ಹೊಸಪೇಟೆ: ಮೂಡನಂಬಿಕೆ ಹೆಸರಿನಲ್ಲಿ ತಲತಲಾಂತರದಿAದ ಶೋಷಿತರ ವರ್ಗದವರ ಮಹಿಳೆಯರ ಮೇಲೆ ದೇವಾದಾಸಿಯರ ಶೋಷಣೆ ನಡೆಯುತ್ತಿದ್ದು, ಸರ್ಕಾರದಿಂದ ತಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು.
ನಗರ ಪತ್ರಿಕಾಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 1093-94ರಲ್ಲಿ ದೇವಾದಾಸಿ ಮಹಿಳೆಯರ ಸರ್ವೆ ನಡೆಯಿತು. ಉತ್ತರಮ ಭಾರದಲ್ಲಿ 46 ಸಾವಿರ ದೇವಾದಾಸಿಯರು ಗಣತಿಯಾಗಿತ್ತು. ಆದರೂ ಇನ್ನೂ ಅನಿಷ್ಠ ಪದ್ದತಿ ಜೀವಾಂತವಾಗಿದ್ದು, ಇದರಲ್ಲಿ ಮಾದಿಗರ ಹೆಚ್ಚಿದ್ದಾರೆ. ನಿರ್ಮೂಲನೆಗಾಗಿ ಅಭಿವೃದ್ಧಿ ನಿಗಮದಿಂದ ದೇವದಾಸಿಯರ ಸಮೀಕ್ಷೆ ಸೋಮವಾರದಿಂದ ಆರಂಭವಾಗಿದ್ದು, 45ದಿನಗಳವರೆಗೆ ಸಮೀಕ್ಷೆ ನಡೆಸುತ್ತಿದೆ. ರಾಜ್ಯ ಬಜೇಟ್‌ನ ದೇವದಾಸಿ ಮಹಿಳೆಯರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿತ್ತು. ಪುನರ್ವಸತಿ ಸೌಲಭ್ಯಗಳು ಪಡೆಯಲು ಅರ್ಹರು ವಂಚಿತರಾಗುತ್ತಿದ್ದು, ನಕಲಿ ಫಲಾನುಭವಿಗಳ ಪಾಲಾಗುತ್ತಿದೆ. ಮಧ್ಯವರ್ತಿಗಳ ಹಾಳಿಯನ್ನು ತಪ್ಪಿಸಲು ಜಾಗೃತಿ ಕಾರ್ಯ ನಡೆಸಲಾಗುತ್ತಿದೆ ಎಂದರು.
ದೇವದಾಸಿ ಮಕ್ಕಳ ತಂದೆಯ ಹೆಸರನ್ನು ಸೇರಿಸಲು ಮಕ್ಕಳಿಗೆ ಮುಜುಗರ ಉಂಟಾಗುತ್ತಿತ್ತು. ಇದೀಗ ಕಾಯ್ದೆಯಲ್ಲಿ ಇದಕ್ಕೆ ಅವಕಾಶ ನೀಡಲಾಗಿದೆ. ತಂದೆ ಯಾರೆಂದು ಗೊತ್ತಿದ್ದರೆ. ಅವರ ಹೆಸರನ್ನು ಸೇರಿಸಬಹುದಾಗಿದೆ. ಮತ್ತು ಆಸ್ತಿಯಲ್ಲೂ ಪಾಲು ಕೇಳಲು ಕಾಯ್ದೆ ಅನುಕೂಲ ಕಲ್ಪಿಸಿದೆದೆ ಎಂದು ತಿಳಿಸಿದರು.
ಪ್ರಮುಖರಾದ ಅಂಬಣ್ಣ ಅರೋಲಿಕರ್, ಇಮಾಮ್ ನಿಯಾಜಿ, ನಿಮಗಲ್ ರಾಮಕೃಷ್ಣ, ಚಂದುಲಿAಗ ಕಲಾಲ್ ಬಂಡಿ, ಮಲ್ಲಿಕಾರ್ಜುನ, ಎಚ್.ಶೇಷು, ಸಣ್ಣ ಮಾರೆಪ್ಪ, ಮಂಜುಳ ಮಾಳ್ವಿ, ಧಾನಪ್ಪ ನಿಲಗಲ್ ಇತರರಿದ್ದರು.