ಹೊಸಪೇಟೆ: ಜಿಲ್ಲಾ ಕೇಂದ್ರದ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಸಿಪಿಐಎಂ ಪಕ್ಷದ ಪದಾಧಿಕಾರಿಗಳು ಇಲ್ಲಿನ ನಗರಸಭೆ ಮುಂದಿನ ಗುಂಡಿಯಲ್ಲಿ ನಿಂತು ಮಂಗಳವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾ ಕೇಂದ್ರದಲ್ಲಿ ಬಹುತೇಕ ರಸ್ತೆಗಳು ತಗ್ಗು ಗುಂಡಿಗಳಿಂದ ಕೂಡಿವೆ. ಇದರಿಂದ ವಾಹನಗಳು ಅಡ್ಡಾದಿಡ್ಡಿಯಾಗಿ ಚಾಲನೆ ಮಾಡುವುದರಿಂದ ಸಾರ್ವಜನಿಕರು ಭಯದಿಂದ ಓಡಾಡುವ ಅನಿವಾರ್ಯತೆಯಾಗಿದೆ. ಅಂಬುಲೆನ್ಸ್ನಲ್ಲಿ ಗರ್ಭೀಣಿಯರು, ಅಂಗವಿಕಲರು ಸೇರಿದಂತೆ ಆನಾರೊಗ್ಯ ಪೀಡಿತರು ಓಡಾಟಕ್ಕೆ ಸಮಸ್ಯೆಯಾಗಿದೆ. ಜೀವಭಯದಿಂದ ವಾಹನ ಚಾಲನೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ದುರಸ್ಥಿ ಆಗದಿದ್ದರೆ ಆಡಳಿತ ನಡೆಸುತ್ತಿರುವ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಚ್ಚರಿಸಿದರು.
ನಗರಸಭೆ ಮ್ಯಾನೇಜರ್ ಕೃಷ್ಣಮೂರ್ತಿಗೆ ಮನವಿ ಸಲ್ಲಿಸಿದರು. ಸಂಘಟನೆಯ ಕಾರ್ಯದರ್ಶಿ ಎನ್.ಯಲ್ಲಾಲಿಂಗ, ಪ್ರಮುಖರಾದ ಎಂ.ಗೋಪಾಲ, ವಿ.ಸ್ವಾಮಿ, ರಮೇಶ್ ಕುಮಾರ್, ಹೇಮಂತ್ ನಾಯ್ಕ, ಎಸ್.ಶಂಕರ, ಕೆ.ಎಂ.ಸಂತೋಷ ಇತರರಿದ್ದರು.