ಹೊಸಪೇಟೆಯಲ್ಲಿ ಗುರುವಾರ ಸಂಜೆ ಮಳೆಯಿಂದ ತಂಪಾದ ವಾತವರಣ 
ಜಿಲ್ಲೆ

ಹೊಸಪೇಟೆಯಲ್ಲಿ ಬಿರುಸಿನ ಮಳೆ

ಮಂಜುನಾಥ

ಹೊಸಪೇಟೆ: ನಗರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಗುರುವಾರ ಸಂಜೆ ಒಂದು ಗಂಟೆಗೂ ಅಧಿಕ ಕಾಲ ಬಿರುಸಿನ ಮಳೆಯಾಗಿದೆ.

ಸಂಜೆ ಸುರಿದ ಮಳೆಯಿಂದ ನಗರದ ಬಹುತೇಕ ಚರಂಡಿಗಳು ಉಕ್ಕಿ ಹರಿದಿವೆ. ಹಳ್ಳ, ಕೊಳ್ಳಗಳು ಭರ್ತಿಯಾಗಿವೆ. ಆಜಾದ್ ನಗರದಿಂದ ಅಲೆಮಾರಿ ಕಾಲೊನಿ ವರೆಗಿನ ಮುಖ್ಯರಸ್ತೆ, ಬಡಾವಣೆಯಲ್ಲಿ ನೀರು ನೀಂತು ಸವಾರರಿಗೆ ಅಡಚಣೆಯಾಯಿತು. ಜನ ಓಡಾಡಲು ಸಮಸ್ಯೆಯಾಯಿತು.

ಪಟೇಲ್ ನಗರ, ಬಸವೇಶ್ವರ ಬಡಾವಣೆ, ಚಪ್ಪರದಹಳ್ಳಿ, ಚಿತ್ತವಾಡ್ಗಿ, ಪಟೇಲ್ ನಗರ ಸೇರಿದಂತೆ ಹಲವೆಡೆ ಚರಂಡಿಗಳು ಉಕ್ಕಿ ಹರಿದು, ಹೊಲಸು ರಸ್ತೆ ಮೇಲೆ ಹರಿದಾಡಿದೆ. ತಾಲೂಕಿನ ಹಂಪಿ, ಚಿನ್ನಾಪುರ, ನಲ್ಲಾಪುರ, ಹೊಸೂರು, ಬೈಲುವದ್ದಿಗೇರಿ, ಧರ್ಮಸಾಗರ, ವಡ್ಡರಹಳ್ಳಿ, ವ್ಯಾಸನಕೆರೆ, ಬಸವನದುರ್ಗ, ನಾಗೇನಹಳ್ಳಿ, ಮರಿಯಮ್ಮಹಳ್ಳಿಯ ಹೋಬಳಿಯಲ್ಲಿ ಸೇರಿದಂತೆ ಜಿಲ್ಲೆಯ ಹಲವೆಡ ಮಳೆಯಾಗಿರುವುದು ವರದಿಯಾಗಿದೆ.