ಜಿಲ್ಲೆ

ಛಾಯಾಗ್ರಹಕರಿಗೆ ಬಣಗಾರರಂತೆ ತಾಳ್ಮೆ ಇರಲಿ

ಹೊಸಪೇಟೆ: ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಬಳ್ಳಾರಿಯ ತೋರಣಗಲ್ಲಿನ ವಿದ್ಯಾನಗರದಲ ಹೋಟೆಲ್ ಹಯಾತ್ ನಲ್ಲಿ ನಗರದ ಛಾಯಾಗ್ರಾಹಕ ಶಿವಶಂಕರ ಬಣಗಾರ ಅವರ ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.

ಜೆಎಸ್ ಡಬ್ಲ್ಯೂ ಉಪಾಧ್ಯಕ್ಷ ರಾಲ್ಫ್ ಸುನೀಲ್ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಬಣಗಾರರ ಹಂಪಿಯ ಛಾಯಾಚಿತ್ರಗಳು ವಿಭಿನ್ನ ರೀತಿಯಲ್ಲಿ ತೆಗೆದ ಅದ್ವಿತೀಯ ಚಿತ್ರಗಳಾಗಿವೆ. ಎಲ್ಲರೂ ನೋಡುವ ಹಂಪಿಯನ್ನು ವಿಭಿನ್ನವಾಗಿ ತಮ್ಮ ಕ್ಯಾಮರ ಕಣ್ಣಿನಲ್ಲಿ ಸಾವಿರಾರು ಚಿತ್ರಗಳನ್ನು ತೋರಿಸುತ್ತಾರೆ. ಛಾಯಾ ಗ್ರಾಹಕರಿಗೆ ಬಣಗಾರರಂತೆ ಶ್ರಮ, ತಾಳ್ಮೆ ಬೇಕಾಗುತ್ತದೆ ಎಂದರು.

ತೋರಣಗಲ್ಲು ಡಿವೈಎಸ್ ಪಿ. ಪ್ರಸಾದ್ ಗೋಖಲೆ ಮಾತನಾಡಿ, ಶಿವಶಂಕರ ಬಣಗಾರರ ಛಾಯಾಚಿತ್ರಗಳ ಮೂಲಕ ಹಂಪಿಗೆ ಇನ್ನೂ ಹೆಚ್ಚು ಖ್ಯಾತಿ ಸಿಕ್ಕಿದೆ. ಇವರ ಖ್ಯಾತಿ ವಿಶ್ವವಿಖ್ಯಾತವಾಗಲಿ ಎಂದರು.

ಹೋಟೆಲ್ ಹಯಾತ್ ಮುಖ್ಯಸ್ಥ ರವೀಂದ್ರನಾಥ್ ಯಕಲಾಪುರ ಇತರರಿದ್ದರು.