ಹೊಸಪೇಟೆ: ರಾಮನವಮಿ ಪ್ರಯುಕ್ತ ನಗರದ ಸೇರಿದಂತೆ ವಿವಿಧೆಡೆ ಶ್ರೀರಾಮ ಹಾಗೂ ಆಂಜನೇಯ ದೇಗುಲಗಳಲ್ಲಿ ಭಾನುವಾರ ಸಂಭ್ರಮ ಹಾಗೂ ಶ್ರದ್ಧ ಭಕ್ತಿಯಿಂದ ಪೂಜೆಗಳು ನಡೆದವಲ್ಲದೆ, ಎಲ್ಲೆಲ್ಲೂ ಶ್ರೀ ರಾಮನಾಮಗಳು ಮೊಳಗಿದವು.
ಭಕ್ತರು ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವುದರ ಜತೆಗೆ ರಾಮನಾಮ ಜಪಿಸುತ್ತಿರುವುದು ಕಂಡುಬAದಿತು. ಹಂಪಿಯ ಕೊದಂಡರಾಮಗುಡಿ, ಮಾಲ್ಯವಂತ ರಘುನಂದನ ದೇಗುಲಗಳಲ್ಲೂ ವಿಶೇಷ ಪೂಜೆಗಳು ನೆರೆವೇರಿದವು. ದೇಗುಲಗಳಲ್ಲಿ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು.
ಬೆಳಗ್ಗೆಯಿಂದ ಶ್ರೀರಾಮ ಹಾಗೂ ಆಂಜನೇಯ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆದವು. ಇನ್ನು ಪುರಾತನ ಪ್ರಸಿದ್ಧ ಶ್ರೀ ಮಾಲ್ಯವಂತ ಶ್ರೀರಘುನಾಥ ದೇಗಯಲದಲ್ಲಿ ಕಳೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಂಜೆ ಶ್ರೀ ರಾಮನ ಬ್ರಹ್ಮರಥೋತ್ಸವ ನಡೆಯಿತು. ಇನ್ನೂ ಮರಿಯಮ್ಮನಹಳ್ಳಿಯ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಹಾಗೂ ಆಂಜನೇಯ ಸ್ವಾಮಿ ನೂತನ ಜೋಡಿ ರಥೋತ್ಸವ ಸಕಲ ಭಕ್ತರ ಸಮುಖದಲ್ಲಿ ರಥೋತ್ಸವ ನಡೆಯಿತು.
ನಗರದ ದೇಗುಲಗಳ ಬಳಿ ಕೇಸರಿ ಬಾವುಟಗಳು ಗಮನ ಸೆಳೆದವು. ಹಿಂದೆದೆAದಿಗಿAತಲೂ ಈ ಬಾರಿ ನಗರದ ಎಲ್ಲೆಡೆ ಕೇಸರಿ ಭಾವುಟಗಳು ಹಾರಾಡಿದವು ಶ್ರೀರಾಮ ಭಕ್ತರು ಕೇಸರಿ ಪೇಟಾ ಧರಿಸಿ ಗಮನ ಸೆಳೆದರು.