oplus_16 
ಜಿಲ್ಲೆ

ಹೊಸ ಶಾಸಕರಿಗೆ ಸಚಿವ ಸ್ಥಾನ ಇಲ್ಲ

ಮಂಜುನಾಥ

ಹೊಸಪೇಟೆ: ನಮ್ಮದೇ ಸಚಿವ ಸ್ಥಾನ ಉಳಿಸಿಕೊಳ್ಳೋದು ಕಷ್ಟ ಆಗಿದೆ. ಸಿಎಂ ಬದಲಾವಣೆ ಆಗುತ್ತಾರೆ ಅಂದರೆ ನಾವೇನು ಹೇಳೋದು? ಬೆಂಗಳೂರಿಗೆ ಬಂದು ಕೇಳಿ, ಹೊಸಪೇಟೆಯಲ್ಲಿ ಕುಂತು ಹೇಳೋಕಾಗೋಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಸುದ್ದಿಗಾರೊಂದಿಗೆ ಮಂಗಳವಾರ ಮಾತನಾಡಿ, ನೀವು ಬೆಂಗಳೂರಿಗೆ ಬಂದರೆ ನಾನೇ ಸಿಎಂ ಅವರನ್ನ ಭೇಟಿ ಮಾಡಿಸ್ತೀನಿ. ಅಲ್ಲೇ ಸಿಎಂಗೆ ಕೇಳಿ. ದಲಿತ ಸಚಿವರು, ಶಾಸಕರ ಸಭೆಯನ್ನ ಮುಂದೇನು ಮಾಡುತ್ತೀವಿ. ಅದಕ್ಕೂ ಸಿಎಂ ಬದಲಾವಣೆ ವಿಚಾರಕ್ಕೂ ಏನು ಸಂಬAಧವಿಲ್ಲ. ಸಿಎಂ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲವಾಣೆ ಮುಗೀದು ಹೋದ ಅಧ್ಯಾಯ. ಅದು ಬಂದಾಗ ನೋಡೋಣ ಎಂದರು.

ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಉತ್ತರಿಸಿದ ಸಚಿವ, ಅದು ಹೈಕಮಾಂಡ್ ನಿರ್ಣಯ ಕೈಗೊಳ್ಳುತ್ತೇ. ಹೊಸದಾಗಿ ಬಂದ ಶಾಸಕರಿಗೆ ಸಚಿವ ಸ್ಥಾನ ನೀಡಬಾರದು ಎಂಬ ಡಿಸಿಶನ್ ಆಗಿದೆ. ನಮ್ಮ ಪ್ರಕಾರ ಯಾರು ಇಲ್ಲ ನೀವು ಬೇಕಾದರೆ ಬೆಂಗಳೂರು ಡೆಲ್ಲಿಗೆ ಹೋಗಿ ಕೇಳಿ ಎಂದರು.