ಹೊಸಪೇಟೆ: ರಸಗೊಬ್ಬರವನ್ನು ಅತಿಯಾದ ಪ್ರಮಾಣದಲ್ಲಿ ಬಳಸುತ್ತಿರುವುದರಿಂದ ಕೃಷಿ ಭೂಮಿ ದಿನೇ ದಿನೇ ಫಲವತ್ತತೆ ಕಳೆದುಕೊಳ್ಳುತ್ತಿದೆ. ಅಲ್ಲದೇ, ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಎಸ್ಪಿ ಬಿ.ಎಲ್.ಶ್ರೀಹರಿಬಾಬು ಹೇಳಿದರು.
ಸಖಿ ಸಂಸ್ಥೆ, ರತ್ನಭೂಮಿ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಕಡ್ಡಿರಾಂಪುರದಲ್ಲಿ ಭಾನುವಾರ ಹಮ್ಮಿಕೊಂಡ ಸಾವಯವ ಸಂಜೆ ಮತ್ತು ಉತ್ಪನ್ನಗಳ ಮಾರಾಟ ಹಸಿರಿನೊಂದಿಗೆ ಮಾತುಕತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಸಾಯನಿಕ ಗೊಬ್ಬರ ಬಳಸಿ ಬೇಸಾಯ ಮಾಡುವಂತಹ ಪದ್ಧತಿ ಯನ್ನು ರೈತರು ತೋರೆಯಬೇಕು. ಬದಲಿಗೆ ಇಳುವರಿ ಹೆಚ್ಚಿಸುವ ಹಾಗೂ ಭೂಮಿ ಫಲವತ್ತತೆ ಕಾಯ್ದುಕೊಳ್ಳುವಂಥ ಸಾವಯವ ಕೃಷಿಗೆ ಮುಂದಾಗಬೇಕು. ರಾಸಾಯನಿಕ ಗೊಬ್ಬರ ಬಳಕೆ ಯಿಂದ ಆಹಾರ ಪ್ರಸ್ತುತ ವಿಷವಾಗುತ್ತಿದೆ. ಇಂಥ ಆಹಾರ ಸೇವಿಸಿದರೆ ಮನುಷ್ಯನ ಜೀವನ ಕ್ರಮವೇ ಬದಲಾಗುತ್ತದೆ. ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ರೈತರು ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಕನ್ನಡ ವಿವಿ ಪ್ರಾಧ್ಯಾಪಕ ಅಶೋಕಕುಮಾರ್ ರಂಜೇರೆ ಮಾತನಾಡಿ, ಬೆಳೆಗಳಿಗೆ ನಾನಾ ರೋಗಗಳು ಮೆತ್ತಿಕೊಳ್ಳುತ್ತಿವೆ. ತಿನ್ನುವ ಆಹಾರ ವಿಷಪೂರಿತವಾಗುತ್ತಿದೆ. ಆದ್ದರಿಂದ ಎಲ್ಲರೂ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರ ಮೂಲಕ ಆರೋಗ್ಯ ಹಾಗೂ ಸದೃಢ ಸಮಾಜ ನಿರ್ಮಿಸಬೇಕಿದೆ. ಇಲಾಖೆಯಿಂದ ಬೇಕಾದ ಸಹಕಾರ ನೀಡಲಾಗುತ್ತದೆ ಎಂದರು. ಸAಸ್ಥೆಯ ಮುಖ್ಯಸ್ಥೆ ಡಾ.ಭಾಗ್ಯ ಲಕ್ಷಿö್ಮÃ, ಪ್ರಮುಖರಾದ ಮಲ್ಲಿಕಾರ್ಜುನ ಹೊಸಪಾಳ್ಯ, ಬಿ.ಸೋಮೇಶ, ಉದಯ ಬೇಕಲ್, ಕೋಮುರಿ ವಿಜಯ, ಪಂಪಯ್ಯ ಸ್ವಾಮಿ, ಅನ್ನಪೂರ್ಣ ಇತರರಿದ್ದರು.