ಹೊಸಪೇಟೆಯ ಅಖಿಲ ಭಾರತ ವಕೀಲರ ಸಂಘದಿAದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.  
ಜಿಲ್ಲೆ

ನೆರೆ ಹಾವಳಿಗೆ ವಿಶೇಷ ಅಧಿವೇಶನ ಕರೆಯಿರಿ

ಮಂಜುನಾಥ

ಹೊಸಪೇಟೆ: ನೆರೆ ಹಾವಳಿ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನ ಕರೆಯಬೇಕು ಆಗ್ರಹಿಸಿ ಅಖಿಲ ಭಾರತ ವಕೀಲರ ಸಂಘದ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಸಂಜೆ ಪ್ರತಿಭಟನೆ ನಡೆಸಲಾಯಿತು.

ರಾಜ್ಯಾದ್ಯಂತ ಸುರಿದ ಮಳೆಯಿಂದಾಗಿ, ರಾಜ್ಯದಲ್ಲಿ ನೆರೆ ಹಾವಳಿಯಂಟಾಗಿದ್ದು, ರೈತರಿಗೆ ಅಪಾರ ಬೆಳೆ ನಷ್ಟ ಉಂಟಾಗಿದೆ. ಮನೆಗಳಿಗೆ ಹಾನಿಯಾಗಿ, ಜನರು ಸಾವನ್ನಪ್ಪಿದ್ದಾರೆ. ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಗುಡ್ಡಗಳು ಅಪಾರ ಪ್ರಮಾಣದಲ್ಲಿ ಕುಸಿದಿದ್ದು ಜನರು ಸಾವನ್ನಪ್ಪಿದ್ದಾರೆ. ಆದರೆ ಆಡಳಿತ ಯಂತ್ರವು ಕೇವಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದನ್ನು ಬಿಟ್ಟರೆ ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ. ವಿಧಾನ ಸಭೆಯಲ್ಲಿ ಯಾವುದೇ ಚರ್ಚೆಯಾಗಲಿಲ್ಲ. ಬದಲಿಗೆ, ವಾಲ್ಮೀಕಿ ನಿಗಮದ ಹಗರಣ ಮತ್ತು ಮುಡಾ ಹಗರಣದ ಬಿಟ್ಟರೆ ಬೇರೆಯಾವುದೇ ಚರ್ಚೆಯಗಲಿಲ್ಲ. ಸೌಜನ್ಯಕ್ಕಾದರೂ ನೆರೆ ಹಾವಳಿ ಕುರಿತು ಚರ್ಚೆ ಮಾಡದಿರುವುದು ರಾಜ್ಯದ ಜನತೆಯ ರಾಜಕೀಯ ದುರಂತವೇ ಸರಿ ಎಂದು ದೂರಿದರು.

ನೆರೆಹಾವಳಿಯಿಂದ ಉಂಟಾದ ರೈತರ ಬೆಳೆ, ಆಸ್ತಿಪಾಸ್ತಿಗಳಿಗೆ ಉಂಟಾದ ನಷ್ಟವನ್ನು ಅಂದಾಜಿಸಿ, ಪರಿಹಾರಗಳನ್ನು ಘೋಷಿಸಬೇಕು. ನೆರೆ ಹಾವಳಿಯಲ್ಲಿ ಜೀವ ಕಳೆದುಕೊಂಡ ಕುಟುಂಬಗಳಿಗೆ ತಕ್ಷಣವೇ ಪರಿಹಾರ ನೀಡಬೇಕು. ಸಕ್ಕರೆ ಕಾರ್ಖಾನೆ ಆರಂಭಿಸಿ, ಈ ಭಾಗದ ರೈತರ ಸಮಸ್ಯೆಗಳನ್ನು ಪರಿಹರಿಸಬೇಕು. ವಕೀಲರಿಗೆ ಪೋಲೀಸರ ಕಿರುಕುಳದಿಂದ ರಕ್ಷಣೆ ಪಡೆಯುವ ದಿಸೆಯಲ್ಲಿ ವಕೀಲರ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಎ.ಕರುಣಾನಿಧಿ, ಕಟಗಿ ಜಂಬಯ್ಯ, ರಾಮಪ್ಪ, ಕಲ್ಯಾಣಯ್ಯ, ರಮೇಶ್, ಮರಿಸ್ವಾಮಿ, ಉಮಾ ಮಹೇಶ್ವರ, ಕೆ.ನಾಗರತ್ನಮ್ಮ, ಸೌದ ವಿರೂಪಾಕ್ಷ ಗೌಡ ಇತರರಿದ್ದರು.