ಜಿಲ್ಲೆ

ಧರ್ಮ ಸಂಸ್ಕೃತಿ ದೇಶದ ಕಣ್ಣು

ಮಂಜುನಾಥ

ಹೊಸಪೇಟೆ: ಶ್ರೀ ಸಿದ್ದೇಶ್ವರ ಸ್ವಾಮಿ ಕುರಿತು ಇರುವ ಕೃತಿ ಸಂಸ್ಕಾರ ಕಳಿಸುವಂತಹದ್ದಾಗಿದೆ ಎಂದು ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹೇಳಿದರು.

ಇಲ್ಲಿನ ಶ್ರೀ ಸಿದ್ದೇಶ್ವರ ಸೇವಾ ಸಮಿತಿ ಹಾಗೂ ಬೆಂಗಳೂರಿನ ಪಿ.ಆರ್.ಪಬ್ಲಿಕೇಷನ್ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ವಿಜಯನಗರ ಕಾಲೇಜಿನ ಸುವರ್ಣ ಮಹೋತ್ಸವ ಭವನದಲ್ಲಿ ಭಾನುವಾರ ರಾಷ್ಟ್ರ ಸಂತ ಸಿದ್ದೇಶ್ವರ ಶ್ರೀಗಳ ಕುರಿತ ಇಂಗ್ಲೀಷ್, ಹಿಂದಿ, ತೆಲುಗು ಭಾಷಗಳಲ್ಲಿ ರಚಿಸಿದ ರಾಗಂ ಅವರ ಯೋಗಸ್ಥಃ ಸಂತೆಯಿAದ ಸಂತನೆಡೆಗೆ ಅವೃತ್ತಿಗಳ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.

ಈ ಹಿಂದೆ ಬರಗಾಲ ಇದ್ದಾಗ ಅನೇಕ ಬರಹಗಾರರಿದ್ದರು. ಈಗ ಸಾಹಿತ್ಯ ಬರಗಾಲ ಬಂದಿದೆ. ಬರಹ ಎಂಬುದು ಕ್ಲಿಷ್ಟಕರ ಕೆಲಸವಾಗಿದೆ. ಜೀವನದಲ್ಲಿ ಅತಿದೊಡ್ಡ ಗೆಲುವು ಅಂದರೆ ನಮ್ಮನ್ನು ನಾವು ಗೆಲ್ಲಬೇಕು. ದೇಶದ ಶ್ರೀಮಂತ ಸಂಸ್ಕೃತಿಯನ್ನು ರಕ್ಷಿಸಬೇಕು. ರೈತನಿರಲಿ, ವೈದ್ಯನಿರಲಿ ತಾನು ಮಾಡುವ ಕೆಲಸದಲ್ಲಿ ಶ್ರೇಷ್ಠತೆಯನ್ನು ಸಾಧಿಸಬೇಕು. ಧರ್ಮ ಮತ್ತು ಸಂಸ್ಕೃತಿ ದೇಶದ ಅಭಿವೃದ್ಧಿಯ ಎರಡು ಕಣ್ಣುಗಳು ಇದ್ದಂತೆ. ಗುರು ಹಿರಿಯರನ್ನು ಗೌರವಿಸಿ ಗುರುವಿನ ಮಾರ್ಗದಲ್ಲಿ ನಡೆಯಬೇಕು ಎಂಬುದನ್ನು ಅರಿಯಬೇಕು. ರಾಗಂ ಅವರ ಕೃತಿಯಲ್ಲಿ ನಾಗರೀಕತೆಯನ್ನು ತಿಳಿಸುತ್ತದೆ. ಯೋಗಸ್ಥ ಕೃತಿಯು ಅಂತರ ಜತೆಗೆ ಸಂತಾನAತೆ ಬದುಕುವ ಪ್ರತಿಯೊಬ್ಬರು ಅಧ್ಯಯನ ಮಾಡಬೇಕಾದಂತ ಕೃತಿಯಾಗಿದೆ. ಬರಹ ಎಂಬುದು ತಪಸ್ಸಿದ್ದಂತೆ, ಬರಹಗಾರರು ನಿರಂತರವಾಗಿ ಬರೆಯುವಾಗ ಉತ್ತಮ ಕೃತಿಗಳು ಹೊರಬರಲಿಕ್ಕೆ ಸಾಧ್ಯವಾಗುತ್ತದೆ ಎಂದರು.

ಸAಡೂರು ಶಾಸಕಿ ಅನ್ನಪೂರ್ಣಾ ತುಕಾರಾಂ ಮಾತನಾಡಿ, ಸಾಹಿತ್ಯದಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಜನರಲ್ಲಿ ಸಂಸ್ಕೃತಿ ನಾಡು ನುಡಿಯ ಅಭಿಮಾನವನ್ನು ಬೆಳೆಯಬೇಕು ಎಂದರು.

ಬೆAಗಳೂರಿನ ಅಧ್ಯಾತ್ಮಿಕ ಚಿಂತಕ ಜಂಬುನಾಥ ಮಳಿಮಠ ಸಾನ್ನಿಧ್ಯ ವಹಿಸಿದರು. ಕಾನಾಮಡಗು ದಾಸೋಹ ಮಠದ ಐಮಡಿ ಶರಣಾರ್ಯರು ಅಧ್ಯಕ್ಷತೆ ವಹಿಸಿದರು. ಸಾಹಿತಿಗಳಾದ ಎಸ್.ಎಲ್.ಭೈರಪ್ಪ, ಮೂಗಳ್ಳಿ ಗಣೇಶ್, ರಂಗಭೂಮಿಯ ಕಲವಿದರಾದ ಯಶವಂತಸರ್ ದೇಶಪಾಂಡೆ, ಹನುಮಕ್ಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದವರಿಗೆ ಸನ್ಮಾನಿಸಲಾಯಿತು.

ಕೃತಿಯ ಲೇಖಕ ರಾಘವೇಂದ್ರ, ಪ್ರಮುಖರಾದ ರಾಜಶೇಖರ ಮಠಪತಿ, ಜೆ.ಎಂ.ಅನಿಲ್ ಕುಮಾರ್, ರಾಮಲಿಂಗಪ್ಪ, ಮಲ್ಲಿಕಾರ್ಜುನ, ರಮೇಶ್, ಡಾ.ದಿವಾಕರನಾರಾಯಣ, ಸುನಿಲ ಯಾಪಲದಿನ್ನಿ ಇತರರಿದ್ದರು.