ಜಿಲ್ಲೆ

ತಾಯಿ ಶೈಲಪುತ್ರಿಯ ಆರಾಧನೆ

ಮಂಜುನಾಥ

ಹೊಸಪೇಟೆ: ಶಾರದೀಯ ನವರಾತ್ರಿ ಬುಧವಾರದಿಂದ ಪ್ರಾರಂಭವಾದ್ದು, ಒಂಬತ್ತು ದಿನಗಳಲ್ಲಿ ಮಾತೃದೇವತೆಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ಆದ್ದರಿಂದ ಹಂಪಿ ವಿರೂಪಾಕ್ಷೇಶ್ವರ ದೇಗುದಲ್ಲಿನ ಪಂಪಾಬಿಕೆ ಹಾಗೂ ತಾಯಿ ಭುವನೇಶ್ವರಿ ದೇವಿ ಸೇರಿದಂತೆ ಜಿಲ್ಲೆಯಲ್ಲಿ ದೇವಿ ದೇಗುಲಗಳಲ್ಲಿ ತಾಯಿ ಶೈಲಪುತ್ರಿ ಅವತಾರದ ವಿಶೇಷ ಅಲಂಕಾರ ಹಾಗೂ ಪೂಜೆ ನಡೆಸಲಾಯಿತು.

ನವರಾತ್ರಿಯ ಮೊದಲ ದಿನವನ್ನು ತಾಯಿ ಶೈಲಪುತ್ರಿಗೆ ಸಮರ್ಪಿಸಲಾಗುತ್ತದೆ. ಶೈಲಪುತ್ರಿ ದೇವಿಯ ಆರಾಧನೆಯು ನವರಾತ್ರಿಯ ಮೊದಲ ದಿನದಂದು ಮಾತ್ರವಲ್ಲ, ಜೀವನದ ಪ್ರತಿಯೊಂದು ಸಂದರ್ಭದಲ್ಲೂ ಮುಖ್ಯವಾಗಿ ಮಾಡಬೇಕು. ತಾಯಿಯ ಆರಾಧನೆಯು ನಮಗೆ ತಾಳ್ಮೆ, ಧೈರ್ಯ ಮತ್ತು ಶಾಂತಿಯ ಮಾರ್ಗವನ್ನು ತೋರಿಸುತ್ತಾಳೆ. ದೇವಿಯ ಅನುಗ್ರಹದಿಂದ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಮತ್ತು ತೃಪ್ತಿಯನ್ನು ಪಡೆಯುತ್ತಾರೆ. ಶೈಲಪುತ್ರಿ ದೇವಿಯ ಹೆಸರು ಸ್ವತಃ ಶಕ್ತಿ ಮತ್ತು ಸಕಾರಾತ್ಮಕತೆಯ ಸಂಕೇತವಾಗಿದೆ ಮತ್ತು ದೇವಿಯನ್ನು ಪೂಜಿಸುವುದರಿಂದ ಅಪಾರ ಸಂತೋಷ ಮತ್ತು ಶಾಂತಿಗೆ ಪಾತ್ರರಾಗುತ್ತೆವೆ ಎಂಬ ನಂಬಿಕೆಯಿದೆ.