ಜಿಲ್ಲೆ

ನಿಶೇಧಿತ 515 ಕೆಜಿ ಪ್ಲಾಸ್ಟಿಕ್ ವಶ

ಮಂಜುನಾಥ

ಹೊಸಪೇಟೆ: ನಿಶೇಧಿತ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟದ ಮಾಡುತ್ತಿದ್ದ ಅಂಗಡಿ ಮೇಲೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮನೋಹರ್ ನೇತೃತ್ವದಲ್ಲಿ ಇಲ್ಲಿನ ನಗರಸಭೆ ಅಧಿಕಾರಿಗಳು ದಾಳಿ ನಡೆಸಿದ್ದು, 515 ಕೆಜಿ ವಿವಿಧ ರೀತಿಯ ಪ್ಲಾಸ್ಟೀಕ್ ವಶಕ್ಕೆ ಪಡೆದಿದ್ದಾರೆ. ಅಂಗಡಿ ಸೀಜ್ ಮಾಡಿದ್ದಾರೆ.

ನಿಶೇಧಿತ ಪ್ಲಾಸ್ಟಿಕ್ ಬಳಸದಂತೆ ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡದಂತೆ ನಗರಸಭೆಯು ಜಾಗೃತಿ ಮೂಡಿಸುತ್ತಿದೆ. ನಗರದ ಮೂರುಅಂಗಡಿ ವೃತ್ತದ ಬಳಿ ಬಾಬುಲಾಲ್ ಮಾಲಿಕತ್ವದ ಹನುಮಾನ್ ಪ್ಯಾಕೇಜಿಂಗ್ ಅಂಗಡಿ ಈ ಹಿಂದೆ ಎರಡು ಬಾರಿ ದಾಳಿ ನಡೆಸಿ, ದಂಡ ಕೂಡ ಹಾಕಿದ್ದಾರೆ. ಎಚ್ಚೆತ್ತುಕೊಳ್ಳದ ಮಾಲಿಕನ ಅಂಗಡಿ ಮೇಲೆ ಮೂರನೇ ಬಾರಿ ದಾಳಿ ಮಾಡಿ, ಪ್ಲೇಟ, ಲೋಟ, ಚಮಚ, ಪೇಪರ್‌ಗಳು ಸೇರಿದಂತೆ ಇತರೆ 515 ಕೆಜಿ ತೂಕದ ನಿಶೇಧಿತ ಪ್ಲಾಸ್ಟಿಕ್ ವಸ್ತುಗಳು ವಶಕ್ಕೆ ಪಡೆದಿದ್ದಾರೆ. ಜತೆಗೆ ಅಂಗಡಿಗೆ ಬೀಗ ಹಾಕಿದ್ದು, ದಂಡ ಕಟ್ಟಿದ ನಂತರ ಅಂಗಡಿ ತೆರವಿಗೆ ಅವಕಾಶ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಅಂಗಡಿಯ ಗೋದಾಮಿನಲ್ಲಿ ತಪಾಸಣೆ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಪತ್ತೆ ಮಾಡಲಾಯಿತು. ಸಂಗ್ರಹಿಸಿಟ್ಟಿದ್ದ 515 ಪ್ಲಾಸ್ಟಿಕ್ ಕವರ್‌ಗಳು, ಪ್ಲಾಸ್ಟಿಕ್ ಲೇಪನವಿರುವ ಪೇಪರ್ ಕಪ್‌ಗಳು, ಬ್ಯಾಗ್‌ಗಳು, ಪ್ಲಾಸ್ಟಿಕ್ ಕಪ್‌ಗಳು, ಲೋಟಗಳು, ಟೇಬಲ್ ಮೇಲೆ ಹಾಸುವ ಪ್ಲಾಸ್ಟಿಕ್ ಹಾಳೆಗಳನ್ನು ವಶಕ್ಕೆ ಪಡೆಯಲಾಯಿತು. ಬಳಿಕ ನಗರಸಭೆಯ ಆರೋಗ್ಯ ವಿಭಾಗದ ಸಿಬ್ಬಂದಿ ಮತ್ತು ಪೌರಕಾರ್ಮಿಕರು ಎಲ್ಲವನ್ನು ನಗರಸಭೆಯ ಟಿಪ್ಪರ್ ಮೂಲಕ ಸಾಗಿಸಿದರು.

ವಶಪಡಿಸಿಕೊಂಡಿರುವ ವಸ್ತುಗಳನ್ನು ಯಾವುದೇ ಕಾರಣಕ್ಕೂ ವಾಪಸ್ ನೀಡುವುದಿಲ್ಲ. ಆದರೆ, ಮುಂದೆ ಯಾವುದೇ ಕಾರಣಕ್ಕೂ ಇಂತಹ ವಸ್ತುಗಳನ್ನು ಮಾರಾಟ ಮಾಡಬೇಡಿ. ಮಾರಾಟ ಮಾಡಲು ಪ್ರಯತ್ನಿಸಿದರೆ ಕ್ರಮೈಗೊಳ್ಳುತ್ತೆವೆ. ಪರಿಸರ ಸಂರಕ್ಷಣಾ ಕಾಯಿದೆಯಡಿ ದಾವೆ ಹೂಡಲಾಗುತ್ತದೆ ಎಂದು ಎಚ್ಚರಿಸಿದರು.

ಪರಿಸರ ಎಇಇ ಆರತಿ, ಆರೋಗ್ಯ ನಿರೀಕ್ಷಕರು ವಿರೂಪಾಕ್ಷಾಪ್ಪ, ದಾದಾಪೀರ್, ರಾಮಚಂದ್ರ ಇತರರಿದ್ದರು.