ಜಿಲ್ಲೆ

ಗಣತಂತ್ರ ದಿನ ಆತ್ಮಾವಲೋಕನದ ದಿನವಾಗಲಿ

ಮಂಜುನಾಥ

ಹೊಸಪೇಟೆ: ಭಾರತ ಗಣರಾಜ್ಯವಾಗಿ 76 ವರ್ಷಗಳಾದರೂ ದೇಶವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ, ಗಣರಾಜ್ಯವನ್ನಾಗಿ ರೂಪಿಸಿಕೊಳ್ಳುವಲ್ಲಿ ಪ್ರಜೆಗಳಾದ ನಾವು ಯಶಸ್ಸು ಪಡೆದ್ದೇವ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾದ, ವಿಮರ್ಶೆಗೆ ಒಳಪಡಿಸಬೇಕಾದ ಮತ್ತು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ದಿನವೇ ಈ ಗಣರಾಜ್ಯೋತ್ಸವದ ದಿನ ಎಂದು ಕನ್ನಡ ವಿವಿಯ ಪ್ರಾಧ್ಯಾಪಕ ಡಾ.ಮೋಹನ್ ಕೃಷ್ಣ ರೈ ಅಭಿಪ್ರಾಯಪಟ್ಟರು.

ಕನ್ನಡ ವಿವಿಯ ಕ್ರಿಯಾಶಕ್ತಿ ಕಟ್ಟಡದ ಮುಂಭಾಗದಲ್ಲಿ 76ನೇ ಗಣರಾಜ್ಯೋತ್ಸವ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ವೈವಿಧ್ಯತೆಯನ್ನು ಅಖಂಡ ರಾಷ್ಟವನ್ನಾಗಿರಿಸುವಲ್ಲಿ ಭಾರತಕ್ಕೆ ಬೃಹತ್ ಸಂವಿಧಾನದ ಅವಶ್ಯಕತೆಯಿತ್ತು. ಪ್ರಜಾಪ್ರಭುತ್ವದ ಯಶಸ್ಸು ಮುಕ್ತ ಚುನಾವಣೆ, ಬಲಿಷ್ಠ ವಿರೋದ ಪಕ್ಷ ಮತ್ತು ನೈತಿಕ ರಾಜಕಾರಣವನ್ನು ಒಳಗೊಂಡಿರುವುದಾಗಿ ಡಾ.ಬಿ.ಆರ್ ಅಂಬೇಡ್ಕರ್ ನಂಬಿದ್ದರು. ಆದರೆ, ದೇಶದಲ್ಲಿ ಜಾತೀಯತೆ, ಕೋಮುವಾದ, ಧಾರ್ಮಿಕ ಸಂಘರ್ಷಗಳು ತಾಂಡವಾಡುತ್ತಿವೆ. ದೇಶದಲ್ಲಿ ಏನಾದರೂ ಬದಲಿಸಬಹುದು ಎಂದರೆ ಅದು ಶಿಕ್ಷಣದ ಮೂಲಕವೇ, ಆದ್ದರಿಂದ ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಪ್ರಜ್ಞೆಯನ್ನು ಮೂಡಿಸುವಂತಿರಬೇಕು. ದೇಶದಲ್ಲಿ ಪ್ರಜಾಪ್ರಭುತ್ವ ಬಿಕ್ಕಟ್ಟನಲ್ಲಿದೆ, ಇದರ ನೆರವಿಗೆ ಉನ್ನತ ಶಿಕ್ಷಣ ಸಂಸ್ಥೆಗಳು ಶ್ರಮ ವಹಿಸಬೇಕು ಎಂದು ಹೇಳಿದರು.