filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:8; brp_del_th:0.0279,0.0000; brp_del_sen:0.1000,0.0000; motionR: 65537; delta:1; bokeh:1; module: photo;hw-remosaic: false;touch: (-1.0, -1.0);sceneMode: 8388608;cct_value: 0;AI_Scene: (-1, -1);aec_lux: 109.09383;aec_lux_index: 0;albedo: ;confidence: ;motionLevel: 65537;weatherinfo: null;temperature: 44; 
ಜಿಲ್ಲೆ

ಕಮಲಾಪುರದಲ್ಲಿ ಸೇವಾಲಾಲ್ ಜಯಂತೋತ್ಸವ

ಮಂಜುನಾಥ

ಹೊಸಪೇಟೆ: ಶ್ರೀ ಮರಿಯಮ್ಮದೇವಿ ಜಾತ್ರಮಹೋತ್ಸವ ಹಾಗೂ ಶ್ರೀ ಸೇವಾಲಾಲ್ ಜಯಂತೋತ್ಸವ ನಿಮಿತ್ತ ಬಂಜಾರ್ ಸಮುದಾಯದಿಂದ ತಾಲೂಕಿನ ಕಮಲಾಪುರದಲ್ಲಿ ಮಂಗಳವಾರ ಅದ್ದೂರಿ ಮೆರವಣಿಗೆ ನಡೆಯಿತು.

ಭವ್ಯವಾದ ಶ್ರೀ ಸೇವಲಾಲ್ ಮಹಾರಾಜರ ಭಾವಚಿತ್ರ ಮೆರವಣಿಗೆ ಕಮಲಾಪುರ ಪುರಸಭೆ ಸದಸ್ಯೆ ಜ್ಯೋತಿಬಾಯಿ ಚಾಲನೆ ನೀಡಿ ಮಾತನಾಡಿ, ನೋಂದವರ ಕಣ್ಣೀರು ಒರೆಸಿ, ಆತ್ಮಸ್ಥೆರ್ಯ ತುಂಬುತ್ತಿದ್ದ ಸೇವಾಲಾಲ ಮಹಾರಾಜರು ಬಂಜಾರ ಸಮುದಾಯಕ್ಕೆ ಮಾತ್ರ ಸೀಮಿತವಾಗದೆ ಎಲ್ಲರಿಗೂ ಸೇವೆ ಸಲ್ಲಿಸುವ ಮೂಲಕ ಮಾನವೀಯತೆಯ ನೈಜ ಸೇವಕರಾಗಿದ್ದರು. ಅವರ ತತ್ವಗಳು ಮತ್ತು ಆದರ್ಶಗಳು ಸದಾ ನಮ್ಮೆಲ್ಲರಿಗೂ ಮಾರ್ಗದರ್ಶಿನವಾಗಿದೆ , ಹಾಗೂ ಬಂಜಾರ ಸಮಾಜದ ಶ್ರೇಷ್ಠ ದಾರ್ಶನಿಕರಾದ ಸೇವಾಲಾಲ ಮಹಾರಾಜರು, ತಮ್ಮ ಆದರ್ಶ ಮತ್ತು ತತ್ವಗಳ ಮೂಲಕ ಸಮಾಜದ ಸಮಗ್ರ ಅಭಿವೃದ್ಧಿಗೆ ಶ್ರೇಷ್ಠ ಕೊಡುಗೆ ನೀಡಿದ ಮಹಾನ್ ಪುರುಷರು. ಅವರ ಜೀವನ ಸಂದೇಶ ಇಂದು ಸಹ ನಾವು ಕೈಗೊಳ್ಳಬೇಕಾದ ಮಾರ್ಗದರ್ಶನವಾಗಿದೆ ಎಂದರು.

ಜಯAತೋತ್ಸವದಲ್ಲಿ ಯುವಕರು ಹೆಜ್ಜೆ ಹಾಕ್ಕಿದರು. ಕೋಟೆ ಆಂಜನೇಯ ದೇಗುಲದಿಂದ ಅಂಬೇಡ್ಕರ್ ವೃತ್ತ, ಕೃಷ್ಣಾ ದೇವಾರಾಯ ವೃತ್ತ, ಸೇವಾಲಾಲ್ ವೃತ್ತದ ಮಾರ್ಗವಾಗಿ ಕೆರೆತಾಂಡಾದ ಅವರೆಗೆ ಅದ್ದೂರಿ ಮೆರವಣಿಗೆ ನಡೆಯಿತು.

ತಾಂಡಾದ ಪ್ರಮುಖರಾದ ಜಾನ್ಯಾನಾಯ್ಕ, ಹನಮನಾಯ್ಕ, ಎಸ್.ಎಸ್.ನಾಯ್ಕ, ಯಮನನಾಯ್ಕ, ನಾಗನಾಯ್ಕ, ಸೋಮುನಾಯ್ಕ, ಮಣಿಕಂಠ, ಭದ್ರಾನಾಯ್ಕ, ಪೀರುನಾಯ್ಕ, ಅಂಬರೀಶ್ ನಾಯ್ಕ, ಮೈಲಾರಿನಾಯ್ಕ, ಚಂದ್ಯಾನಾಯ್ಕ ಇತರರಿದ್ದರು.