ಜಿಲ್ಲೆ

ಹಿಂದುಗಳು ಬಲವಂತಕ್ಕೆ ಮತಾಂತರ

ಮಂಜುನಾಥ

ಹೊಸಪೇಟೆ: ದೇಶದ ಮುಸ್ಲಿಮರು, ಕ್ರಿಶ್ಚಿಯನ್ನರು ಮೂಲತಃ ಹಿಂದೂಗಳೇ.ಸಾಮಾಜಿಕಅಸಮಾನತೆ, ಆಮಿಷ ಹಾಗೂ ಬಲವಂತದಕಾರಣಕ್ಕೆ ಮತಾಂತರಗೊAಡಿದ್ದಾರೆಎAದುಆರ್‌ಎಸ್‌ಎಸ್‌ಉತ್ತರಕರ್ನಾಟಕ ಪ್ರಾಂತಕಾರ್ಯಕಾರಿಣಿ ಸದಸ್ಯಡಾ.ರವೀಂದ್ರ ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದಿAದ ಖಾಸಗಿ ಹೊಟೇಲ್ ನಲ್ಲಿ ಭಾನುವಾರ ಸಂಜೆ ನಡೆದ ವಿಜಯದಶಮಿಉತ್ಸವದಲ್ಲಿ ಮಾತನಾಡಿದರು.

ಮತಾಂತರಗೊಂಡವರೆಲ್ಲ ಹಿಂದೂಗಳೇ.ಹಿAದೂ ಸಮಾಜದಲ್ಲಿಅಸಮಾನತೆಯಿಂದಅವರು ಮತಾಂತರಗೊAಡಿದ್ದಾರೆಎAದು ಸಿಎಂ ಸಿದ್ದರಾಮಯ್ಯ ಬಹಿರಂಗ ಪಡಿಸಿದ್ದಾರೆ.ಸಹಬಾಳ್ವೆ, ಸಂಘಟನೆಯಲ್ಲಿ ನಂಬಿಕೆಯಿಟ್ಟಿರುವಆರ್‌ಎಸ್‌ಎಸ್‌ಯಾರನ್ನೂದ್ವೇಷಿಸುವುದಿಲ್ಲ ಎಂದರು.

ಜಾತಿ, ಧರ್ಮಗಳು ಎಂಬುದು ಪೂಜಾ ವಿಧಾನವಷ್ಟೇ, ನಾವೆಲ್ಲ ಭಾರತೀಯರು. ನಾವೆಲ್ಲ ಹಿಂದೂಗಳೇ ಸ್ವಾಮಿ ವಿವೇಕಾನಂದರು ಪೂಜಾ ವಿಧಾನಕ್ಕಿಂತಲೂರಾಷ್ಟ್ರೀಯ ವಾದವನ್ನೇ ಮಂಡಿಸಿದ್ದಾರೆ.ಅವರ ವಿಚಾರಧಾರೆಗಳಡಿ ಡಾ.ಹೆಗಡೆವಾರ್‌ಅವರುರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನುಕಟ್ಟಿದರು. ಅಂದು 17 ಜನರಿಂದಆರAಭಗೊAಡಿದ್ದ ಸಂಘ ಈಗ ನೂರು ವಸಂತಗಳನ್ನು ಪೂರೈಸಿದೆ ಎಂದರು.

ಕೆಲ ದೇಶಗಳಲ್ಲಿ ಒಂದೇಧರ್ಮದಜನರಿದ್ದರೂ, ಸದಾ ಸಂಘರ್ಷ, ದ್ವೇಷಭಾವನೆ ಹೊಗೆಯಾಡುತ್ತಿವೆ. ಆದರೆ, ಭಾರತದಲ್ಲಿ ಅನೇಕ ಧರ್ಮ, ಜಾತಿಜನರಿದ್ದರೂ, ವಿವಿಧತೆಯಲ್ಲಿಏಕತೆಅಡಗಿದೆ.ಅದೇ ಭಾರತದ ಸೌಂದರ್ಯ.ಕೆಲ ವರ್ಷಗಳ ಹಿಂದೆದೇಶಅAತಹದ್ದೇ ಪರಿಸ್ಥಿತಿಗೆ ಹೊರಳುತಿತ್ತು.ಸೇನೆ ಮೇಲೆ ನಮ್ಮದೇಜನರುಕಲ್ಲುತೂರಾಟ ನಡೆಸುತ್ತಿದ್ದರು.ದೇಶದಲ್ಲಿ ಭಯೋತ್ಪಾದಕರುರಣಕೇಕೆ ಹಾಕುತ್ತಿದ್ದರು.ಆದರೆ, ಈಗ ರಾಜಕೀಯ ಶಕ್ತಿ ಬದಲಾಗಿದೆ.ದುಷ್ಟ ಶಕ್ತಿಗಳಿಗೆ ಭಾರತತಕ್ಕಉತ್ತರಕೊಡುತ್ತಿದೆ. ಸರ್ಜಿಕಲ್ ಸ್ಟ್ರೈಕ್ ಹಾಗೂ ಆಪರೇಷನ್ ಸಿಂಧೂರ್ ಸಾಕ್ಷಿಎಂದು ಪರೋಕ್ಷವಾಗಿ ಮೋದಿ ಆಡಳಿತವನ್ನು ಬಣ್ಣಿಸಿದರು.

ನಗರದ ಕುಸ್ತಿಪಟುಗಳಾದ ತಳವಾರ ಹಿರೇಭೀಮಪ್ಪ, ರಾಮಾಂಜನಪ್ಪ, ಗೋಸಲ ಸಣ್ಣಕಣಿವೆಪ್ಪ, ಕಲ್ಗುಡಿ ಭರಮಪ್ಪಅವರನ್ನು ಸನ್ಮಾನಿಸಲಾಯಿತು.ಸಂಡೂರು ಸುಶೀಲಾನಗರದ ತಿಪ್ಪೇಸ್ವಾಮಿ ಮಹಾರಾಜ್, ನಗರದಆರ್‌ಎಸ್‌ಎಸ್‌ಪ್ರಮುಖರಾಜಾಕೃಷ್ಣದೇವರಾಯ ವೇದಿಕೆಯಲ್ಲಿದ್ದರು.

ಅದಕ್ಕೂ ಮುನ್ನ ನಗರದ ನೆಹರೂ ಕಾಲೋನಿ ಮೈದಾನದಿಂದಆರAಭವಾದ ಗಣವೇಷಧಾರಿಗಳ ಆಕರ್ಷಕ ಪಥಸಂಚಲನ ಸಣ್ಣಕ್ಕಿ ವೀರಭದ್ರೇಶ್ವರದೇಗುಲ, ವಾಲ್ಮೀಕಿ ವೃತ್ತ, ವಡಕರಾಯತೇರು, ಪಾದಗಟ್ಟಿಆಂಜನೇಯ, ಗಾಂಧಿಚೌಕು,ಸ್ವಾಗಿ ಮಾರ್ಕೆಟೆ, ಡಾ.ಅಂಬೇಡ್ಕರ್ ವೃತ್ತ, ಪುನೀತ್‌ರಾಜಕುಮಾರ್ ವೃತ್ತ, ಹಂಪಿ ರಸ್ತೆ ಸೇರಿದಂತೆ ಇತರೆ ಕಡೆ ಪಥಸಂಚಲನ ನಡೆಯಿತು.