ಜಿಲ್ಲೆ

ಶಾಲಾ ಅಭಿವೃದ್ಧಿಗೆ ಶಿಕ್ಷಕರ ಸಹಕಾರ ಅಗತ್ಯ

ಮಂಜುನಾಥ

ಹೊಸಪೇಟೆ: ಸಮಸ್ಯೆಗಳು ಶಾಲಾ ಮುಖ್ಯಶಿಕ್ಷಕರಿಗೆ ತಿಳಿದಿರುತ್ತದೆ. ಶಾಲೆಗಳ ಅಭಿವೃದ್ಧಿಗೆ ಒಳ್ಳೆ ಯೋಜನೆಗಳು ರೂಪಿಸಲಾಗುತ್ತದೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ತಿಳಿಸಿದರು.

ನಗರದ ಖಾಸಗಿ ಶಾಲೆಯಲ್ಲಿ ಶನಿವಾರ ನಡೆದ ವಿಜಯನಗರ ಕ್ಷೇತ್ರದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮೂಲಭೂತ ಸೌಕರ್ಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ವಿಜಯನಗರ ಕ್ಷೇತ್ರದ ಶಾಲಾಗಳ ಅಭಿವೃದ್ಧಿ ಯೋಜನೆಗಳಿಗೆ ಬೇಕಿರುವ ಸಲಹೆ ಮುಖ್ಯ ಶಿಕ್ಷಕರಿಂದಲೇ ತಿಳಿಯಬೇಕಿದೆ. ಆದ್ದರಿಂದ ಈ ಪ್ರಗತಿ ಪರಿಶೀಲನಾ ಸಭೆ ನಡೆಯಬೇಕಿದೆ. ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. 27ನೇ ಸ್ಥಾನದಿಂದ 17ನೇ ಸ್ಥಾನಕ್ಕೆ ಏರಿಕೆಯಾಗಿದೆ. ಸ್ಮಾರ್ಟ್ ಕ್ಲಾಸ್, ಕೊಠಡಿಗಳು ಸೇರಿ ಅಭಿವೃದ್ಧಿಗೆ ಕಳೆದ ಬಾರಿ 23 ಕೋಟಿ ರೂ. ಅನುದಾನ ಶಾಲೆಗಳಿಗೆ ಅನುದಾನ ಕೊಟ್ಟಿರುವೆ. ಈ ಬಾರಿ ಕೂಡ 10 ರಿಂದ 15 ಕೋಟಿ ರೂ. ಅನುದಾನ ನೀಡುವೆ. ಆದ್ದರಿಂದ ಅಭಿವೃದ್ಧಿಗೆ ನಿಮ್ಮ ಸಲಹೆಯ ಅಗತ್ಯವಿದೆ ಎಂದರು.

ಪ್ರಭಾರ ಬಿಇಒ ಶೇಕರಪ್ಪ ಹರಪೇಟೆ ಮಾತನಾಡಿ, ತಾಲೂಕಿನಲ್ಲಿ 123 ಶಾಲೆಗಳಿವೆ. ಶೌಚಾಲಯ, ಮೂಲಸೌಕರ್ಯ ಇತರೆ ಸಮಸ್ಯೆಗಳನ್ನು

ಪರಿಹರಿಸಲು ಶಾಸಕರ ಸಹರಿಸುತ್ತಿದ್ದಾರೆ. ಒಟ್ಟು 147 ಕೊಠಡಿಗಳಲ್ಲಿ 680 ಕೊಠಡಿಗಳು ದುರಸ್ತಿ ಕಾರ್ಯ ನಡೆಯಬೇಕಿದೆ. ಎರಡು ವರ್ಷಗಳಿಂದ ಶಾಲ ಕೊಠಡಿಗಳ ಸೋರುವ ಕೊಠಡಿಗಳಿಗೆ ಮುಕ್ತಿ ಹಾಡುತ್ತಿದ್ದಾರೆ. 365 ಕೊಠಡಿ ರಿಪೇರಿ ನಡೆದಿವೆ. 93 ಹೊಸ ಕೊಠಡಿಗಳು ನಿರ್ಮಾಣ ಮಾಡಿದ್ದಾರೆ. ಡೆಲ್ಲಿ ಮಾಧರಿಯ ಶಾಲೆಗಳನ್ನು ನಿರ್ಮಾಣ ಮಾಡುವ ಕನಸು ಶಾಸಕರದ್ದಾಗಿದೆ. ಕೆಲವೇ ದಿನಗಳಲ್ಲಿ ಈಡೇರುವ ಸಾಧ್ಯತೆಯಿದೆ. ಶಾಸಕರ ಕನಸಿಗೆ ನನಸು ಮಾಡಲು ಶಿಕ್ಷಕರ ಸಹಕಾರ ಅಗತ್ಯವಾಗಿದೆ. ಸೋರುವ ಕೊಠಡಿ ಮುಕ್ತ ಶಾಲೆಗಳು ಎನ್ನುವುದನ್ನು ಘೋಷಣೆ ಮಾಡುವಂತೆ ಅಭಿವೃದ್ಧಿ ಆಗುತ್ತಿದೆ. ಶಾಲೆಗಳಿಗೆ ಬರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. 9 ಹೊಸ ಇಸಿಸಿಇ ಶಾಲೆಗಳ ಆರಂಭಕ್ಕೆ ಅನುಮೋದನೆ ಸಿಕ್ಕಿದೆ ಎಂದರು.

ಶಿಕ್ಷಣಾ ಸಂಯೋಜಕರು ಶಿವರಾಮಪ್ಪ, ಬಿಆರ್ ಪಿ ಹನುಮೇಶ, ನಿರ್ಮಾಲಾ, ಪ್ರೌಢಶಾಲಾ ಮುಖ್ಯಶಿಕ್ಷಕರ ಅಧ್ಯಕ್ಷೆ ಅಕ್ಕಮಹಾದೇವಿ, ಪ್ರಾಥಮಿಕ ಶಾಲಾ ಶಿಕ್ಷಕರ ಕಾರ್ಯದರ್ಶಿ ಮಲ್ಲಯ್ಯ, ನೌಕರರ ಸಂಘದ ಅಧ್ಯಕ್ಷ ವೀರಭದ್ರೇಶ ಇತರರಿದ್ದರು