ಜಿಲ್ಲೆ

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಕೊಲೆ

ಹೊಸಪೇಟೆ: ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಯುವಕನೋರ್ವ ತನ್ನ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ನಗರದ ಮೆಜೆಸ್ಟಿಕ್‌ ಪೆಟ್ರೋಲ್‌ ಬಂಕ್‌ ಎದುರು ಮಂಗಳವಾರ ನಡೆದಿದೆ.

ನಗರದ ರಾಜಾಜಿನಗರದ ನಿವಾಸಿ ಶಾಂತಕುಮಾರ (22) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ನಗರದ ನಿವಾಸಿ ಹುಲಿಗೇಶ್‌ (23) ಕೊಲೆ ಮಾಡಿರುವ ಆರೋಪಿಯಾಗಿದ್ದು, ಇಬ್ಬರು ಮದ್ಯಪಾನ ಸೇವಿಸಿದ್ದು, ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ.

ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ ಇಬ್ಬರು ಬಡಿದಾಡಿಕೊಂಡಿದ್ದಾರೆ. ಹುಲಿಗೇಶ್‌ ಕೈ, ಕಾಲಿನಿಂದ ಶಾಂತಕುಮಾರಗೆ ಒದ್ದಿದ್ದು, ಹೊಡೆತಕ್ಕೆ ತಡೆಯದೇ ನೆಲಕ್ಕೆ ಕುಸಿದು ಶಾಂತಕುಮಾರ ಮೃತಪಟ್ಟಿದ್ದಾನೆ.

ಈ ಕುರಿತು ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ. ಎಸ್ಪಿ ಶ್ರೀಹರಿಬಾಬು, ಎಎಸ್ಪಿ ಸಲೀಂ ಪಾಷಾ, ಡಿವೈಎಸ್ಪಿ ಮಂಜುನಾಥ ತಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.