ಜಿಲ್ಲೆ

ಶೇಕ್ಸ್ ಪಿಯರ್ ಮನೆಗೆ ಬಂದ ಪುಸ್ತಕ ಬಿಡುಗಡೆ

ಹೊಸಪೇಟೆ: ನಗರದ ವಿಜಯನಗರ ಕಾಲೇಜಿನ ಸಭಾಂಗಣದಲ್ಲಿ ಶೇಕ್ಸ್ ಪಿಯರ್ ಮನೆಗೆ ಬಂದ ಪುಸ್ತಕದ 3ನೇ ಮುದ್ರಣದ ಬಿಡುಗಡೆ ಹಾಗೂ ಶೇಕ್ಸ್ ಪಿಯರ್ ಲೋಕ ವಿದ್ಯಾರ್ಥಿಗಳೊಂದಿಗೆ ಸಂವಾದ' ಕಾರ್ಯಕ್ರಮ ನಡೆಯಿತು.

ಲೇಖಕರು ಡಾ.ನಟರಾಜ ಹುಳಿಯಾರ್ ಪುಸ್ತಕ ಬಿಡುಗಡೆ ಮಾಡಿ ಮಾಡಿನಾಡಿ, ಯಾವುದೇ ವಿವಿಯ ಪದವಿ ಪಡೆಯಲಾಗದಿದ್ದರೂ ಅನೇಕ ವಿವಿಯ ಪಠ್ಯಗಳಲ್ಲಿ ಶೇಕ್ಸ್ ಪಿಯರ್ ಇದ್ದಾನೆ. ಮನುಷ್ಯ ತನ್ನೊಳಗಿರುವ ಪ್ರತಿಭೆಗಳಿಗೆ ಅವಕಾಶ ತಾನೇ ಕೊಡದಿದ್ದರೆ ಹೇಗೆ, ಆಲ್ ದ ವರ್ಲ್ಡ್ ಇಸ್ ಸ್ಟೇಜ್ ಎಂಬ ಶೇಕ್ಸ್ ಪಿಯರ್ ರವರ ಮಾತನ್ನ ಸ್ಮರಿಸುತ್ತಾ ಮನುಷ್ಯ ತನ್ನೊಳಗಿರುವ ಪ್ರತಿಭೆಗಳಿಗೆ ತಾನೇ ಮೊದಲು ಅವಕಾಶ ಕೊಡವುದನ್ನ ಕಲಿಯಬೇಕು ಎಂದರು.

ನಗರದ ಶಂಕರ್ ಆನಂದಸಿAಗ್ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ನಾರಾಯಣ ಜಿ.ಹೆಬಸೂರು ಮಾತನಾಡಿ, ವಿಲಿಯಂ ವರ್ಡ್ಸ್ ವರ್ಥ್ ಹಾಗೂ ಶೇಕ್ಸ್ ಪಿಯರ್ ರವರನ್ನ ಬಿಟ್ಟು ಸಾಹಿತ್ಯವೇ ಅಪೂರ್ಣ. ಅಂತಹ ಮೇರು ದಿಗ್ಗಜರನ್ನ ಸಾಮಾನ್ಯನಿಗೆ ಅರ್ಥವಾಗುವಂತೆ ಸೃಜನಶೀಲ ಬರವಣಿಗೆಯ ಡಾ.ನಟರಾಜ ಹುಳಿಯಾರ್ ರವರಂತ ಲೇಖಕರು ಈ ನಾಡಿನ ಸೌಭಾಗ್ಯ ಎಂದರು.

ವಿಜಯನಗರ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಭುಗೌಡ ಅಧ್ಯಕ್ಷತೆ ವಹಿಸಿದರು. ಕನ್ನಡ ವಿವಿಯ ಪ್ರಾದ್ಯಾಪಕ ಡಾ.ಪ್ರಶಾಂತ್, ಪಲ್ಲವ ಪ್ರಕಾಶನದ ಡಾ.ಕೆ.ವೆಂಕಟೇಶ್, ಡಾ.ಟಿ.ಎಚ್.ಬಸವರಾಜ್, ಡಾ.ನಾಗಣ್ಣ ಕಿಲಾರಿ, ಡಾ.ಗಾದೆಪ್ಪ, ಡಾ.ವೀರೇಂದ್ರ ಪಾಟೀಲ್ ಇತರರಿದ್ದರು.