ಹೊಸಪೇಟೆ: ಕ್ಯಾಲೆಂಡರ್ ಹೊಸವರ್ಷವನ್ನು ನಗರ ಸೇರಿ ಜಿಲ್ಲೆಯಲ್ಲಿ ಹೊಸವರ್ಷವನ್ನು ಸ್ವಾಗತಿಸುವುದು ಹಾಗೂ ಮಗಿದು ಹೋಗುವ ವರ್ಷಕ್ಕೆ ವಿದಾಯಕ್ಕೆ ಸಂಭ್ರಮ ಸಡಗರದಿಂದ ಯುವಕರು ಸೇರಿದಂತೆ ಇತರೆ ಜನರು ಭಾನುವಾರ ರಾತ್ರಿ ಆಚರಿಸಿದರು. ಇನ್ನೂ ಕಲರ್ ಫುಲ್ಲಾಗಿ ಸೆಲಬ್ರೆಟ್ ಮಾಡಬೇಕು ಎಂದು ಪ್ರವಾಸಿಗರ ಸ್ವರ್ಗ ಅಂತಾನೇ ಕರೆಸಿಕೊಳ್ಳೋ ಹಂಪಿಯಲ್ಲಿ ದೇಶ-ವಿದೇಶಿಗರು ಪರಿಸರ ಸೇರಿದಂತೆ ಜಿಲ್ಲೆಯಲ್ಲಿ ಯುವಕರು ಸೇರಿ ಇತರೆ ವರ್ಗದ ಜನರು 2024ಕ್ಕೆ ಗುಡ್ ಬೈ ಹೇಳಿ 2025ಕ್ಕೆ ಮಂಗಳವಾರ ತಡರಾತ್ರಿ ರಾತ್ರಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ಡಿ.31ರ ಸೂರ್ಯಾಸ್ತ ಆಗುತ್ತಿದ್ದಂತೆ, ಬಡಾವಣೆಯ ಬೀದಿಗಳು ಹಾಗೂ ನಗರ, ಪಟ್ಟಣಗಳ ಪ್ರಮುಖ ರಸ್ತೆಗಳಲ್ಲಿ ವಾಹನಗಳು ಸಂಚರಿಸುವ ವೇಗ ಹೆಚ್ಚಾಯಿತು. ಹೊಸ ವರ್ಷಾಚರಣೆ ಕಾರ್ಯಕ್ರಮಗಳಿಗೆ ಹಾಜರಾಗಲು ಯುವಕರು ವೇಗದೊಂದಿಗೆ ಹೋಗುತ್ತಿದ್ದರು. ರಾತ್ರಿ ಆಗುತ್ತಿದ್ದಂತೆ ಸಂಭ್ರಮವು ಮತ್ತಷ್ಟು ಹೆಚ್ಚಾಯಿತು. ಕೆಲವು ಯುವಕರು ಬೈಕ್ ಹಾಗೂ ಕಾರುಗಳ ಶಬ್ದಹೆಚ್ಚಿಸಿಕೊಂಡು ರಸ್ತೆಗಳಲ್ಲಿ ಸಂಭ್ರಮ ಪಟ್ಟರು. ಕೆಲವರು ರಸ್ತೆಗಳಲ್ಲಿಯೇ ಹ್ಯಾಪಿ ನ್ಯೂ ಇಯರ್ ಎಂದು ಬರೆಯುವ ಸಾಹಸದಲ್ಲಿ ತೊಡಗಿದ್ದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ನ್ಯಾಯಾಲಯದ ಮುಂದೆ, ಕಾಲೇಜು ರಸ್ತೆ, ಮೇನ್‌ಬಜಾರ್ ಸೇರಿದಂತೆ ಇತರೆ ಕಡೆ ಬೇಕರಿಗಳಲ್ಲಿ ಮಂಗಳವಾರ ಸಂಜೆಯಿAದಲೇ ವೈವಿಧ್ಯಮಯ ಕೇಕ್ ಖರೀದಿಗೆ ಜನರು ಮುಗಿಬಿದ್ದಿದ್ದರು. ಸಿಹಿ ತಿನಿಸುಗಳಿಗೆ ವಿಶೇಷ ಬೇಡಿಕೆ ಇತ್ತು. ತಂಪು ಪಾನೀಯಗಳು ಕೂಡಾ ಯಥೇಜ್ಯವಾಗಿ ಮಾರಾಟವಾದವು.
ಹಂಪಿ, ತುಂಗಭದ್ರಾ ಜಲಾಶಯ, ಹಂಪಿ ಬೈಪಾಸ್, ರಾಷ್ಟಿçÃಯ ಹೆದ್ದಾರಿ, ರಾಜ್ಯ ಹೆದ್ದಾರಿಗಳು ಸೇರಿದಂತೆ ನಗರದ ಪ್ರಮುಖ ವೃತ್ತಗಳಲ್ಲಿ ಯುವಕರು ತಂಡ ತಂಡವಾಗಿ ನಿಂತು ಪರಸ್ಪರ ಹೊಸ ವರ್ಷದ ಶುಭಾಶಯ ಕೋರಿದರು. ಕೆಲವು ಬಡಾವಣೆಗಳಲ್ಲಿ ಕಡೆಗಳಲ್ಲಿ ಹಾಡು, ಸಂಗೀತ ಹಾಕಿಕೊಂಡು ಯುವಕರು, ಮಕ್ಕಳು ನೃತ್ಯ ಮಾಡಿದರು.
