ಹೊಸಪೇಟೆ: ತಾಲೂಕಿನ ಹೊಸ ಚಿನ್ನಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಕೆ.ಬಸವನಗೌಡ ಮಂಡಿಸಿರುವ ಸಂಶೋಧನಾ ಪ್ರಬಂಧಕ್ಕೆ ಹಂಪಿ ಕನ್ನಡ ವಿವಿಯಿಂದ ಪಿಎಚ್‌ಡಿ ಪದವಿ ಪ್ರಕಟಿಸಿದೆ.
ಶೈವ ಮತ್ತು ವೈಷ್ಣವ ಮಠಗಳು: ಚಾರಿತ್ರಿಕ ಅಧ್ಯಯನ (ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳನ್ನು ಅನುಲಕ್ಷಿಸಿ) ಡಾವಿಶಾನ್ಸ್ ಪಿಂಟೋ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಪಿಎಚ್‌ಡಿ ಪದವಿ ಘೋಷಿಸಿದೆ.