ್ವರ ದೇಗುಲದಿಂದ ಪೂರ್ಣಕುಂಬದೊಂದಿಗೆ ಕುಲದೇವತೆಯ ಭವ್ಯ ಮೆರವಣಿಗೆ ಬುಧವಾರ ನಡೆಯಿತು.

ಶ್ರೀವಾಸವಿ ದೇಗುಲದಲ್ಲಿ ಕಳಸ ಪೂಜೆ, ತೊಟ್ಟಿಲೋತ್ಸವ ನಡೆಯಿತು. ಸುಮಂಗಲೆಯರಿಂದ ಮಡಿಲಕ್ಕಿ ಸಮರ್ಪಣೆ, ತುಲಾಬಾರ ಸೇವೆ, ಕನ್ನಿಕಾ ಪೂಜೆ ನಡೆಯಿತು. ಯುವ ಸಮುದಾಯದಿಂದ ಸ್ವಯಂಪ್ರೇರಿತ ರಕ್ತ ದಾನ ಶಿಬಿರ ನಡೆಯಿತು. ವೈದ್ಯ ಡಾ.ಸೋಮಶೇಖರ ಶಿಬಿರಕ್ಕೆ ಚಾಲನೆ ನೀಡಿದರು. ಎಲುಬಿನ ಸಾಂದ್ರತೆ ಉಚಿತ ಪರೀಕ್ಷೆ ಹಾಗೂ ಧಾರ್ಮಿಕ ಸಭೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯ ನಡೆಸಲಾಯಿತು. ಇದೆ ಸಂದರ್ಭದಲ್ಲಿ ನೂತನ ರಥವನ್ನು ವಾಸವಿ ದೇಗುಲಕ್ಕೆ ಅರಳಿಹಳ್ಳಿ ಕುಶಾಲ ಸಮರ್ಪಿಸಿದರು.

ಸಂಘದ ಅಧ್ಯಕ್ಷ ಕಾಕುಬಾಳ ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಭೂಪಾಳ ಪ್ರಹ್ಲಾದ್, ಖಜಾಂಚಿ ಕಾಕುಬಾಳ ಶ್ರೀನಿವಾಸ ಇತರರಿದ್ದರು.