ನಗರದ ಸೇರಿದಂತೆ ನಾನಾ ಕಡೆಯ ಬಾರ್ ಹಾಗೂ ರೆಸ್ಟೊರೆಂಟ್‌ಗಳು ಮದ್ಯಪ್ರಿಯರಿಂದ ಭರ್ತಿಯಾಗಿದ್ದವು. ಎಂಎಸ್‌ಐಎಲ್ ಮಳಿಗೆಯಲ್ಲಿ ಮದ್ಯ ಖರೀದಿಗಾಗಿ ಸಂಜೆಯಿAದಲೇ ಜನರು ಮುಗಿಬಿದ್ದಿದ್ದರು. ಚಿಕನ್ ಹಾಗೂ ಮಟನ್ ಖರೀದಿ ಭರಾಟೆಯೂ ಜೋರಾಗಿತ್ತು. ಮಧ್ಯರಾತ್ರಿ ಪಟಾಕಿ ಸಿಡಿಸಿ, ಸಿಹಿ ಹಂಚುವ ತಯಾರಿ ಮಾಡಿಕೊಂಡಿದ್ದರು. ಸುಕ್ಷö್ಮ ಹಾಗೂ ಜನ ಸಂದಣಿ ಪ್ರದೇಶಗಳಲ್ಲಿ ಹೆಚಿನ ಭದ್ರತೆ ಒದಗಿಸಲಾಗಿದೆ. ಪೊಲೀಸರು ಸೇರಿದಂತೆ ಹೆಚ್ಚುವರಿ 175 ಗೃಹರಕ್ಷಕರು, ಐಆರ್‌ಬಿ ಪ್ಲೇಟೂನ್, 26 ನಾಕಾಬಂದಿ, ನಗರ ಸೇರಿ ಗ್ರಾಮೀಣ ಪ್ರದೇಶದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಹಂಪಿ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ತಾಣ. ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ದೇಶ-ವಿದೇಶದ ಪ್ರವಾಸಿಗರು ಹೊಸ ವರ್ಷದ ಸ್ವಾಗತಕ್ಕೆ ಕಳೆದ ಕೆಲ ದಿನಗಳಿಂದ ನಗರ ಹಾಗೂ ಕಮಲಾಪುರದ ಭಾಗದಲ್ಲಿ ಈಗಾಗಲೇ ಹೋಂ ಸ್ಟೇ, ರೆಸಾರ್ಟ್, ಹೋಟೆಲ್‌ಗಳಲ್ಲಿ ಬಿಡು ಮಂಗಳವಾರ ತಡ ರಾತ್ರಿ ಕ್ಯಾಲೆಂಡರ್ ಹೊಸವರ್ಷದ ಸಂಭ್ರಮಿಸಿದ್ದಾರೆ. ಹೊಸವರ್ಷ ಎಂದರೆ ಏನೋ ಸಂಭ್ರಮ, ಸಡಗರ. ಹೊಸ ಮನ್ವಂತರಕ್ಕೆ ಸಾಕ್ಷಿಯಾಗುವ ಸುಸಮಯ. ಹಾಗಾಗಿ, ತಮ್ಮ ಅಚ್ಚುಮೆಚ್ಚಿನ ಪ್ರದೇಶಗಳಲ್ಲಿ 2025ಕ್ಕೆ ಟಾಟಾ ಹೇಳಿ, 2025ಕ್ಕೆ ವೆಲ್‌ಕಂ ಮಾಡಿದರು.
ಹಂಪಿಗೆ ಭೇಟಿ ನೀಡಿದ್ದ ದೇಶ- ವಿದೇಶದ ಪ್ರವಾಸಿಗರು 2024ನೇ ಸಾಲಿನ ಕೊನೆ ಸೂರ್ಯಾಸ್ತವನ್ನು ಮಂಗಳವಾರ ಕಣ್ತುಂಬಿಕೊAಡರು. ಹಂಪಿಯಲ್ಲಿರುವ ಹೇಮಕೂಟ ಪರ್ವತ, ಮಾಲ್ಯವಂತ, ಮಾತಂಗ ಪರ್ವತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಸಂಜೆ 4.30ರಿಂದ ಜನರು ಆಯ್ದ ಪ್ರದೇಶಗಳಲ್ಲಿ ಸೂರ್ಯಾಸ್ತ ವೀಕ್ಷಣೆಗಾಗಿ ಕಾದಿದ್ದರು. ಸಂಜೆ 6 ಗಂಟೆಗೆ ಕೆಂಧೂಳಿನ ಬಣ್ಣದಲ್ಲಿ ಬೆಟ್ಟಗಳಲ್ಲಿ ಮರೆಯಾಗುವ ರವಿಯನ್ನು ಕಣ್ತುಂಬಿಕೊAಡ ಜನರು ಸಿಳ್ಳೆ, ಚಪ್ಪಾಳೆ ತಟ್ಟುವ ಮೂಲಕ 2024ಕ್ಕೆ ವಿದಾಯ ಹೇಳಿದರು.
ಹೊಸ ವರ್ಷಕ್ಕೆ ಹಂಪಿ, ತುಂಗಭಧ್ರಾ ಜಲಾಶಯ ಸೇರಿ ಇತರೆ ಪ್ರವಾಸಿತಾಣಗಳಲ್ಲಿ ಪ್ರವಾಸಿಗರ ಸೇರಿ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯದಂತೆ ಭದ್ರತೆ ಒದಗಿಸಲಾಗಿದೆ. ಅಕ್ರಮ ಚಟುವಟಿಕೆಗಳ ಮೇಲೆ ನಿಗವಹಿಸಲಾಗಿದೆ. - ಬಿ.ಎಲ್.ಶ್ರೀಹರಿಬಾಬು, ಎಸ್ಪಿ, ವಿಜಯನಗರ