ಹೊಸಪೇಟೆ: ನಿವೃತ್ತ ನ್ಯಾ. ನಾಗಮೋಹನದಾಸ್ ಆಯೋಗದ ವರದಿಯನ್ನು ಸರ್ಕಾರ ಯಾರದೋ ಒತ್ತಡಕ್ಕೆ ಒಳಗಾಗಿ ತರಾತುರಿಯಲ್ಲಿ ಜಾರಿಗೊಳಿಸುವುದು ಬೇಡಬಾರದು ಎಂದು ಹಗರಿಬೊಮ್ಮನಹಳ್ಳಿಯ ಕೋಗಳಿ ಮಠದ ಶ್ರೀ ಮಂಜು ಸ್ವಾಮೀಜಿ ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಬಂಜಾರ ಸಮುದಾಯದ ಪ್ರಮುಖರ ಸಭೆಯಲ್ಲಿ ಮಾತನಾಡಿದರು. ಮಾಧ್ಯಮಗಳಲ್ಲಿ ದೊರೆತ ಮಾಹಿತಿಯಂತೆ ನೀಡಿರುವ ಮೀಸಲು ಬಗ್ಗೆ ಬಹಳ ಸಮುದಾಯಗಳಲ್ಲಿ ಅಸಮಾ ಧಾನವಿದೆ. ಒಳ ಮೀಸಲಾತಿ ಜಾರಿಯಿಂದಲೇ ಬಿಜೆಪಿ ಶಾಸಕರು ನಾವು ಸೋಲಲು ಪ್ರಮುಖ ಕಾರಣ ಎಂದು ಬಿಜೆಪಿಯವರೇ ಹೇಳಿಕೆ ನೀಡಿದ್ದರು. ಈ ಸರ್ಕಾರದಿಂದಲೂ ಆದೇ ತಪ್ಪ ಮಾಡಲಾಗುತ್ತಿದೆ. ಒಳ ಮೀಸಲಾತಿ ಜಾರಿ ವಿರೋಧಿಸಿ ಆ.12ರಂದು ತಾಲೂಕಿನ ಮರಿಯಮ್ಮನ ಹಳ್ಳಿಯಿಂದ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಗುತ್ತದೆ. ಸಮುದಾಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ಆರೋಪಿಸಿದರು.
ಬಂಜಾರ್ ಸಮುದಾಯದ ಶ್ರೀ ತಿಪ್ಪೆಸ್ವಾಮೀಜಿ ಮಾತನಾಡಿ, 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ 1.08 ಕೋಟಿ ಇತ್ತು. ಆಯೋಗದ ಈಗಿನ ಸಮೀಕ್ಷೆಯಲ್ಲಿ 1.07 ಕೋಟಿ ಜನ ಸಂಖ್ಯೆಯಿದೆ. ಹನಾಲ್ಕು ವರ್ಷಗಳಲ್ಲಿ ಜನಸಂಖ್ಯೆ ಕಡಿಮೆಯಾಗಲು ಹೇಗೆ ಸಾಧ್ಯ? ಕೇಂದ್ರ ಸರ್ಕಾರ ಜಾತಿಗಣತಿ ನಡೆಸಲು ಮುಂದಾಗಿದೆ. ಇದರಿಂದ ಹೀಗಾಗಿ ಮೀಸಲು ಪ್ರಮಾಣ ಅನ್ಯಾಯವಾಗಲಿದೆ ಎಂದು ಆಗ್ರಹಿಸಿದರು.
ಬಂಜಾರ ಸಮುದಾಯದ ಪ್ರಮುಖರಾದ ಶಿವ ಕುಮಾರ್ ನಾಯ್ಕ, ಅಲೋಕ್ ನಾಯ್ಕ, ಉಮಾಪತಿ ನಾಯ್ಕ, ಭೋವಿ ಸಮಾಜದ ಪ್ರಮುಖರಾದ ಉದಯ್ ಕುಮಾರ್, ಹನುಮ ನಾಯ್ಕ, ರಾಮುನಾಯ್ಕ, ಪ್ರಕಾಶ್ ನಾಯ್ಕ, ಸುಧಾ ಬಾಯಿ ಇತರರಿದ್ದರು.